ಮಂಗಳೂರು (ಆಗಸ್ಟ್ 21):-ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಂಕಣಿ ಭಾಷೆಗೆ ಸಾಂವಿಧಾನಿಕ ಮಾನ್ಯತೆ ದೊರೆತೆ ಸವಿನೆನಪಿಗಾಗಿ “ಕೊಂಕಣಿ ಮಾನ್ಯತಾ ದಿನಾಚರಣೆ” ಕಾರ್ಯಕ್ರಮವನ್ನು ನಗರದ ಉರ್ವಾ, ದೈವಜ್ಞಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಪ್ರತಾಪಸಿಂಹ ನಾಯಕ್, ಶಾಂತರಾಮ ಸಿದ್ದಿ, ದೈವಜ್ಞ ಬ್ರಾಹ್ಮಣ ಸಂಘದ ಅಧ್ಯಕ್ಷ ಸುಧಾಕರ ಶೇಟ್ ಭಾಗವಹಿಸಿದ್ದರು.

 2019 ನೇ ಸಾಲಿನ ಕೊಂಕಣಿ ಅಧ್ಯಯನ ವಿಭಾಗದಲ್ಲಿಡಾ ಪಿಯುಸ್ ಫಿದಲಿಸ್ ಪಿಂಟೊ ಅವರಿಗೆ ಪುಸ್ತಕ ಪುರಸ್ಕಾರ ನೀಡಿ ಗೌರವಿಸಲಾಯಿತು. ಅಕಾಡೆಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ಸ್ವಾಗತಿಸಿದರು.  ಕಾರ್ಯಕ್ರಮದಲ್ಲಿ ಅಕಾಡೆಮಿ ರಿಜಿಸ್ಟ್ರಾರ್ ಕುಮಾರ್ ಬಾಬು ಬೆಕ್ಕೇರಿ, ಸದಸ್ಯರಾದ ಅರುಣ್ ಜಿ ಶೇಟ್, ಕೆನ್ಯೂಟ್‍ಜೀವನ್ ಪಿಂಟೊ, ನರಸಿಂಹ ಕಾಮತ್, ಗೋಪಾಲ ಕೃಷ್ಣ ಭಟ್, ನವೀನ್ ನಾಯಕ್, ಪೂರ್ಣಿಮಾ ಮತ್ತಿತರರು ಉಪಸ್ಥಿತರಿದ್ದರು.