ಮಂಗಳೂರು (ಜುಲೈ 27):- ದ.ಕ. ಜಿಲ್ಲೆಯ ಮಂಗಳೂರಿನ ಪ್ರವರ್ಗ ಬಿ ಮತ್ತು ಸಿ ವರ್ಗದ 2020 ಜೂನ್ ತಿಂಗಳಲ್ಲಿ ಅವಧಿ ಮುಗಿದಿರುವ ಈ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾದಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

      ಅರ್ಜಿಯನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಅಂತಿಮ ದಿನಾಂಕ ಆಗಸ್ಟ್ 15 ರೊಳಗಾಗಿ ಸಹಾಯಕ ಆಯುಕ್ತರು, ಧಾರ್ಮಿಕ ದತ್ತಿ ಇಲಾಖೆ, ಮಂಗಳೂರು ಇವರಿಗೆ ಸಲ್ಲಿಸಬೇಕು.  ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಅರ್ಜಿ ನಮೂನೆಯು ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಶಾಖೆಯಲ್ಲಿ ಲಭ್ಯವಿರುತ್ತದೆ.

 ಮಂಗಳೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಬೊಡಂತಿಲ ಗ್ರಾಮದ ಶ್ರೀ ಮುಂಡಿತ್ತಾಯ ದೇವಸ್ಥಾನ, ಮಲ್ಲೂರು ಗ್ರಾಮದ ಶ್ರೀ ಈಶ್ವರ ದೇವಸ್ಥಾನ, ಬಂಡಿಕೊಟ್ಟಿಗೆ ಗ್ರಾಮದ  ಶ್ರೀ ಮಲರಾಯ ದೇವಸ್ಥಾನ, ತಿರುವೈಲು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮೊಗ್ರುಗುಡ್ಡೆ, ಕೆಂಜಾರು ಗ್ರಾಮದ ಶ್ರೀ ಮೋಗ್ರುಗುಡ್ಡೆ ಮಹಾದೇವ ದೇವಸ್ಥಾನ, ಕೊಂಪದವು ಗ್ರಾಮದ ಶ್ರೀ ಧೂಮಾವತಿ ದೈವಸ್ಥಾನ, ಮೂಳೂರು ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಬಾರ್ದಿಲ, ಕುಪ್ಪೆಪದವು ಗ್ರಾಮದ ಶ್ರೀ ಸಾಂಬಸದಾಶಿವ ದೇವಸ್ಥಾನ, ಪಡುಪೆರಾರ್ ಗ್ರಾಮದ ಶ್ರೀ ಶಾಸ್ತಾವು ಬ್ರಹ್ಮ ದೇವಸ್ಥಾನ.

 ಬಂಟ್ವಾಳ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಸಜಿಪ ಮುನ್ನೂರು ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಪೆರಾಜೆ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ ಪಡ್ನೂರು ಗ್ರಾಮದ ಶ್ರೀ ಕಾಪಿನಮಲರಾಯ ದೈವಸ್ಥಾನ.

 ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:- ಬೆಳಾಲು ಗ್ರಾಮದ ಶ್ರೀ ಮಾಯಾ ಮಹಾದೇವಿ ದೇವಸ್ಥಾನ.

  ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಬೈಲಂಗಡಿ, ತೋಟತ್ತಡಿ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಮಚ್ಚಿನ ಗ್ರಾಮದ ಶ್ರೀ ಮಸೂರು ಶಾಸ್ತಾವು ದೇವರು ದೇವಸ್ಥಾನ, ಸೋಣಂದೂರು ಗ್ರಮದ ಶ್ರೀ ಮುಂಡರಿ ಪಿಲಿಚಂಡಿ ದೇವಿ, ಪಾರಂಕಿ ಗ್ರಾಮದ ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನ, ಕಾಶಿಪಟ್ಣ ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ವೇಣೂರು ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ.

 ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಬಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಕ್ಯಾಮಣ ಗ್ರಾಮದ ಶ್ರೀ ಅಗಳಿ ಸದಾಶಿವ ದೇವಸ್ಥಾನ.

 ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಮಂಡೂರು ಗ್ರಾಮದ ಶ್ರೀ ಮೃತ್ಯುಂಜೇಶ್ವರ  ದೈವಸ್ಥಾನ, ಸವಣೂರು ಗ್ರಾಮದ ಶ್ರೀ ಮೊಗ್ರು ಕುಂಡಡ್ಕ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು ಗ್ರಾಮದ ಶ್ರೀ ಶಾಸ್ತವು ದೇವರು ದೇವಸ್ಥಾನ, ಸರ್ವೆ ಗ್ರಾಮದ ಶ್ರೀ ಸುಬ್ರಾಯ ದೇವಸ್ಥಾನ, ಬಲ್ನಾಡು ಗ್ರಾಮದ ಶ್ರೀ ಸಂಪ್ಯ ವಿಷ್ಣುಮೂರ್ತಿ ದೇವಸ್ಥಾನ, ಕುರಿಯ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕುರಿಯ ಗ್ರಾಮದ ಶ್ರೀ ಅಂಗಾಜ ವಿಷ್ಣುಮೂರ್ತಿ ದೇವಸ್ಥಾನ, ಮುಡ್ನೂರು ಗ್ರಾಮದ ಶ್ರೀ ಆಲಡ್ಕ ಸದಾಶಿವ ದೇವಸ್ಥಾನ, ಮುಡ್ನೂರು ಗ್ರಾಮದ ಶ್ರೀ ಕುಕ್ಕಿನಡ್ಕ ಸುಬ್ರಾಯ ದೇವಸ್ಥಾನ, ಕೋಳ್ತಿಗೆ ಗ್ರಾಮದ ಶ್ರೀ ಮಣಿಕಂಠ ವಿಷ್ಣುಮೂರ್ತಿ ದೇವಸ್ಥಾನ, ಚಾರ್ವಾಕ ಗ್ರಾಮದ ಶ್ರೀ  ಕುಂಟ್ಲಾಡಿ ಕುಕ್ಕೆನಾಥ ದೇವರು ದೇವಸ್ಥಾನ, ಶಾಂತಿಗೋಡು ಗ್ರಾಮದ ಮರಕ್ಕೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಶಾಂತಿಗೋಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ.

 ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-ಬಳ್ಪ ಗ್ರಾಮದ ಯಜ್ಞಮೂರ್ತಿ ದೇವಸ್ಥಾನ, ಮುರಳ್ಯ ಗ್ರಾಮದ ಶ್ರೀ ಪೊದೆ ವಿಷ್ಣುಮೂರ್ತಿ ದೇವಸ್ಥಾನ, ಬಳ್ಪ ಗ್ರಾಮದ ಶ್ರೀ ಸೋಲಾಡಿ ವಿಷ್ಣುಮೂರ್ತಿ ದೇವಸ್ಥಾನ, ಕೇನ್ಯ ಗ್ರಾಮದ ಶ್ರೀ ಬಟ್ರಪಾಡಿ ದೇವಸ್ಥಾನ, ಬಾಳುಗೋಡು ಗ್ರಾಮದ ಶ್ರೀ ಕಾಡುಮುಂಡೂರು ಉರಿಯಪ್ಪ ದೇವರು ದೇವಸ್ಥಾನ, ಕೊಲ್ಲಮೊಗ್ರು ಗ್ರಾಮದ ಶ್ರೀ ಕೊಚ್ಚಿಲ ಸುಬ್ರಹ್ಮಣ್ಯ ದೇವರು ದೇವಸ್ಥಾನ.  

  ಮರುಪ್ರಕಟಣೆ:- ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪ್ರವರ್ಗ ‘ಬಿ’ ಮತ್ತು ‘ಸಿ’ ವರ್ಗದ ಈ ಕೆಳಕಂಡ ಅಧಿಸೂಚಿತ ಸಂಸ್ಥೆಗಳಿಗೆ 9 ಸದಸ್ಯರಿರುವ ವ್ಯವಸ್ಥಾಪನಾ ಸಮಿತಿಯನ್ನು ರಚಿಸುವ ಸಲುವಾಗಿ ಆಸಕ್ತ ಭಕ್ತಾಧಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಪ್ರಕಟಣೆ ಹೊರಡಿಸಲಾದ ಒಟ್ಟು 129 ದೇವಸ್ಥಾನಗಳ ಪೈಕಿ ಈ ಕೆಳಗಿನ ದೇವಸ್ಥಾನಗಳಿಗೆ ಅವಶ್ಯವಿರುವ ಅರ್ಜಿಗಳನ್ನು ಸ್ವೀಕೃತವಾಗದೆ ಇರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ಆಹ್ವಾನಿಸುವ ಬಗ್ಗೆ ಮರುಪ್ರಕಟಣೆ ಹೊರಡಿಸಲಾಗಿದೆ.

   ಮರುಪ್ರಕಟಣೆಯನ್ವಯ ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ ಭರ್ತಿ ಮಾಡಿ ಆಗಸ್ಟ್ 15 ರೊಳಗಾಗಿ ಸಹಾಯಕ ಆಯುಕ್ತರ ಧಾರ್ಮಿಕ ದತ್ತಿ ಇಲಾಖೆ ಮಂಗಳೂರು  ಇಲ್ಲಿಗೆ ಸಲ್ಲಿಸಬೇಕು. ನಿಗಧಿತ ದಿನಾಂಕದ ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ನಿಗಧಿತ ಅರ್ಜಿ ನಮೂನೆಯು ಸಹಾಯಕ ಆಯುಕ್ತರು ಧಾರ್ಮಿಕ ದತ್ತಿ ಇಲಾಖೆ ಮಂಗಳೂರು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ಇಲಾಖೆಯಲ್ಲಿ ಲಭ್ಯವಿರುತ್ತದೆ.

 ಮಂಗಳೂರು ತಾಲೂಕಿನ ಪ್ರವರ್ಗ ‘ಬಿ’ ಗೆ ಸಂಬಂಧಪಟ್ಟ ದೇವಸ್ಥಾನಗಳ ವಿವರ ಇಂತಿವೆ:- ಕಳವಾರು ಗ್ರಾಮದ ಶ್ರೀ ಬೆಂಕಿನಾಥೇಶ್ವರ ದೇವಸ್ಥಾನ. ಮೂಡಬಿದ್ರಿ ಮಂಗಳೂರು ತಾಲೂಕಿನ ಪ್ರಾಂತ್ಯ ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನ, ಮಂಗಳೂರು ತಾಲೂಕಿನ ಕೊಳಂಬೆ ಗ್ರಾಮದ ಶ್ರೀ ಅಳಕಳ ವಿಶ್ವನಾಥ ದೇವಸ್ಥಾನ,  ಮಾಂಟ್ರಾಡಿ ಗ್ರಾಮದ ಶ್ರೀ ಪಡುಮಲೆ ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದ ಮತ್ತಾರು ಗುಳಿಗ ಪಂಜುರ್ಲಿ ದೈವಸ್ಥಾನ, ಕರ್ನಿರೆ ಗ್ರಾಮದ  ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮದ ಶ್ರೀ ವಿಶ್ವನಾಥೇಶ್ವರ ದೇವಸ್ಥಾನ, ಬಡಗ ಎಡಪದವು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕಂದಾವರ ಗ್ರಾಮದ ಶ್ರೀ ಮೂಡಕೇರಿ ಧೂಮಾವತಿ ದೈವಸ್ಥಾನ, ಕೊಣಾಜೆ ಗ್ರಾಮದ ಶ್ರೀ ಮುಂಡಿತ್ತಾಯ ದೈವಸ್ಥಾನ, ಮೂಳೂರು ಗ್ರಾಮದ ಪಂಜನ್‍ತ್ತಾಯ  ದೈವಸ್ಥಾನ, ಪಡುಶೆಡ್ಡೆ ಗ್ರಾಮದ  ಶ್ರೀ ವಿಜಿಲ್ನಾಯ ಭೂತಸ್ಥಾನ,  ಅಡ್ಯಾರು ಗ್ರಾಮದ ಶ್ರೀ ಮುಂಡಿತ್ತಾಯ  ದೈವಸ್ಥಾನ, ಕೊಲ್ಲೂರು ಏಳಿಂಜೆ ಗ್ರಾಮದ  ಶ್ರೀ ಮೂಕಾಂಬಿಕಾ ದೇವಸ್ಥಾನ, ಪ್ರಾಂತ್ಯ ಗ್ರಾಮದ ಶ್ರೀ ಚಂದ್ರ ಶೇಖರ  ದೇವಸ್ಥಾನ,  ಪ್ರಾಂತ್ಯ ಗ್ರಾಮದ ಶ್ರೀ ಗೌರಿ ದೇವಿ ದೇವಸ್ಥಾನ, ಕಿನ್ನಿಗೋಳಿ ಗ್ರಾಮದ ಶ್ರೀ ವೈದ್ಯನಾಥ ದೇವಸ್ಥಾನ, ಮೂಲ್ಕಿ ಗ್ರಾಮದ ವಡೇರಬೆಟ್ಟು, ಶ್ರೀ ಬೊಬ್ಬರ್ಯ ದೈವಸ್ಥಾನ, ಬಡಗಪದವು ಗ್ರಾಮದ  ಶ್ರೀ ಕಮಲೇಶ ಸೋಮನಾಥ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಪಂಚಮಹಲ್ ಸದಾಶಿವ ದೇವಸ್ಥಾನ , ಕುಂಜತ್‍ಬೈಲ್ ಗ್ರಾಮದ  ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಾನಂಪಾಡಿ ಗ್ರಾಮದ  ಶ್ರೀ ಶಂಕರನಾರಾಯಣ ದೇವಸ್ಥಾನ, ಮೋರ್ಕೋಡಿ, ಪೇಜಾವರ ಗ್ರಾಮದ   ಮಹಾಲಿಂಗೇಶ್ವರ ದೇವಸ್ಥಾನ, ಕೆಂಜಾರು ಗ್ರಾಮದ  ಶ್ರೀ ಮುಖ್ಯಪ್ರಾಣ ದೇವಸ್ಥಾನ ಕೆಂಜಾರು, ಕೆಲೆಂಜಾರು ಗ್ರಾಮದ  ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಉಳಾಯಿಬೆಟ್ಟು ಗ್ರಾಮದ ಶ್ರೀ ಸದಾಶಿವ  ದೇವಸ್ಥಾನ, ಕೊಳಂಬೆ ಗ್ರಾಮದ ಶ್ರೀ ನಾಗಬ್ರಹ್ಮ  ದೇವಸ್ಥಾನ, ಗುರುಪುರ ಗ್ರಾಮದ ಶ್ರೀ ದುಗಾರ್ಂಬಾ ದೇವಸ್ಥಾನ, ಐಕಳ ಗ್ರಾಮದ ಶ್ರೀ ಕೊಡಮಂತಾಯ ದೈವಸ್ಥಾನ, ಮೆನ್ನಬಟ್ಟು ಶ್ರೀ ಮೂರುಕಾವೇರಿ ಮಹಾಮ್ಮಾಯಿ ದೇವಿ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಹಳೆಕೋಟೆ ಹನುಮಂತ ದೇವಸ್ಥಾನ, ಕಾರ್ನಾಡು ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಡುಪಣಂಬೂರು ಗ್ರಾಮದ  ಶ್ರೀ ಅನಂತ ದೇವಸ್ಥಾನ, ಸಸಿಹಿತ್ಲು ಗ್ರಾಮದ  ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ಪುನರೂರು ವಿಶ್ವನಾಥ ದೇವಸ್ಥಾನ, ಶೀಮಂತೂರು ಗ್ರಾಮದ  ಶ್ರೀ ಬ್ರಹ್ಮಸ್ಥಾನ, ಶೀಮಂತೂರು ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ ಶ್ರೀ ಕರ್ನಿರೆ ಜನಾರ್ಧನ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ  ಶ್ರೀ ಕೊಲೆಕಾಡಿ ಶಾಸ್ತಾವೇಶ್ವರ ದೇವಸ್ಥಾನ, ಅತಿಕಾರಿಬೆಟ್ಟು ಗ್ರಾಮದ  ಶ್ರೀ ಧೂಮಾವತಿ ದೇವಿ ದೈವಸ್ಥಾನ, ಸುರತ್ಕಲ್ ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಇಡ್ಯಾ ಗ್ರಾಮದ ಶ್ರೀ ಅಬ್ಬಗ  ದೈವ ಭೂತ, ಪೆರ್ಮುದೆ ಗ್ರಾಮದ ಶ್ರೀ ವೆಂಕಟೇಶ್ವರ ದೇವಸ್ಥಾನ, ಪಣಂಬೂರು ಗ್ರಾಮದ ಶ್ರೀ ಬಲವೀಡು ವಿಷ್ಣುಮೂರ್ತಿ ದೇವಸ್ಥಾನ, ಪಣಂಬೂರು ಗ್ರಾಮದ  ಶ್ರೀ ಬಲವೀಡು ಮಲ್ಲಿಗೆ ಭೂತ, ಕೆಂಜಾರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕುತ್ತೆತ್ತೂರು ಗ್ರಾಮದ ಶ್ರೀ ಕಂಡಿಗೆ ಧರ್ಮಭೂತ  ದೇವಸ್ಥಾನ, ಕಾವೂರು ಗ್ರಾಮದ ಶ್ರೀ ಪಡುಕೋಡಿ ಧೂಮಾವತಿ ದೇವಿ ದೇವಸ್ಥಾನ , ಕಾವೂರು ಗ್ರಾಮದ  ಅರ್ತಿವಡಲು ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಕಾವೂರು ಗ್ರಾಮದ ಶ್ರೀ ಇಷ್ಟದೇವತಾ ಭೂತ ದೇವಸ್ಥಾನ, ತೋಕೂರು ಗ್ರಾಮದ ಶ್ರೀ ಮಹಾದೇವತಾ ದೇವಸ್ಥಾನ, ಮುಚ್ಚೂರು/ಮಚ್ಚಿನ ಗ್ರಾಮದ  ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಪಡುಪೆರಾರ್ ಗ್ರಾಮದ  ಶ್ರೀ ಹೆಂಜಾಡಿ ದೈವ ದೇವಸ್ಥಾನ, ಮೂಳೂರು ಗ್ರಾಮದ  ಶ್ರೀ ಜ್ಯಾರಿ ಬ್ರಹ್ಮದಾಯ ದೈವಸ್ಥಾನ, ಅರ್ಕುಳ ಗ್ರಾಮದ  ಶ್ರೀ ಮೊಗರಂತಾಯ ಭೂತ ದೇವಸ್ಥಾನ, ಮಂಗಳೂರು ಕಸಾಬಾ ಬಜಾರ್ ಗ್ರಾಮದ  ಶ್ರೀ ತ್ರಿಶೂಲೇಶ್ವರ ದೇವಸ್ಥಾನ, ಮಂಗಳೂರು ಕಸಾಬಾ ಗ್ರಾಮದ ಶ್ರೀ ವಾದಿರಾಜ ಗೋಪಾಲಕೃಷ್ಣ ದೇವಸ್ಥಾನ, ಮಂಗಳೂರು ಕಸಾಬಾ ಬಜಾರ್ ಗ್ರಾಮದ  ಶ್ರೀ ಕೆರೆಕಟ್ಟೆ ಹನುಮಂತ ದೇವಸ್ಥಾನ, ಮಂಗಳೂರು ಕಸಾಬಾ ಬಜಾರ್ ಗ್ರಾಮದ  ಶ್ರೀ ಶಾಂತೇಶ್ವರ ಸ್ವಾಮಿ ದೇವಸ್ಥಾನ, ಮಂಗಳೂರು ಕಸಾಬಾ ಬಜಾರ್ ಗ್ರಾಮದ  ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ,  ಮಂಗಳೂರು ಕದ್ರಿಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ, ಕರಂಗಲಪಾಡಿ, ಕಣ್ಣೂರು ಗ್ರಾಮದ ಶ್ರೀ ಮಂತ್ರದೈವ ದೈವಸ್ಥಾನ, ಅದ್ಯಪಾಡಿ ಗ್ರಾಮದ ಶ್ರೀ ಧೂಮಾವತಿ ದೇವಸ್ಥಾನ, ಕುಂಜತ್ ಬೈಲ್ ಗ್ರಾಮದ ಶ್ರೀ ಜನಾರ್ಧನ ದೇವಸ್ಥಾನ, ಅದ್ಯಪಾಡಿ ಗ್ರಾಮದ  ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನ, ತಿರುವೈಲು ಗ್ರಾಮದ  ಶ್ರೀ ಪಡುಮುಂಡಿತ್ತಾಯ ದೇವಸ್ಥಾನ, ತಿರುವೈಲು ಗ್ರಾಮದ ಶ್ರೀ ಪೆಮರ್ಂಕಿ ಮೈಲಾರ ದೇವಸ್ಥಾನ, ಉಳ್ಳಾಲ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನ, ಪಚ್ಚನಾಡಿ ಗ್ರಾಮದ ಶ್ರೀ ಬನಂದಲೆ ವಿಷ್ಣುಮೂರ್ತಿ ದೇವಸ್ಥಾನ,  ಬೈಕಂಪಾಡಿ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಮಂಗಳೂರು ಟೌನ್ ಶ್ರೀ ಕಲ್ಯಾಣಿ ಹನುಮಂತ ದೇವಸ್ಥಾನ, ಉಳಿಪಾಡಿ ಗ್ರಾಮದ  ಶ್ರೀ ಉಮಾಮಹೇಶ್ವರ  ದೇವಸ್ಥಾನ, ಬಳ್ಳುಂಜೆ ಗ್ರಾಮದ ಶ್ರೀ ರಾಜನ್ ದೈವ ಧೂಮಾವತಿ ದೇವಿ ದೈವಸ್ಥಾನ,  ದೇಲಂತಬೆಟ್ಟು ಗ್ರಾಮದ ಶ್ರೀ ಕಯ್ಯಾರು ಬ್ರಹ್ಮ ದೇವಸ್ಥಾನ, ಮೂಳೂರು ಗ್ರಾಮದ  ಶ್ರೀ ಸೋಮನಾಥ ದೇವಸ್ಥಾನ, ಹರೇಕಳ ಗ್ರಾಮದ ಶ್ರೀ ಧೂಮಾವತಿ ದೇವಿ ದೈವಸ್ಥಾನ, ಹರೇಕಳ ಗ್ರಾಮದ  ಶ್ರೀ ಮುಂಡಿತ್ತಾಯ ದೈವಸ್ಥಾನ, ಹರೇಕಳ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಹೊಸಬೆಟ್ಟು ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಇರ್ವತ್ತೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನ, ಕಣ್ಣೂರು ಗ್ರಾಮದ  ಶ್ರೀ ಮಂಚಿ ದೇವತಾ ದೇವಸ್ಥಾನ, ಕಿಲ್ಪಾಡಿ ಗ್ರಾಮದ  ಶ್ರೀ ವಿಶ್ವನಾಥ ದೇವಸ್ಥಾನ, ಕಿಲ್ಪಾಡಿ ಗ್ರಾಮದ ಶ್ರೀ ಕುಮಾರ ಮಂಗಿಲ ಸುಬ್ರಾಯ ದೇವಸ್ಥಾನ,  ಕಿಲ್ಪಾಡಿ ಗ್ರಾಮದ ಶ್ರೀ ಹನುಮಂತ ದೇವಸ್ಥಾನ, ಕೊಡಿಯಾಲ್‍ಬೈಲ್ ಗ್ರಾಮದ  ಶ್ರೀ ನೆಲ್ಲಿಕಾಯಿ ಹನುಮಂತ ದೇವಸ್ಥಾನ, ಪಾಲಡ್ಕ ಗ್ರಾಮದ ಶ್ರೀ ದತ್ತಾತ್ರೇಯ ದೇವಸ್ಥಾನ, ಧರೆಗುಡ್ಡೆ ಗ್ರಾಮದ  ಶ್ರೀ ಮಹಾಗಣಪತಿ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ಸೂರ್ಯನಾರಾಯಣ ದೇವಸ್ಥಾನ, ಪುತ್ತಿಗೆ ಗ್ರಾಮದ ಶ್ರೀ ರಾಮಚಂದ್ರ ದೇವಸ್ಥಾನ,  ಕಲ್ಲಮುಂಡ್ಕೂರು ಗ್ರಾಮದ  ಶ್ರೀ ಕೊಂತ್ರಪಾಡಿ ಬ್ರಹ್ಮ ದೇವಸ್ಥಾನ, ಪುಚ್ಚೆಮೊಗರು ಗ್ರಾಮದ  ಶ್ರೀ ಇಷ್ಟದೇವತಾ ದೇವಸ್ಥಾನ, ಪಡುಮಾರ್ನಾಡು ಗ್ರಾಮದ ಶ್ರೀ ಬಸ್ತಿ ಗೋಪಾಲಕೃಷ್ಣ ದೇವಸ್ಥಾನ, ಧರೆಗುಡ್ಡೆ ಗ್ರಾಮದ ಶ್ರೀ ಕಲ್ಲಪುತ್ತಿಗೆ ಸೂರ್ಯನಾರಾಯಣ ದೇವಸ್ಥಾನ, ಧರೆಗುಡ್ಡೆ ಗ್ರಾಮದ  ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಧರೆಗುಡ್ಡೆ ಮೂಡುಗುಡ್ಡೆ ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ಪಡುಮಾರ್ನಾಡು ಗ್ರಾಮದ ಶ್ರೀ ಚಂದ್ರಶೇಖರ ದೇವಸ್ಥಾನ, ಪುತ್ತಿಗೆ ಗ್ರಾಮದ  ಶ್ರೀ ದೈವಂತಿ ದೇವಸ್ಥಾನ,  ಪಡುಮಾರ್ನಾಡು ಗ್ರಾಮದ  ಶ್ರೀ ಕೊಡಮಂತ್ತಾಯ ದೇವಸ್ಥಾನ, ಶಿರ್ತಾಡಿ ಗ್ರಾಮದ  ಶ್ರೀ ಕದಿರು ದೈವಸ್ಥಾನ, ಸೋಮೇಶ್ವರ ಗ್ರಾಮದ ಉಳ್ಳಾಲ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಬಪ್ಪನಾಡು ಗ್ರಾಮದ ಶ್ರೀ ಕೋಟೆಕೇರಿ ಅನಂತೇಶ್ವರ ದೇವಸ್ಥಾನ, ಕುತೆತ್ತೂರು ಗ್ರಾಮದ ಶ್ರೀ ಜಾರಂದಬೀಡು ಧೂಮಾವತಿ ದೇವಿ ದೇವಸ್ಥಾನ ಕುತೆತ್ತೂರು

 ಬಟ್ವಾಳ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವರ ಇಂತಿವೆ:- ಪಂಜಿಕಲ್ಲು ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ವಕ್ಕೆತ್ತೂರು ಗ್ರಾಮದ ಶ್ರೀ ಮಲರಾಯ ದೈವಸ್ಥಾನ, ಚೆನ್ನೈತೋಡಿ ಗ್ರಾಮದ ಶ್ರೀ ಕರಿಮಲೆ  ಧೂಮಾವತಿ ದೈವಸ್ಥಾನ, ನಾವೂರು ಗ್ರಾಮದ ಶ್ರೀ ಸೋಮನಾಥ ದೇವಸ್ಥಾನ, ಅಗ್ರಹಾರ ನಾವೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ನಾವೂರು ಗ್ರಾಮದ ಶ್ರೀ ವೀರಭದ್ರ ಮತ್ತು ವಿಶ್ವನಾಥ ದೇವಸ್ಥಾನ, ನರಿಕೊಂಬು ಗ್ರಾಮದ  ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ವಿಟ್ಲ ಗ್ರಾಮದ ಶ್ರೀ ಅರ್ಕುಳ ಗುಳಿಯಾಮ್ಮ ದೇವಿ ದೇವಸ್ಥಾನ, ಬೋಳಂತೂರು ಗ್ರಾಮದ

ಶ್ರೀ ದಿನ್‍ತ್ತಾಯ ಮತ್ತು ಮೂವರು ದೈವಗಳು, ಚೆನೈತೋಡಿ ಗ್ರಾಮದ  ಶ್ರೀ ಜುಮಾದಿ ದೈವಸ್ಥಾನ, ಕೊಲ್ನಾಡು ಗ್ರಾಮದ ಶ್ರೀ ನರಸಿಂಹ ದೇವಸ್ಥಾನ,  ನೆಟ್ಲಮುಡ್ನೂರು ಗ್ರಾಮದ ಶ್ರೀ ಕರ್ನಿಕ ದೇವಸ್ಥಾನ,  ಮಂಚಿ ಗ್ರಾಮದ ಶ್ರೀ ಸೀತಾ ಮಾಧವ ದೇವಸ್ಥಾನ,  ಬಂಟ್ವಾಳ ಗ್ರಾಮದ ಶ್ರೀ ಪಂಜುರ್ಲಿ ಮತ್ತು ಪಿಲಿಚಾಮುಂಡಿ ದೇವಿ, ಪೆರಾಜೆ ಗ್ರಾಮದ  ಗುಡ್ಡೆ ಚಾಮುಂಡಿ ದೇವಿ, ಪೆದಮಲೆ ಗ್ರಾಮದ  ಶ್ರೀ ಮಹಾಲಿಂಗೇಶ್ವರ ದೇವಸ್ಥಾನ,   ಅರಳ ಗ್ರಾಮದ ಶ್ರೀ ಗರುಡ ಮಹಾಲಕ್ಷ್ಮೀ ದೇವಸ್ಥಾನ, ಅರಳ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ, ಬಡ್ಡಕಟ್ಟೆ ಗ್ರಾಮದ ಶ್ರೀ ಕಲ್ಲುರ್ಟಿ ದೈವಸ್ಥಾನ,  ನಾವೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಿ , ಕಾವಳಕಟ್ಟೆ ಗ್ರಾಮದ ಶ್ರೀ ಕೊಡಮಂತ್ತಾಯ ದೈವಸ್ಥಾನ,  ಕಾವಳಮುಡ್ನೂರು ಗ್ರಾಮದ  ಶ್ರೀ ನರಿಕೊಂಬು ವಿಷ್ಣುಮೂರ್ತಿ ದೇವಸ್ಥಾನ, ಶಂಭೂರು ಗ್ರಾಮದ  ಶ್ರೀ ಮಳಿಗೇರಿ ಇಷ್ಟದೇವತಾ ದೇವಸ್ಥಾನ, ತುಂಬೆ ಗ್ರಾಮದ ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ, ವಿಟ್ಲ ಗ್ರಾಮದ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನ (ಹೊಸ ಸೇರ್ಪಡೆ), ಕೇಪು ಗ್ರಾಮದ  ಶ್ರೀ ಸುಬ್ರಾಯ ದೇವಸ್ಥಾನ (ಹೊಸ ಸೇರ್ಪಡೆ),  ಕೇಪು  ಗ್ರಾಮದ   ಶ್ರೀ ಧೂಮಾವತಿ ದೈವಸ್ಥಾನ (ಹೊಸ ಸೇರ್ಪಡೆ),  ಕುಂಡಡ್ಕ ಗ್ರಾಮದ ಶ್ರೀ ವಿಷ್ಣುಮೂರ್ತಿ ದೇವಸ್ಥಾನ (ಹೊಸ ಸೇರ್ಪಡೆ),  ವಿಟ್ಲ ಗ್ರಾಮದ ಶ್ರೀ ವೆಂಕಟ್ರಮಣ ಮತ್ತು ಪಡ್ನೂರು ವೆಂಕಟ್ರಮಣ ದೇವಸ್ಥಾನ (ಹೊಸ ಸೇರ್ಪಡೆ),  ವಿಟ್ಲ ಗ್ರಾಮದ ಶ್ರೀ ಜಠಾಧಾರಿ ದೇವರು ದೇವಸ್ಥಾನ (ಹೊಸ ಸೇರ್ಪಡೆ), ಕನ್ಯಾನ ಗ್ರಾಮದ ಶ್ರೀ ಬೈದ್ಯಾರಿ ಭಟ್ಟಾಣ್ಣಾಯ ದೇವಸ್ಥಾನ (ಹೊಸ ಸೇರ್ಪಡೆ),  ವಕ್ಕೆತ್ತೂರು ಗ್ರಾಮದ ಶ್ರೀ ಉಮಾಮಹೇಶ್ವರಿ  ದೇವಸ್ಥಾನ (ಹೊಸ ಸೇರ್ಪಡೆ), ವಿಟ್ಲ ಗ್ರಾಮದ ಶ್ರೀ ಕಾಶಿ ವಿಶ್ವೇಶ್ವರ ದೇವಸ್ಥಾನ (ಹೊಸ ಸೇರ್ಪಡೆ), ಯೆರುಂಬು ಗ್ರಾಮದ ಶ್ರೀ ವಿಷ್ಣುಮಂಗಲ ವಿಷ್ಣುಮೂರ್ತಿ ದೇವಸ್ಥಾನ.

 ಪುತ್ತೂರು ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:- ಇಂಚ್ಲಪಾಡಿ ಗ್ರಾಮದ ಶ್ರೀ ಬೀಡಿನ ದೈವಗಳ ದೇವಸ್ಥಾನ, ಕುತ್ರುಪಾಡಿ ಗ್ರಾಮದ  ಶ್ರೀ ತಲೇಕಿ ಶ್ರೀನಿವಾಸ ದೇವಸ್ಥಾನ, ರಾಮಕುಂಜ ಗ್ರಾಮದ ಶ್ರೀ ದಂಡತೀರ್ಥ ಹನುಮಂತ ದೇವಸ್ಥಾನ, ಅಲಂತಾಯ ಗ್ರಾಮದ ಶ್ರೀ ಪೆರ್ಲ ಷಣ್ಮುಖ ಹನುಮಂತ ದೇವಸ್ಥಾನ, ನೂಜಿ ಬಾಳ್ತಿಲ ಗ್ರಾಮದ  ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕುಟ್ರುಪಾಡಿ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕೊಂಬಾರು ಗ್ರಾಮದ  ಶ್ರೀ ಸುಬ್ರಹ್ಮಣ್ಯ ಷಣ್ಮುಖ ನರಸಿಂಹ ದೇವಸ್ಥಾನ, ಬಿಳಿನೆಲೆ ಗ್ರಾಮದ  ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಐತೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಐತೂರು ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕೋಡಿಂಬಾಳ ಗ್ರಾಮದ  ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಕಡಬ ಗ್ರಾಮದ ಶ್ರೀ ಸುಬ್ರಹ್ಮಣ್ಯ ಸುಬ್ರಾಯ ದೇವಸ್ಥಾನ, ಪಡುವನ್ನೂರು ಗ್ರಾಮದ  ಶ್ರೀ ಪಡುಮಲೆ  ಶಾಸ್ತಾವು ದೇವಸ್ಥಾನ, ನೆಟ್ಟಣಿಗೆ ಗ್ರಾಮದ ಶ್ರೀ ಮೂಡ್ನೂರು ಮಂಡ್ಯ ಶಾಸ್ತರ ದೇವಸ್ಥಾನ, ಚಾರ್ವಾಕ ಗ್ರಾಮದ ಶ್ರೀ ಸದಾಶಿವ ಜೋಡು  ದೇವರು ದೇವಸ್ಥಾನ, ಸರವು ಗ್ರಾಮದ ಸರವು  ಸುಬ್ರಹ್ಮಣ್ಯ ದೇವಸ್ಥಾನ, ಪುತ್ತೂರು ಗ್ರಾಮದ ಶಾಸ್ತವು ಸುಬ್ರಾಯ ದೇವಸ್ಥಾನ, ಮರ್ದಾಳ ಬಂಟ ಗ್ರಾಮದ  ಶ್ರೀ ಮಹಾಲಿಂಗೇಶ್ವರ  ದೇವಸ್ಥಾನ, ಮುನ್ನೂರು ಗ್ರಾಮದ ಶ್ರೀ  ಶಾಸ್ತವು ದೇವಸ್ಥಾನ, ಬಲ್ನಾಡು ಗ್ರಾಮದ  ಶ್ರೀ ಬಿಳಿಯೂರು ವೆಂಕಟ್ರಮಣ  ದೇವಸ್ಥಾನ, ಮುಂಡೂರು ಗ್ರಾಮದ ಶ್ರೀ ಸದಾಶಿವ ದೇವಸ್ಥಾನ, ಪಡುಮಲೆ ಗ್ರಾಮದ  ಶ್ರೀ ಕೂವೆ ವಿಷ್ಣುಮೂರ್ತಿ ದೇವಸ್ಥಾನ, ಪಿಜಕಳ ಪುತ್ತೂರು  ಗ್ರಾಮದ ಶ್ರೀ ಸದಾಶಿವ ದೇವಸ್ಥಾನ.

ಬೆಳ್ತಂಗಡಿ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:- ಮುಡ್ನೂರು ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನ, ಮುಂಡತ್ತೋಡಿ ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಉಜಿರೆ, ಇಂದಬೆಟ್ಟು ಗ್ರಾಮದ  ಶ್ರೀ ಚಾರ್ಮಡಿ ಇಷ್ಟದೇವತಾ ದೇವಸ್ಥಾನ, ನಿಡ್ಲೆ ಗ್ರಾಮದ ಶ್ರೀ ಪಾತಾಳೋತ್ಸವ ಜಾತಾರು ಭೂತ, ಕೊಕ್ಕಡ ಗ್ರಾಮದ  ಶ್ರೀ ಪುತ್ತಿಗೆ ವಿಷ್ಣುಮೂರ್ತಿ ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ ಶ್ರೀ ಬ್ರಹ್ಮದೇವರು ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ  ಶ್ರೀ ನರಸಿಂಹ ದೇವಸ್ಥಾನ, ಗುಂಡೂರು ಗ್ರಾಮದ ಶ್ರೀ ಕುಂಜಾಡಿ ವಿಷ್ಣುಮೂರ್ತಿ ದೇವಸ್ಥಾನ, ಹೊಸಂಗಡಿ ಗ್ರಾಮದ  ಶ್ರೀ ಕೋರಂಗಲ ಗೋಪಾಲಕೃಷ್ಣ ದೇವಸ್ಥಾನ, ದೇಲಂತಬೆಟ್ಟು ಗ್ರಾಮದ ಶ್ರೀ ಮುಂಡೂರು ದುರ್ಗಾದೇವಿ ದೇವಸ್ಥಾನ, ಮೇಲಂತಬೆಟ್ಟು ಗ್ರಾಮದ ಶ್ರೀ ನಾಗಬ್ರಹ್ಮ ದೇವಸ್ಥಾನ, ವೇಣೂರು ಗ್ರಾಮದ  ಶ್ರೀ ಪ್ರಕಾರ ಜನಾರ್ಧನ ದೇವಸ್ಥಾನ, ಕಾಶಿಪಟ್ಣ ಗ್ರಾಮದ  ಶ್ರೀ ನಿಡ್ಲಾ ಅನಂತೇಶ್ವರ ದೇವಸ್ಥಾನ, ಕಾಶಿಪಟ್ಣ ಗ್ರಾಮದ ಶ್ರೀ ಅನಂತೇಶ್ವರ ದೇವಸ್ಥಾನ, ನಾಡ ಗ್ರಾಮದ ಶ್ರೀ ಸೂರ್ಯ ದೇವಸ್ಥಾನ, ಲೈಲಾ ಗ್ರಾಮದ  ಶ್ರೀ ದುರ್ಗಾಪರಮೇಶ್ವರಿ ದೇವಿ, ಇಂದಬೆಟ್ಟು ಗ್ರಾಮದ ಚಾರ್ಮಾಡಿ ಶ್ರೀ ಇಷ್ಟದೇವತಾ ದೇವಸ್ಥಾನ, ಅತ್ರಿಜಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ , ಅಳದಂಗಡಿ ಗ್ರಾಮದ ಶ್ರೀ ಬಡಗಕಾರಂದೂರು ಸೋಮನಾಥ ದೇವಸ್ಥಾನ, ಕೊೈಲ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ.

 ಸುಳ್ಯ ತಾಲೂಕಿಗೆ ಸಂಬಂಧಪಟ್ಟ ಪ್ರವರ್ಗ ‘ಸಿ’ ಪಟ್ಟಿಯ ದೇವಸ್ಥಾನಗಳ ವಿವಿರ ಇಂತಿವೆ:-  ಕುಕ್ಕುನ್ನೂರ ಜಾಲ್ಸೂರು ಗ್ರಾಮದ ಶ್ರೀ ಕಿನ್ನಿಮಾಣಿ ಪೂಮಾಣಿ ದೈವಸ್ಥಾನ, ಏಣೆಕಲ್ಲು ಗ್ರಾಮದ ಶ್ರೀ  ಬಚ್ಚನಾಯಕ ದೇವಸ್ಥಾನ, ಬೆಳ್ಳಾರೆ ಗ್ರಾಮದ ಶ್ರೀ ಪನ್ನೆಭೂತ ದೈವಸ್ಥಾನ, ಬಳ್ಪ ಗ್ರಾಮದ  ಶ್ರೀ ಸದಾಶಿವ ದೇವಸ್ಥಾನ, ಹರಿಹರ ಪಲ್ಲತಡ್ಕ ಗ್ರಾಮದ ಶ್ರೀ ಗಣಪತಿ ದೇವರು ದೇವಸ್ಥಾನ, ಆರಂತೋಡು ಗ್ರಾಮದ  ಶ್ರೀ ತೋಡಿಕಾನ ಮಲ್ಲಿಕಾರ್ಜುನ ದೇವಸ್ಥಾನ, ಅಲೆಟ್ಟಿ ಗ್ರಾಮದ  ಶ್ರೀ ಇಡ್ಯಡ್ಕ ಕ್ಷೇತ್ರಪಾಲ ದೇವರು, ಅಜ್ಜಾವರ ಗ್ರಾಮದ  ಶ್ರೀ ಮುಳ್ಯ ವಿನಾಯಕ ದೇವಸ್ಥಾನ, ಅಜ್ಜಾವರ ಗ್ರಾಮದ  ಶ್ರೀ ತುದಿಯಡ್ಕ ಸದಾಶಿವ ದೇವರು, ಮಂಡೆಕೋಲು ಗ್ರಾಮದ ಶ್ರೀ ಅಲೆಟ್ಟಿ ವಿಷ್ಣುಮೂರ್ತಿ ದೇವಸ್ಥಾನ, ಸುಬ್ರಹ್ಮಣ್ಯ ಗ್ರಾಮದ ಶ್ರೀ ಜಾರಿ ಬ್ರಹ್ಮದಾಯ ಸುಬ್ರಹ್ಮಣ್ಯ ದೇವರು, ಅಜ್ಜಾವರ ಗ್ರಾಮದ ಶ್ರೀ ಬೆಟ್ಟಮಾನ್ಯ ಉಳಿಯ  ಬೈಪಾಡಿತ್ತಾಯ ದೇವರು, ಪಂಬೆತ್ತಾಡಿ ಗ್ರಾಮದ ಶ್ರೀ ವಿನಾಯಕ ದೇವಸ್ಥಾನ, ಗೋಳಿಕಟ್ಟೆ,  ನಾಲ್ಕೂರು ಗ್ರಾಮದ  ಶ್ರೀ ಕಾಳದುರ್ಗಾದೇವಿ ದೇವಸ್ಥಾನ, ಪಡ್ನೂರು ಗ್ರಾಮದ ಶ್ರೀ ಮಳಿಯಾಳಿ ಭೂತ, ಎಡಮಂಗಲ ಗ್ರಾಮದ ನೂಜಿಲ ಗೋಪಾಲಕೃಷ್ಣ ದೇವಸ್ಥಾನ, ಎಡಮಂಗಲ ಗ್ರಾಮದ ನೂಜಿಲ ರಾಮಚಂದ್ರ ದೇವಸ್ಥಾನ ಎಂದು ಹಿಂದೂ ಮತ್ತು  ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್, ಮಂಗಳೂರು ಹಾಗೂ ಸಹಾಯಕ ಆಯುಕ್ತರು ಪದನಿಮಿತ್ತ ಕಾರ್ಯದರ್ಶಿಗಳ ಪ್ರಕಟಣೆ ತಿಳಿಸಿದೆ.