ಮಂಗಳೂರು:- ಸ್ವರ್ಣಕಾರ ಸಂಘಟನೆಯ ಇತಿಹಾಸದಲ್ಲೇ ಮೊದಲಬಾರಿಗೆ, ಚಿನ್ನಬೆಳ್ಳಿ ಕುಶಲಕರ್ಮಿಗಳ ಸಹಾಯಕ್ಕಾಗಿ ಈ ರೀತಿಯ ಒಂದು ವೆಬ್ ಸೈಟ್ ಕರ್ನಾಟಕ ಸ್ವರ್ಣಕಾಲೆ ಸಂಘದ ವತಿಯಿಂದ ಅನಾವರಣಗೊಳ್ಳುತ್ತಿದೆ.ಇದರಲ್ಲಿ ಸ್ವರ್ಣಕಾರರು ತಮ್ಮ ಹೆಸರನ್ನು ನೊಂದಾಯಿಸಬಹುದಾಗಿದೆ. ಕರ್ನಾಟಕ ಸ್ವರ್ಣಕಾರ ಸಂಘದ ಹಾಗೂ ಅಖಿಲ ಭಾರತ ಸ್ವರ್ಣಕಾರ ಸಂಘದ ವಿವಿಧ ಚಟುವಟಿಕೆಗಳ ಮಾಹಿತಿ ಇದರಲ್ಲಿ ಲಭ್ಯವಾಗಲಿದೆ.ಮುಂದಿನ ಹೊಸಹೊಸ ಯೋಜನೆಗಳ ಪರಿಚಯವು ಇದರಲ್ಲಿ ಲಭ್ಯವಾಗಲಿದೆ. ಸರಕಾರದಿಂದ ಸಿಗುವ ಸವಲತ್ತುಗಳ ಹಾಗೂ ವಿವಿಧ ಯೋಜನೆಗಳ ಮಾಹಿತಿ ಇದರಲ್ಲಿ ಲಭ್ಯವಾಗಿರುತ್ತದೆ. ಕುಶಲಕರ್ಮಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸಲು ಇದು ಪರಿಣಾಮಕಾರಿ ಮಾಧ್ಯಮ ಅಗಲಿದೆ.
ಕರ್ನಾಟಕ ಸ್ವರ್ಣಕಾರ ಸಂಘದ ಉದ್ದೇಶಗಳು ಹಾಗೂ ಕಾರ್ಯ:
ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಈ ಅಸಂಘಟಿ ಕ್ಷೇತ್ರದ ಕುಶಲಕರ್ಮಿಗಳ ಡೇಟಾ (ಅಂಕಿಅಂಶಗಳನ್ನು) ತಿಳಿಯಪಡಿಸುವುದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ತಮ್ಮ ಸ್ವರ್ಣಕಾರರಿಗೆ ಸಿಗಬೇಕಾದ ಎಲ್ಲಾ ಸವಲತ್ತುಗಳನ್ನು ಹಕ್ಕೊತ್ತಾಯ ಹಾಗೂ ಹೋರಾಟಗಳ ಮುಖೇನ ಕಾರ್ಯಸಿದ್ದಿಗೊಳಿಸುವುದು, ಹಲವು ಯೋಜನೆಯನ್ನು ಹಾಕಿಕೊಂಡು ಸಂಕಷ್ಟದಲ್ಲಿರುವ ಬಡ ಸ್ವರ್ಣಕಾರರ ಜೀವನದಲ್ಲಿ ಬದಲಾವಣೆಯನ್ನು ತರುವುದು, ರಾಜ್ಯದ ಎಲ್ಲಾ ಸಂಘಟನೆಗಳ ಸಹಕಾರದಿಂದ ಸ್ವರ್ಣಕಾರರಲ್ಲಿ ಜಾಗೃತಿ ಮೂಡಿಸುವುದು, ಹೀಗೆ ಅನೇಕ ಕಾರ್ಯಯೋಜನೆಗಳು ತಮ್ಮ ಮುಂದಿದೆ.R. ರಾಮಮೂರ್ತಿ (ಅಧ್ಯಕ್ಷರು, ಕರ್ನಾಟಕ ಸ್ವರ್ಣಕಾರ ಸಂಘ), ವೇಣುಗೋಪಾಲ (ಜೊತೆ ಕಾರ್ಯದರ್ಶಿ ಕರ್ನಾಟಕ ಸ್ವರ್ಣಕಾರ ಸಂಘ),K.L. ಹರೀಶ್ (ಅಧ್ಯಕ್ಷರು, ದಕ್ಷಿಣ ಕನ್ನಡ ಚಿನ್ನದ ಕೆಲಸಗಾರರ ಸಂಘ, ಮಂಗಳೂರು), ಕಿಶೋರ್ R.(ಅಧ್ಯಕ್ಷರು, ಚಿನ್ನ-ಬೆಳ್ಳಿ ಕಲಸಗಾರರ ಸಂಘ, ಉಡುಪಿ),ಅರುಣ್ ಜಿ. ಶೇಟ್ (ಕುಶಲಕರ್ಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸದಸ್ಯರು, ಕರ್ನಾಟಕ ಸರಕಾರ),ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಂತೆಯೇ ಮಧುಸೂಧನ M.S, ಪ್ರಕಾಶ ಆಚಾರ್ಯ ಹಲೇಜಿ, ರಮೇಶ್ ಕುಮಾರ್, ಶ್ರೀಪಾದ ಬಿ. ರಾಯ್ಕರ್, ಪ್ರಶಾಂತ ಆಚಾರ್ಯ ಉಪಸ್ಥಿತರಿದ್ದರು.