ಮಂಗಳೂರು: ಅರೆ ವೈದ್ಯಕೀಯ, ನರ್ಸಿಂಗ್ ಮತ್ತು ಫಿಸಿಯೋಥೆರಪಿ ಸಿಬ್ಬಂದಿಗಳ ತರಬೇತಿಯಲ್ಲಿ ಮುಂಚೂಣಿಯಲ್ಲಿರುವ ಮಂಗಳೂರಿನ ಮಂಗಳಾ ಸಮೂಹ ಸಂಸ್ಥೆ ತನ್ನ ನಾನಾ ಕೋರ್ಸ್‍ಗಳಿಗೆ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆಯನ್ನು ಆರಂಭಿಸಿದೆ.

ಪಾರಾ ಮೆಡಿಕಲ್ ಕೋರ್ಸ್, ನರ್ಸಿಂಗ್ ಕೋರ್ಸ್, ಪದವಿ ಕೋರ್ಸ್ ಹಾಗೂ ಬ್ಯಾಚುರಲ್ ಆಫ್ ಫಿಸಿಯೋಥೆರಪಿ ಕೋರ್ಸ್‍ನ ಪ್ರವೇಶ ಪ್ರಕ್ರಿಯೆ ಆರಂಭಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಡಾ. ಗಣಪತಿ ಪಿ. ತಿಳಿಸಿದ್ದಾರೆ.

ಪಿಯುಸಿ ಹಾಗೂ ಎಸ್‍ಎಸ್‍ಎಲ್‍ಸಿ ಕಲಿತರಿಗಾಗಿ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಡಿಎಂಎಲ್‍ಟಿ), ಮೆಡಿಕಲ್ ಎಕ್ಸ್‍ರೇ ಟೆಕ್ನಾಲಜಿ (ಡಿಎಂಐಟಿ), ಡಯಾಲಿಸಿಸ್ ಟೆಕ್ನಾಲಜಿ (ಡಿಡಿಟಿ), ಮೆಡಿಕಲ್ ರೆಕಾಡ್ರ್ಸ್ (ಡಿಎಂಟಿಆರ್‍ಟಿ), ಅಪರೇಷನ್ ಥಿಯೇಟರ್ ಟೆಕ್ನಾಲಜಿ (ಡಿಒಟಿಟಿ), ಆಫ್ತಾಲ್ಮಿಕ್ ಟೆಕ್ನಾಲಜಿ (ಡಿಒಟಿ), ಹೆಲ್ತ್ ಇನ್ಸ್‍ಪೆಕ್ಟರ್ (ಡಿಎಚ್‍ಐ) ಕೋರ್ಸ್‍ಗಳು ಮಾತ್ರವಲ್ಲದೆ ಯಾವುದೇ ವಿಷಯಗಳಲ್ಲಿ ಪಿಯುಸಿ ಅಥವಾ ಪ್ಲಸ್ 2 ಪಾಸಾದವರು ಜಿಎನ್‍ಎಂ ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡಬಹುದು. ವಿಜ್ಞಾನ ವಿಷಯಗಳಲ್ಲಿ ಪ್ಲಸ್ 2 ಅಥವಾ ಪಿಯುಸಿ ಪಾಸಾದವರಿಗಾಗಿ ನರ್ಸಿಂಗ್‍ನಲ್ಲಿ 4 ವರ್ಷಗಳ ನರ್ಸಿಂಗ್ ಪದವಿ (ಬಿಎಸ್‍ಸಿ ನರ್ಸಿಂಗ್)ಯನ್ನು ನ್ಯೂ ಮಂಗಳಾ ಕಾಲೇಜ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಪಡೆಯಬಹುದು.

ವಿಜ್ಞಾನ ವಿಷಯಗಳಲ್ಲಿ ಅಥವಾ ಪಿಯುಸಿ ಕಲಿತವರಿಗಾಗಿ ಪದವಿ ಕೋರ್ಸ್‍ಗಳಾದ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ (ಬಿಎಸ್ಸಿಎಂಎಲ್‍ಟಿ), ಮೆಡಿಕಲ್ ಎಕ್ಸ್‍ರೆ ಟೆಕ್ನಾಲಜಿ (ಬಿಎಸ್ಸಿಎಂಐಟಿ), ಡಯಾಲಿಸಿಸ್ ಟೆಕ್ನಾಲಜಿ (ಬಿಎಸ್ಸಿ ಆರ್‍ಡಿಟಿ), ಅಪರೇಶನ್ ಥಿಯೇಟರ್ ಟೆಕ್ನಾಲಜಿ (ಬಿಎಸ್ಸಿ ಒಟಿಟಿ) ಆಪ್ಟೊಮೆಟ್ರಿ (ಬಿಎಸ್ಸಿ ಆಪ್ಟೋಮೆಟ್ರಿ), ಅನಸ್ತೇಶಿಯಾ ಟೆಕ್ನಾಲಜಿ (ಬಿಎಸ್ಸಿ ಅನಸ್ತೇಶಿಯಾ) ಕೋರ್ಸ್ ವ್ಯಾಸಂಗ ಮಾಡಬಹುದು.

ವಿದ್ಯಾರ್ಥಿಗಳಿಗೆ ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಾತ್ರವಲ್ಲದೆ ತನ್ನ ಸ್ವಂತ ಆಸ್ಪತ್ರೆಯಾದ ಮಂಗಳಾ ಆಸ್ಪತ್ರೆ ಮತ್ತು ಮಂಗಳಾ ಕಿಡ್ನಿ ಫೌಂಡೇಶನ್‍ನಲ್ಲಿ ಅಲ್ಲದೆ ನಗರದ ಇತರ ಅತ್ಯುತ್ತಮ ವೈದ್ಯಕೀಯ ಸಂಸ್ಥೆಗಳಲ್ಲಿ ಪ್ರಾತ್ಯಕ್ಷಿಕೆ, ತರಬೇತಿ ನೀಡಲಾಗುತ್ತದೆ.

ಈ ಸಂಸ್ಥೆಯು ಪ್ರತಿ ವರ್ಷವೂ ರಾಜ್ಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಗಳಿಸಿ ಪ್ಯಾರಾ ಮೆಡಿಕಲ್ ಕಾಲೇಜುಗಳ ಪೈಕಿ ಅತ್ಯುತ್ತಮ ಸಂಸ್ಥೆ ಎಂಬ ಹೆಸರಿಗೆ ಪಾತ್ರವಾಗಿದೆ.  ಮಾಹಿತಿಗಾಗಿ ಸಂಸ್ಥೆಗೆ ಭೇಟಿ ನೀಡಬಹುದು ಅಥವಾ ವೆಬ್‍ಸೈಟ್ http://mangalacollege.org  ನೋಡಬಹುದಾಗಿದೆ ಎಂದು ಡಾ. ಗಣಪತಿ ಪಿ. ತಿಳಿಸಿದ್ದಾರೆ.  

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ ಡಾ. ಧರ್ಮರಾಜ್ ಫೋನ್ : 9449599233, ಶ್ರೀನಾಥ್ ಆಚಾರ್ಯ ಫೋನ್ : 9632124717.