ಮಂಗಳೂರು:ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ವಿಧಾನಪರಿಷತ್ತು ಸದಸ್ಯರಾದ  ಕೆ.ಹರೀಶ್ ಕುಮಾರ್‍ರವರ ಅಧ್ಯಕ್ಷತೆಯಲ್ಲಿ ‘ಪಂಪ್‍ವೆಲ್ ಫ್ಲೈ ಓವರ್ ಸತ್ಯಶೋಧನಾ ಸಮಿತಿ’ಯನ್ನು ರಚಿಸಲಾಗಿದ್ದು. ಬಿ.ರಮಾನಾಥ ರೈ, ಮಾಜಿ ಉಸ್ತುವಾರಿ ಸಚಿವರು , ಯು.ಟಿ ಖಾದರ್, ಮಾಜಿ ಉಸ್ತುವಾರಿ ಸಚಿವರು,  ಕೆ.ಅಭಯಚಂದ್ರ ಜೈನ್, ಮಾಜಿ ಸಚಿವರು , ಐವನ್ ಡಿ’ಸೋಜಾ, ವಿಧಾನಪರಿಷತ್ತು ಸದಸ್ಯರು ,ಜೆ.ಆರ್ ಲೋಬೋ, ಮಾಜಿ ಶಾಸಕರು .ಮೈೊ ದಿನ್‌ ಬಾವ, ಮಾಜಿ ಶಾಸಕರು,  ಎಂ.ಶಶಿಧರ್ ಹೆಗ್ಡೆ, ಮಾಜಿ ಮೇಯರ್ ಹಾಗೂ ಮ.ನ.ಪಾ ಸದಸ್ಯರು, ಜೆಸಿಂತಾ ವಿಜಯ ಆಲ್ಫ್ರೇಡ್, ಮಾಜಿ ಮೇಯರ್ ಹಾಗೂ ಮ.ನ.ಪಾ ಸದಸ್ಯರು , ಭಾಸ್ಕರ್ ಕೆ, ಮಾಜಿ ಮೇಯರ್ ಹಾಗೂ ಮ.ನ.ಪಾ ಸದಸ್ಯರು  , ನವೀನ್ ಡಿ’ಸೋಜಾ, ಮ.ನ.ಪಾ ಸದಸ್ಯರು, ಪ್ರವೀಣ್ ಚಂದ್ರ ಆಳ್ವ, ಮ.ನ.ಪಾ ಸದಸ್ಯರು,  ಅಬ್ದುಲ್ ರವೂಫ್, ಮ.ನ.ಪಾ ಸದಸ್ಯರು  ಸಮಿತಿಯ ಸದಸ್ಯರುಗಳಾಗಿರುತ್ತಾರೆ.

ದಿನಾಂಕ 21.12.2019ರಂದು ಇವರುಗಳು ಸಭೆ ಸೇರಿ ಪಂಪ್‍ವೆಲ್ ಫ್ಲೈ ಓವರ್‍ರನ್ನು ಪರಿಶೀಲನೆ ನಡೆಸಿ ವರದಿಯನ್ನು ಸಂಬಂಧಪಟ್ಟವರಿಗೆ ಸಲ್ಲಿಸಲಿರುವರು ಎಂದು ಜಿಲ್ಲಾ ಕಾಂಗ್ರೆಸ್‍ನ ಪ್ರಧಾನ ಕಾರ್ಯದರ್ಶಿ  ಶುಭೋದಯ ಆಳ್ವರವರು   ತಿಳಿಸಿದ್ದಾರೆ.