ಮಂಗಳೂರು:- "ಕರ್ನಾಟಕದಲ್ಲಿ ಒಂದು ಪ್ರಾದೇಶಿಕ ಪಕ್ಷವಾಗಿ - ಬೆಳೆಯಬೇಕೆಂಬ ಉದ್ದೇಶದಿಂದ ಕಳೆದ ಒಂದು ವರ್ಷಗಳಿಂದ ಸ್ವಚ್ಚ, ಪ್ರಾಮಾಣಿಕ, ಜನಪರ ರಾಜಕಾರಣಕ್ಕಾಗಿ ಮತ್ತು ಕರ್ನಾಟಕದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವ ಮನುಷ್ಯ ಘನತೆಯಿಂದ ವಾಸಿಸುವ ವಾತಾವರಣ ನಿರ್ಮಿಸುವ ಉದ್ದೇಶದಿಂದ ಸೆಪ್ಟೆಂಬರ್ 14 ರಿಂದ 3 ಹಂತಗಳಲ್ಲಿ  ಸುಮಾರು 2700 ಕಿ.ಮೀ ಸೈಕಲ್ ಯಾತ್ರೆ ನಡೆಯಲಿದ್ದು " ಚಲಿಸು ಕರ್ನಾಟಕ ಯಾತ್ರೆ" ಇಡೀ ಕರ್ನಾಟಕದಲ್ಲಿ ಸುತ್ತವರಿಯಲ್ಲಿದ್ದು, ಸೆಪ್ಟೆಂಬರ್ 14 ರಂದು ಕೋಲಾರದಲ್ಲಿ ಆರಂಭವಾಗಿ ನವೆಂಬರ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ" ಎಂದು ಕೆ.ಆರ್.ಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ ಅಮೃತ್ ಶೆಣೈ ತಿಳಿಸಿದ್ದಾರೆ.

"ಪ್ರಸ್ತುತ ವಿಶ್ವದಾದ್ಯಂತ ಕೊರೊನಾ ವೈರಸ್ ನಿಂದ ನಲಗುತ್ತಿದ್ದು ಕರ್ನಾಟಕದಲ್ಲಿ ಕೋವಿಡ್ 19 ನಿಂದ ಸರ್ಕಾರವೇ ಭೃಷ್ಟಾಚಾರದಲ್ಲಿ ಮುಳುಗಿದೆ. ಆಡಳಿತ ಮತ್ತು ಆರೋಗ್ಯ ವ್ಯವಸ್ಥೆಗಳು ಅದೋಗತಿಗೆ ತಲುಪಿದೆ. ಪ್ರತಿಯೊಂದರ ಮೇಲೂ ತೆರಿಗೆ ಕಟ್ಟಬೇಕಾಗುತ್ತದೆ. ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಉದ್ಯಮಗಳು ವ್ಯಾಪಾರ ವ್ಯವಹಾರ ಕುಂಟಿತವಾಗಿದೆ. ಇಂತಹ ಇನ್ನಿತರ ಅವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಸರಿಪಡಿಸಲು ಕೆ. ಆರ್.ಎಸ್ ಪಕ್ಷವನ್ನು ಬೆಂಬಲಿಸಿ" ಎಂದರು.

"3 ವರ್ಷಗಳ ಹಿಂದೆ ಕೊಲೆಯಾದ ವಿನಾಯಕ ಬಾಳಿಗ ಅವರ ಕುಟುಂಬಸ್ಥರಿಗೆ ಈಗಲೂ ಬೆದರಿಕೆ ಕರೆಗಳು ಬರುತ್ತಿದ್ದು ಅದರ ಜೊತೆ ಕೆ. ಆರ್. ಎಸ್ ಪಕ್ಷ ಇದ್ದು ಸೆಪ್ಟೆಂಬರ್ 3 ರಂದು 5 ಗಂಟೆಗೆ ಮಂಗಳೂರು ಪೋಲೀಸ್  ಕಮಿಶನರ್ ಭೇಟಿ ಮಾಡಿ ಈ ಪ್ರಕರಣವನ್ನು SIT ಗೆ ವರ್ಗಾಯಿಸುವಂತೆ ಕೋರಲಾಗುವುದು".

ಕೆ. ಆರ್. ಎಸ್ ಪಕ್ಷದ ಜಿಲ್ಲಾಧ್ಯಕ್ಷ ಅಲೆಗ್ಸಾಂಡರ್ ಡಿಸೋಜ ಮಾತನಾಡಿ "ಸ್ಥಳೀಯವಾಗಿ ಹಲವಾರು ಇಲಾಖೆಗಳು ಭ್ರಷ್ಟಾಚಾರದಿಂದ ಕೂಡಿದ್ದು ಮುಂದಿನ ದಿನಗಳಲ್ಲಿ ಕೆ.ಎರ್.ಎಸ್ ಪಕ್ಷ ಅಗತ್ಯವಾಗಿದ್ದು" ಇದನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ. 

ರಾಜ್ಯ ಅಲ್ಪಸಂಖ್ಯಾತ ಘಟಕದ ಜೆ.ಪಾವ್ಲ್ ಮೆಲ್ಕಿಜಾಡೆಕ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಹೆರಿ ಪ್ರವೀಣ್ ಕೊರೆಯಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಬಜಿಲಾಕೆರಿ, ಹಸನಬ್ಬ, ನವೀನ್, ಆಗಸ್ಟೀನ್, ಮೂಲ್ಕಿ ವಿಧಾನ ಸಭಾ ಕ್ಷೇತ್ರದ ಪ್ರಮುಖರಾದ ಸ್ಟೀವನ್ ಮತ್ತಿತರರು ಉಪಸ್ಥಿತರಿದ್ದರು.