ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣೀಭೂತರಾದ ಮಹಾನ್ ರಾಜಕಾರಣಿ ದಿ.ಉಳ್ಳಾಲ ಶ್ರೀನಿವಾಸ ಮಲ್ಯರವರ 117 ನೇ ಜನ್ಮದಿನೋ ತ್ಸವವನ್ನು ನಂತೂರು ಪದವು ಸಮೀಪ ಇರುವ ದಿ. ಶ ಶ್ರೀನಿವಾಸ ಮಲ್ಯರ ಪ್ರತಿಮೆ ಬಳಿ ಆಚರಿಸಲಾಯಿತು. ಮಾಜಿ ಶಾಸಕರಾದ . ಜೆ. ಆರ್. ಲೋಬೊರವರು ಶ್ರೀನಿವಾಸ್ ಮಲ್ಯರವರ ಪ್ರತಿಮೆಗೆ ಹಾರರ್ಪಣೆ ಹಾಗೂ ಪುಷ್ಪರ್ಚನೆಗೈದು ಶ್ರೀನಿವಾಸ್ ಮಲ್ಯರು ಜಿಲ್ಲೆಗೆ ನೀಡಿದ ಕೊಡುಗೆಯನ್ನು ಸ್ಮರಿಸಿದರು.