ಮಂಗಳೂರು : ಮಣ್ಣಗುಡ್ಡ ವಾರ್ಡಿನ ಗಾಂಧಿನಗರ ಸರಕಾರಿ ಶಾಲೆಯ ಬಳಿ ಫುಟ್ ಪಾತ್,ಚರಂಡಿ ರಚನೆಯ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.

ಲೇಡಿಹಿಲ್ ನಿಂದ ಸುಲ್ತಾನ್ ಬತ್ತೇರಿಗೆ ತೆರಳುವ ರಸ್ತೆಯ ಬದಿ ಚರಂಡಿ ನಿರ್ಮಾಣ ಹಾಗೂ ಪುಟ್ಪಾತ್ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಬಿಡುಗಡೆಯಾಗಿದ್ದು  ನಿನ್ನೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ್ದೇವೆ. ಮಳೆ ನೀರು ಹರಿದು ಹೋಗಲು ಚರಂಡಿ ನಿರ್ಮಾಣ ಹಾಗೂ ಪಾದಾಚಾರಿಗಳಿಗೆ ಫುಟ್ ಪಾತ್ ನಿರ್ಮಾಣವು ಒಳಗೊಂಡಿದೆ. ಸುಲ್ತಾನ್ ಬತ್ತೇರಿ ಪ್ರದೇಶವು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರವಾಸೀ ತಾಣವಾಗಿದೆ. ಪ್ರವಾಸೋದ್ಯಮಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಪ್ರವಾಸೀ ತಾಣಗಳನ್ನು ಅಭಿವೃದ್ಧಿಪಡಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಹಾಗೂ ಅಲ್ಲಿಗೆ ತೆರಳುವ ರಸ್ತೆ ಉತ್ತಮ ಗುಣಮಟ್ಟದಿಂದ ಆಕರ್ಷಣೀಯವಾಗಿರಬೇಕು ಎನ್ನುವ ಉದ್ಧೇಶದಿಂದ ಅನುದಾನ ಬಿಡುಗಡೆಗೊಳಿಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಅಭಿವೃದ್ಧಿಯ ನಿಟ್ಟಿನಲ್ಲಿ ಮಣ್ಣಗುಡ್ಡ ವಾರ್ಡ್ ಬಹಳಷ್ಟು ಮುಂದುವರೆದಿದೆ. ಮುಂದಿನ ಅವಧಿಯಲ್ಲಿ ಇಲ್ಲಿನ ಉಳಿದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಕಾರ್ಪೊರೇಟರ್ ಸಂಧ್ಯಾ ಮೋಹನ್ ಆಚಾರ್,ಲೀಲಾವತಿ ಪ್ರಕಾಶ್, ಬಿಜೆಪಿ ಮುಖಂಡರಾದ ಮೋಹನ್ ಆಚಾರ್, ರಾಧಾಕೃಷ್ಣ, ಮಹೇಶ್ ಕುಂದರ್, ಜಯಂತಿ ಆಚಾರ್,ಅಜಯ್ ಕುಲಶೇಖರ, ಗುರು ಚರಣ್, ಗೋಕುಲ್ ದಾಸ್ ಭಟ್,ವಸಂತ್ ಶೇಟ್, ಪುರುಷೋತ್ತಮ ಪ್ರಭು, ಜಯಂತಿ ಆಚಾರ್, ನವೀನ್ ಗಟ್ಟಿ, ರಾಜೇಂದ್ರ, ಸುಧೀರ್ ಬರ್ಕೆ, ಆನಂದ್ ರೈ, ಜಗನ್ನಾಥ್ ಮಲ್ಯ,ಸುರೇಂದ್ರ ಶ್ರೀಯಾನ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.