ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಪೋಲೀಸ್ ಇಲಾಖೆಗೆ ಸೇರಿದ ಹಳೆಯ ಹಾಗೂ ನಿರುಪಯುಕ್ತಗೊಳಿಸಲಾದ 13 ವಾಹನವನ್ನು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಜೂನ್ 25 ರಂದು ಬೆಳಿಗ್ಗೆ 11 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಆವರಣದಲ್ಲಿ ಬಹಿರಂಗ ಹರಾಜು ನಡೆಸಲಾಗುವುದು.
ಹರಾಜು ಮಾಡುವ ವಾಹನಗಳ ವಿವರ ಇಂತಿವೆ: ಕೆ.ಎ.19ಜಿ 8785 ಮಾರುತಿ ಓಮಿನಿ ಮಾದರಿ 1996, ಕೆ.ಎ19ಜಿ.305 ಸ್ರರಾಜ್ ಮಜ್ದಾ ವ್ಯಾನ್, ಮಾದರಿ 2005, ಕೆ.ಎ.19ಜಿ 296 ಯಮಹಾ ಮೋಟರ್ ಸೈಕಲ್ ಮಾದರಿ 2004, ಕೆ.ಎ.19ಜಿ 347 ಟಿವಿಡ್ ಮೋಟಾರ್ ಸೈಕಲ್ ಮಾದರಿ 2008, ಕೆ.ಎ.19ಜಿ 383 ಅಂಬಾಸಿಡರ್ ಕಾರ್ ಮಾದರಿ 2007, ಕೆ.ಎ.19ಜಿ 8445 ಸ್ವರಾಜ್ ಮಜ್ದಾ ವ್ಯಾನ್ ಮಾದರಿ 2001, ಕೆ.ಎ.19ಜಿ 172 ಬಜಾಜ್ ಮೋಟಾರ್ ಸೈಕಲ್ ಮಾದರಿ 1997, ಕೆ.ಎ.19ಜಿ 327 ಟಿವಿಎಸ್ ಮೋಟಾರ್ ಸೈಕಲ್ ಮಾದರಿ 2006, ಕೆ.ಎ.19ಜಿ 195 ಟಾಟಾಸುಮೋ, ಮಾದರಿ 1999, ಕೆ.ಎ.19ಜಿ 301 ಟೆಂಪೋ ಟ್ರಾವಲರ್ ಮಾದರಿ 2004, ಕೆ.ಎ.19ಜಿ 254 ಟಿವಿಎಸ್ ಫಿಯಾರೋ ಮಾದರಿ 2002, ಕೆ.ಎ.19ಜಿ 242 ಯಮಹಾ ವೈಬಿಎಕ್ಸ್ 125 ಮಾದರಿ 2005.
ಹರಾಜು ವಾಹನಗಳನ್ನು ಡಿಎಆರ್ ಕಚೇರಿ ಆವರಣದಲ್ಲಿಡಲಾಗಿದೆ. ಟೆಂಡರ್ ಅರ್ಜಿ ಸಲ್ಲಿಸಲು ಜೂನ್ 24 ರಂದು ಸಂಜೆ 5 ಗಂಟೆಯ ಕೊನೆಯ ದಿನವಾಗಿದೆ ಹೆಚ್ಚಿನ ಮಾಹಿತಿಗಾಗಿ ದಕ್ಷಿಣ ಕನ್ನಡ ಜಿಲ್ಲೆ ಪೋಲೀಸು ಅಧೀಕ್ಷಕ ಕಚೇರಿ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.