ಮಂಗಳೂರು : ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಗೌರವಾನ್ವಿತ ರಾಜ್ಯಪಾಲರಿಗೆ,ಕೆ.ಎಸ್ ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರು, ಇತ್ತೀಚಿನ  ಸಭೆಯೊಂದರಲ್ಲಿ  ಬಿ.ಜೆ.ಪಿಗೆ  ಓಟು  ಹಾಕದ  ಮುಸಲ್ಮಾನರೆಲ್ಲ ಪಾಕಿಸ್ಥಾನಿಯರೆಂದೂ,  ದೇಶದ್ರೋಹಿಗಳೆಂದೂ  ತಾನು  ಯಾವುದೇ  ವಿಧದಲ್ಲಿ ಮುಸ್ಲಿಮರ ಓಟು ಕೇಳಿಲ್ಲವೆಂದೂ, ಹಾಗೆ ಮುಸ್ಲಿಮರ ಓಟು ಪಡೆದು ಚುನಾಯಿತರಾದ ಶಾಸಕರೆಲ್ಲರೂ ದೇಶದ್ರೋಹಿಗಳೆಂದು ದೂಷಿಸಿ, ಕೋಮು ಕೋಮಿನ ನಡುವೆ ಹಾಗೂ ಜನರ ನಡುವೆ ದ್ವೇಷ ಬಿತ್ತಿದ್ದಲ್ಲದೆ, ತಾನು ಈ ಹಿಂದಿನ ಚುನಾವಣೆಗಳಲ್ಲಿ ಧರ್ಮದ ಆಧಾರಿತವಾಗಿ ಓಟು ಕೇಳಿ ಗೆದ್ದಿದ್ದೇನೆಂದೂ, ಮುಂದಕ್ಕೂ ಧರ್ಮದ ಆಧಾರದಲ್ಲೇ ಓಟು ಪಡೆಯುವುದಾಗಿ ಬೆದರಿಕೆ ಹಾಕಿರುತ್ತಾರೆ ಈ ಬಗ್ಗೆ ಕೂಡಲೇ ಎಸ್ ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವರು, ಕರ್ನಾಟಕ ಸರಕಾರ, ಬೆಂಗಳೂರು ಇವರನ್ನು ಸಂಪುಟದಿಂದ ಹಾಗೂ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವ ಬಗ್ಗೆ ಮನವಿ ಸಲ್ಲಿಸಲಾಯಿತು.