ಮಂಗಳೂರು (ಆಗಸ್ಟ್ 21):-ಅಖಿಲ ಭಾರತ ಬಿ.ಎಸ್.ಎನ್.ಎಲ್. ಪಿಂಚಣಿದಾರರ ಕ್ಷೇಮಾಭಿವೃದ್ಧಿ ಅಸೋಸಿಯೇಶನ್ ಇದರ 11ನೇ ವರ್ಷದ ಸಮಾರಂಭವನ್ನು ಸರಳ ರೀತಿಯಲ್ಲಿ ಆಗಸ್ಟ್ 20 ರಂದು ಬಿ.ಎಸ್.ಎನ್.ಎಲ್. ಕೇಂದ್ರಕಚೇರಿಯಲ್ಲಿ ನಡೆಸಲಾಯಿತು.
ಈ ಸಂದರ್ಭ ದಕ್ಷಣ ಕನ್ನಡ ಜಿಲ್ಲಾ ಟೆಲಿಕಾಂ ವೃತ್ತದ ಜನರಲ್ ಮ್ಯಾನೇಜರ್ ಆಗಿ ನೇಮಕಗೊಂಡಿರುವ ಎ.ಎಸ್. ಸುಕುಮಾರನ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ಜನರಲ್ ಮ್ಯಾನೇಜರ್ ಮಾತನಾಡಿ ಬಿ.ಎಸ್.ಎನ್.ಎಲ್. ಗ್ರಾಹಕರಿಗೆ ಮೊಬೈಲ್ ಮತ್ತು ಫೈಬರ್ ಸೇವೆಯಲ್ಲಿ ಯಾವುದೇ ತೊಂದರೆಯಾಗದ ರೀತಿಯಲ್ಲಿ ಅಧಿಕಾರಿ ವರ್ಗದವರನ್ನು ಮತ್ತು ಸಿಬ್ಬಂದಿ ವರ್ಗದವರ ಜೊತೆ ಸೇರಿ ಸೇವೆ ನೀಡುವುದಾಗಿ ತಿಳಿಸಿದರು. ಬಿ.ಎಸ್.ಎನ್.ಎಲ್. ಉತ್ಪಾದನೆಯನ್ನು ಮಾರಾಟ ಮಾಡುವ ಅಂಗಡಿಗಳಿಗೆ ಕ್ಲಪ್ತ ಸಮಯದಲ್ಲಿ ಸಹಕಾರ ನೀಡಲು ಅಧಿಕಾರಿಗಳಿಗೆ ತಿಳಿಸುವುದಾಗಿ ಹೇಳಿದರು. ಬಿ.ಎಸ್.ಎನ್.ಎಲ್. ಪುನಶ್ಚೇತನದ ಬಗ್ಗೆ ಪಿಂಚಣಿದಾರರ ಸಂಪೂರ್ಣ ಸಹಕಾರ ನೀಡುವಂತೆ ವಿನಂತಿಸಿದರು.
ಬಿ.ಎಸ್.ಎನ್.ಎಲ್. ಉಳಿಸುವಲ್ಲಿ ಪಿಂಚಣಿದಾರರಾದ ನಾವು ಕೂಡಾ ಸಹಕಾರ ನೀಡುತ್ತೇವೆಂದು ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಸೋಸಿಯೇಶನ್‍ನ ಜಿಲ್ಲಾ ಅಧ್ಯಕ್ಷ ಎಚ್.ರಾಮಕೃಷ್ಣ, ಜಿಲ್ಲಾ ಕಾರ್ಯದರ್ಶಿ ಕೆ.ಚಂದ್ರಮೋಹನ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೋಹನ, ರಾಜ್ಯದ ಉಪಾಧ್ಯಕ್ಷ ಅನಿಲ್ ಕುಮಾರ್ ಹಾಗೂ ಬಿ.ಶ್ರೀನಿವಾಸ, ಕೆ.ಶಶಿಕಲಾ, ಮೋಲಿ ಮಿರಾಂಡ ಉಪಸ್ಥಿತರಿದ್ದರು.