ಮಂಗಳೂರು (ಆಗಸ್ಟ್ 21):- ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಿಂದ 2020-21ನೇ ಸಾಲಿನಲ್ಲಿ ಸಾಲ ಸೌಲಭ್ಯಅರ್ಜಿಆಹ್ವಾನಿಸಲಾಗಿದೆ.

   ಸಾಮಾನ್ಯ ಅರ್ಹತೆಗಳು: ನಿಗಮದ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲುಇಚ್ಛಿಸುವವರು ¸ ವಿಶ್ವಕರ್ಮ ಸಮುದಾಯ ಹಾಗೂ ಅದರ ಉಪ ಜಾತಿಗಳಿಗೆ ಸೇರಿರಬೇಕು. ಗಂಗಾ ಕಲ್ಯಾಣಯೋಜನೆಯಲ್ಲಿ ನೀರಾವರಿ ಸೌಲಭ್ಯ ಪಡೆಯಲುಅರ್ಜಿದಾರರರು ಸಣ್ಣ ಮತ್ತುಅತಿ ಸಣ್ಣರೈತರಾಗಿರಬೇಕು ಹಾಗೂ ಒಂದೇಕಡೆ ಹೊಂದಿಕೊಂಡಿರುವಂತೆ ಕನಿಷ್ಠ 2ಎಕರೆ ಹಾಗೂಗರಿಷ್ಠ 5 ಎಕರೆಜಮೀನು ಹೊಂದಿರಬೇಕು.(ಉತ್ತರಕನ್ನಡ, ದಕ್ಷಿಣಕನ್ನಡ, ಕೊಡಗು, ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆಜಮೀನು ಹೊಂದಿರಬೇಕು).ವಯೋಮಿತಿ 18 ವರ್ಷಗಳಿಂದ 55 ವರ್ಷಗಳ ಮಿತಿಯಲ್ಲಿರಬೇಕು.

ರಾಜ್ಯ ಸರ್ಕಾರದ ಯೋಜನೆಗಳ ವಿವರಇಂತಿವೆ: ಪಂಚವೃತ್ತಿಅಭಿವೃದ್ದಿಗಾಗಿಆರ್ಥಿಕ ನೆರವು. ಸ್ವಯಂಉದ್ಯೋಗ ನೇರಸಾಲ ಯೋಜನೆ.ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂಉದ್ಯೋಗ ಸಾಲ.ಅರಿವು-ಶೈಕ್ಷಣಿಕ ಸಾಲ ಯೋಜನೆ.ಗಂಗಾ ಕಲ್ಯಾಣ ವೈಯಕ್ತಿಕ ನೀರಾವರಿಯೋಜನೆ. ಮಹಿಳೆಯರಿಗೆ ಮೈಕ್ರೋಕ್ರೆಡಿಟ್ ಸಾಲ ಯೋಜನೆ. ಕಮ್ಮಾರಿಕೆ, ಅಕ್ಕಸಾಲಿ ಮತ್ತು ಬಡಗಿ ಉದ್ಯಮಿಗಳಿಗೆ ತರಬೇತಿ ಮತ್ತು ಸಾಲ ಯೋಜನೆ.ರಾಜ್ಯ ಸರ್ಕಾರದ ಯೋಜನೆಗಳಿಗೆ ಕುಟುಂಬದ ವಾರ್ಷಿಕ ವರಮಾನವುಗ್ರಾಮಾಂತರ ಪ್ರದೇಶದವರಿಗೆ ರೂ.40,000ಗಳಿಗಿಂತ ಹಾಗೂ ಪಟ್ಟಣಪ್ರದೇಶದವರಿಗೆ ರೂ.55,000 ಗಳಿಗಿಂತ ಕಡಿಮೆಇರಬೇಕು. (ಅರಿವುಯೋಜನೆಗೆ ವಾರ್ಷಿಕ ವರಮಾನವು ರೂ.3.50ಲಕ್ಷಗಳ ಮಿತಿಇರಬೇಕು).

ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದಜಿಲ್ಲಾ ವ್ಯವಸ್ಥಾಪಕರಕಚೇರಿಯಲ್ಲಿಅರ್ಜಿ ಪಡೆಯಲುಕೊನೆಯಆಗಸ್ಟ್ 31  ಕೊನೆಯಾಗಿದ್ದು,  ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಪೆಂಬರ್ 16 ರೊಳಗಾಗಿ ಜಿಲ್ಲೆಯ ಡಿ. ದೇವರಾಜಅರಸು ಹಿಂದುಳಿದ ವರ್ಗಗಳ ಅಭಿವೃದ್ದಿ ನಿಗಮದಜಿಲ್ಲಾ ವ್ಯವಸ್ಥಾಪಕರಕಚೇರಿ, ಉರ್ವಸ್ಟೋರ್, ಮಂಗಳೂರು ಇಲ್ಲಿ ಸಲ್ಲಿಸಬೇಕು.ನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.

   ಹೆಚ್ಚಿನ ಮಾಹಿತಿಗಾಗಿದೂರವಾಣಿ ಸಂಖ್ಯೆ:0824-2456544 ರನ್ನು ಸಂಪರ್ಕಿಸುವಂತೆಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಜಿಲ್ಲಾ ವ್ಯವಸ್ಥಾಪಕ ಪ್ರಕಟಣೆ ತಿಳಿಸಿದೆ.