ಮಂಗಳೂರು: ಮಾಜಿ ಸಚಿವರು ಹಾಗೂ ಶಾಸಕರಾದ  ತನ್ವೀರ್ ಸೇಠ್‍ರ ಮೇಲೆ ನಡೆದ ಕೊಲೆ ಯತ್ನವನ್ನು ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ವಿಧಾನಪರಿಷತ್ತು ಶಾಸಕರಾದ ಕೆ.ಹರೀಶ್ ಕುಮಾರ ರವರು ಮತ್ತು ಜಿಲ್ಲಾ ಕಾಂಗ್ರೆಸ್ ಸಮಿತಿಯು ಕೂಡಾ ಖಂಡಿಸಿರುತ್ತದೆ.

ಜನಪ್ರತಿನಿಧಿಗಳಿಗೆ ಸಮಾಜದಲ್ಲಿ ರಕ್ಷಣೆ ಇಲ್ಲದಿರುವಾಗ ಜನಸಾಮಾನ್ಯರಿಗೆ ಎಲ್ಲಿ ರಕ್ಷಣೆ ಇರುತ್ತದೆ ಎಂಬುದಾಗಿ ಹರೀಶ್ ಕುಮಾರ್‍ರವರು ಪ್ರಶ್ನಿಸಿರುವುದಲ್ಲದೇ, ಇದರ ಬಗ್ಗೆ ಸರ್ಕಾರ ಚಿಂತಿಸಬೇಕಾಗಿದ್ದು,  ತನ್ವೀರ್ ಸೇಠ್‍ರ ಹಲ್ಲೆಯ ಹಿಂದೆ ಯಾರಿದ್ದಾರೆ ಎಂದು ಕೂಲಂಕುಷವಾಗಿ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸರಕಾರವನ್ನು ಒತ್ತಾಯಿಸಿರುತ್ತಾರೆ. ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಯು ನಡೆಯದಂತೆ ಎಚ್ಚರ ವಹಿಸಬೇಕು ಎಂದು  ಕೆ.ಹರೀಶ್ ಕುಮಾರ್‍ರವರು ತಿಳಿಸಿರುತ್ತಾರೆ.