ಮಂಗಳೂರು (ಸೆಪ್ಟೆಂಬರ್ 07):- 2020-21ನೇ ಸಾಲಿನಲ್ಲಿ ರಾಜ್ಯದಲ್ಲಿನ ಸರ್ಕಾರಿ, ಅನುದಾನಿತ, ಖಾಸಗಿ ಪಾಲಿಟೆಕ್ನಿಕ್‍ಗಳಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶ ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಅವಧಿಯನ್ನು ಸೆಪ್ಟೆಂಬರ್ 16 ರವರೆಗೆ ವಿಸ್ತರಿಸಲಾಗಿದೆ.

 ಅಭ್ಯರ್ಥಿಗಳು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್ https://dtek.karnataka.gov.in, https://dtetech.karnataka.gov.in/kartechnical   www.cetonline.karnataka.gov.in/kea/  ಗಳ ಮೂಲಕ ತಮಗೆ ಹತ್ತಿರದ ಸರ್ಕಾರಿ, ಅನುದಾನಿತ ಪಾಲಿಟೆಕ್ನಿಕ್‍ಗಳ ಸಹಾಯ ಕೇಂದ್ರಗಳಲ್ಲಿ ಪ್ರಥಮ ವರ್ಷದ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆಯ ಎರಡನೇ ಮುಂದುವರಿದ ಸುತ್ತಿನಲ್ಲಿ ಭಾಗವಹಿಸಲು ಆನ್-ಲೈನ್ ನಾನ್ ಇಂಟರಾಕ್ಟಿವ್ ಕೌನ್ಸಿಲ್ (ಆನ್‍ಲೈನ್ ಆಪ್ಷನ್ ಎಂಟ್ರಿ) ಮೂಲಕ  ಅರ್ಜಿ ಸಲ್ಲಿಸುವ ದಿನಾಂಕ ಸೆಪ್ಟೆಂಬರ್ 16 ರಂದು ಸಂಜೆ 5.30 ಗಂಟೆಯವರೆಗೆ ವಿಸ್ತರಿಸಲಾಗಿದೆ.

    ಅಭ್ಯರ್ಥಿಗಳು ಅರ್ಜಿಯೊಂದಿಗೆ ವಿವಿಧ ಪ್ರವರ್ಗಗಳ ಹಾಗೂ ವಿಶೇಷ ಮೀಸಲಾತಿಯಡಿ  ಸಂಬಂಧಪಟ್ಟ ದೃಢೀಕೃತ ದಾಖಲೆಗಳನ್ನು ಅಪ್‍ಲೋಡ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರವೇಶ ಪಡೆಯುವ ಪಾಲಿಟೆಕ್ನಿಕ್‍ಗಳಲ್ಲಿ ಪ್ರವೇಶ ಶುಲ್ಕ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಬೇಕು.  ಈ ಡಿಪ್ಲೊಮಾ ಪ್ರವೇಶ ಪ್ರಕ್ರಿಯೆಯ ಅಧಿಸೂಚನೆ ಮತ್ತು ವೇಳಾಪಟ್ಟಿಯನ್ನು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ವೆಬ್‍ಸೈಟ್ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‍ಸೈಟ್‍ನಿಂದ ಪಡೆಯಬಹುದು.  

ಹೆಚ್ಚಿನ ವಿವರ ಹಾಗೂ ಮಾಹಿತಿಗಾಗಿ ಪ್ರಾಂಶುಪಾಲರು, ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್, ಮಂಗಳೂರು, ಹಾಗೂ ಕಚೇರಿಯ ದೂರವಾಣಿ ಸಂಖ್ಯೆ: 0824-2211636 ಸಂಪರ್ಕಿಸಲು ಪ್ರಕಟಣೆ  ತಿಳಿಸಿದೆ.