ಮಂಗಳೂರು: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ನಲ್ಲಿ ಪೊಲೀಸರು ಇಬ್ಬರು ಯುವಕರನ್ನು ಕೊಂದಿರುವ ಘಟನೆಯು ಜಿಲ್ಲೆಯ ಜನತೆಯಲ್ಲಿ ತೀವ್ರ ಕಳವಳ ಆತಂಕ ಹಾಗೂ ಅಭದ್ರತೆಯನ್ನು ಮೂಡಿಸಿದೆ. ದೇಶದ ಸಂವಿಧಾನಬದ್ಧ ಮೂಲಭೂತ ಹಕ್ಕಾಗಿರುವ ವಾಕ್‍ಸ್ವಾತಂತ್ರ ಹಾಗೂ ಪ್ರತಿಭಟನಾ ಸ್ವಾತಂತ್ರವನ್ನು ಹತ್ತಿಕ್ಕುವ ಸಲುವಾಗಿ ಮಂಗಳೂರು ನಗರ ಹಾಗೂ ಜಿಲ್ಲೆಯಾದ್ಯಂತ ಸೆಕ್ಷನ್ 144 ನಿರ್ಭಂಧಕಾಜ್ಞೆಯನ್ನು ಪೊಲೀಸರು ಜಾರಿಗೊಳಿಸಿದ್ದರು. ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರದಲ್ಲಿ ಇದೇ ರೀತಿ ನಿರ್ಭಂಧಕಾಜ್ಞೆಗಳನ್ನು ಜಾರಿಗೊಳಿಸಲಾಗಿತ್ತಾದರೂ ಎಲ್ಲೂ ಪೊಲೀಸರಿಂದ ದೌರ್ಜನ್ಯಗಳಾಗಲೀ ಅತಿರೇಕದ ವರ್ತನೆಗಳಾಗಲೀ ವರದಿಯಾಗಿಲ್ಲ. ಆದರೆ ಮಂಗಳೂರು ನಗರದ ಪೊಲೀಸರಿಂದ ಭಯಾನಕತೆ ಹಾಗೂ ಉಗ್ರ ನಡವಳಿಕೆ ಇಬ್ಬರು ಯುವಕರ ಜೀವವನ್ನು ಬಲಿತೆಗೆದುಕೊಂಡು ಅವರ ಕುಟುಂಬವನ್ನು ಅತಂತ್ರಗೊಳಿಸಿದೆಯಲ್ಲದೆ ಜಿಲ್ಲೆಯ ಶಾಂತಿ ಹಾಗೂ ನೆಮ್ಮದಿಯನ್ನು ಕದಡಿದೆ. ಹಾಗೂ ಜಿಲ್ಲೆಗೆ ಕೆಟ್ಟ ಹೆಸರನ್ನು ತಂದಿದೆ.
CAB/CAA ಹಾಗೂ NRC ಬಗ್ಗೆ ಪ್ರತಿಭಟನಾ ಕಾರ್ಯಕ್ರಮಕ್ಕಾಗಿ ನಗರದ ಪೊಲೀಸ್ ಕಮಿಷನರ್ ರಿಂದ ಅನುಮತಿ ನಿರಾಕರಿಸುತ್ತಾ ಹಾಗೂ ಪ್ರತಿಭಟನೆ ನಡೆಸಿದರೆ ಗಲಾಟೆಯಾಗುತ್ತದೆ ಎಂದು ಹೇಳುತ್ತಾ ಬಂದಿರುತ್ತಾರೆ. ತಾ-19/12/2019 ರಂದು ಮಂಗಳೂರಿನಲ್ಲಿ ಪ್ರತಿಭಟನಾ ಸಭೆ ಇದೆಯೆಂದು ಸಂಘಟಯೊಂದು ತಯಾರಿ ನಡೆಸುತ್ತಿತ್ತು. ಇದಕ್ಕಾಗಿ ಪೊಲೀಸ್ ಕಮಿಷನರ್ ಅನುಮತಿ ನೀಡಿದ್ದಾದರೂ ತಾ 18-12-2019 ರಂದು ಸಾಯಂಕಾಲ ಸೆಕ್ಷನ್ 144 ಘೋಷಣೆ ಮಾಡಿರುತ್ತಾರೆ. ಪ್ರತಿಬಂಧಕ ಆಜ್ಞೆಯನ್ನು ಅರಿಯದ ಸುಮಾರು 100-150 ಜನರು 19 ಡಿಸಂಬರ್ ರಂದು ಪ್ರತಿಭಟನೆ ಇದೆಯೆಂದೇ ಭಾವಿಸಿ ನಗರಕ್ಕೆ ಬಂದಿದ್ದರು. ಹಾಗಾಗಿ ಪ್ರತಿಭಟನೆಗೆಂದೇ ಬಂದವರು, ದೈನಂದಿನ ವ್ಯಾಪಾರ - ವಹಿವಾಟು, ಕಾಲೇಜು, ಕಛೇರಿಗಾಗಿ ಬಂದವರು ಕೂಡಾ ಸ್ಟೇಟ್ ಬ್ಯಾಂಕ್ ಪರಿಸರದಲ್ಲಿದ್ದರು.
ಈ ರೀತಿ ಬಂದವರೆಲ್ಲರ ಮೇಲೆ ಯಾವುದೇ ಪ್ರಚೋದನೆಯಿಲ್ಲದೆ ಪೊಲೀಸರು ಏಕಾಏಕಿ ಲಾಠಿಚಾರ್ಜ್ ಮಾಡಿದ್ದಾರೆ, ತೀವ್ರವಾಗಿ ಥಳಿಸಿದ್ದಾರೆ, ಜನ ದಿಕ್ಕಾಪಾಲಾಗಿ ಓಡಿದ್ದಾರೆ, ಪೊಲೀಸರು ಅಂಗಡಿಗಳಿಗೆ, ಬಸ್ಸುಗಳಿಗೆ ನುಗ್ಗಿ ಹೊಡೆದಿದ್ದಾರೆ, ಮಹಿಳೆಯರು ಮಕ್ಕಳನ್ನು ಎಳೆದಾಡಿದ್ದಾರೆ, ವ್ಯಾಪಾರ, ಖರೀದಿಗಾಗಿ ಬಂದ ಜನರು, ಕಾಲೇಜಿಗಾಗಿ ಬಂದ ವಿದ್ಯಾರ್ಥಿಗಳನ್ನು ಬಿಡದೆ ಥಳಿಸಿದ್ದಾರೆ, ಹಲವರು ಗಾಯಗೊಂಡಿದ್ದಾರೆ, ಪತ್ರಕರ್ತರು ತಮ್ಮ ಗುರುತು ಪತ್ರವನ್ನು ತೋರಿಸಿದ ನಂತರವೂ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಜನರನ್ನು ಕಂದಕ್, ಬಂದರು ಪ್ರದೇಶದ ಗಲ್ಲಿಗಳವರೆಗೂ ಓಡಿಸಿದ್ದಾರೆ, ಓಡಿಕೊಂಡು ಹೋಗುತ್ತಿರುವ ಜನರ ಮೇಲೆ ಪೋಲಿಸರು ಗುಂಡು ಹಾರಿಸಿದ್ದಾರೆ, ಮೊಣಕಾಲಿನ ಕೆಲಭಾಗಕ್ಕೆ ಫೈರಿಂಗ್ ಮಾಡುವುದರ ಬದಲಾಗಿ ಮೇಲ್ಭಾಗಕ್ಕೆ ತಲೆ, ಎದೆಗೆ ಗುಂಡು ಹೊಡೆದಿದ್ದಾರೆ, ನಗರದಲ್ಲಿ ಗೋಲಿಬಾರ್ ಮಾಡುವ ಸನ್ನಿವೇಶವೇ ಇರಲಿಲ್ಲ. ಲಾಠಿಚಾರ್ಜ್ ಮಾಡುವ ಅಗತ್ಯವೂ ಇರಲಿಲ್ಲ. ಇದೆಲ್ಲಾ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ, ಡಿಸಿಪಿ ಅರುಣಾಂಶಗಿರಿ, ಇನ್ಸ್‍ಪೆಕ್ಟರ್ ಶಾಂತರಾಮ ಕುಂದರ್ ಮುಂತಾದವರ ಕುಮ್ಮಕ್ಕು ಅಹಂಕಾರ ಹಾಗೂ ಸೇಡಿನ ಮನೋಭಾವದಿಂದಲೇ ನಡೆದಿದೆ.
ಹಲವು ಸುತ್ತಿನ ಫೈರಿಂಗ್ ನಂತರವೂ ಒಬ್ಬರೂ ಸಾಯಲಿಲ್ಲವಲ್ಲಾ ಎಂದು ಇನ್ಸ್‍ಪೆಕ್ಟರ್ ಶಾಂತರಾಮ ಪೊಲೀಸರಿಗೆ ಹೇಳುತ್ತಿರುವುದು, ಗುಂಡು ಹಾರಾಟ ನಡೆಸುವಾಗ `ಒಂದೇ ಒಂದು ಜೀವವೂ ಬೀಳಲಿಲ್ಲವಲ್ಲಾ’ ಎನ್ನುತ್ತಾ ಒಬ್ಬ ಪೊಲೀಸನಿಂದ ಕಿತ್ತುಕೊಂಡು ಇನ್ನೊಬ್ಬ ಪೊಲೀಸನು ಡಿಸಿಪಿ ಅರುಣಾಂಶಗಿರಿ ಯವರ ಸಮಕ್ಷಮ ಎದೆ ಬಾಗಕ್ಕೆ ಫೈರಿಂಗ್ ಮಾಡುತ್ತಿರುವ ವೀಡಿಯೋ ಇದಕ್ಕೆ ಜೀವಂತ ಸಾಕ್ಷಿ. ಅಂಗಡಿಯೊಳಗೆ ನುಗ್ಗಿ ಹೊಡೆಯುತ್ತಿರುವ ಪೊಲೀಸರು, ಮಸೀದಿಗಳಿಗೆ ಕಲ್ಲು ತೂರಾಟ ಮಾಡುವ ಪೊಲೀಸರು, ಮಸೀದಿಯೊಳಗೆ ಆಶ್ರುವಾಯು ಸಿಡಿಸಿರುವ ದೃಶ್ಯವು ಪೊಲೀಸರ ಮನೋಭಾವನೆಯನ್ನು ಎತ್ತಿತೋರಿಸುತ್ತಿದೆ. ಮಂಗಳೂರಿನ ಮಾಜಿ ಮೇಯರ್ ಅಶ್ರಫ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ, ಎಸ್‍ಡಿಪಿಐ ಮುಖಂಡ ಅಬ್ದುಲ್ ಜಲೀಲ್, ಬೆಂಗರೆ ಕಾರ್ಪೋರೇಟರ್ ಮುನೀಬ್ ಮುಂತಾದವರ ಜೊತೆಗೆ ಪೊಲೀಸ್ ಅಧಿಕಾರಿಗಳು ಜನರ ನಿಯಂತ್ರಣ ಮಾಡಲು ಸಹಕರಿಸಬೇಕೆಂದು ಚರ್ಚಿಸುತ್ತಿದ್ದ ಸಂಧರ್ಭ ದಲ್ಲಿ ಅಶ್ರಫ್ ರವರ ಮೇಲೆ ಗಂಭೀರ ದಾಳಿಯಾಗಿದೆ. ಅಂದಿನ ರಾತ್ರಿ ಆಸ್ಪತ್ರೆಯಲ್ಲಿದ್ದ ಗಾಯಾಳುಗಳನ್ನು ನೋಡಲಿಕ್ಕೆ ಬಂದ ಮನೆಮಂದಿಯ ಮೇಲೆ ಆಸ್ಪತ್ರೆಯ ಆವರಣದೊಳಗೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ಹೈಲಾಂಡ್ ಆಸ್ಪತ್ರೆಯೊಳಗೆ ನುಗ್ಗಿದ ಪೊಲೀಸರ ಗುಂಪು ಆಸ್ಪತ್ರೆಯೊಳಗೆ ಆಶ್ರುವಾಯು ಸಿಡಿಸಿ ಕ್ರೌರ್ಯ ಹಾಗೂ ಅನಾಗರಿಕತೆ
ಮೆರೆದಿದ್ದಾರೆ. ಐಸಿಯುವಿನ ಬಾಗಿಲನ್ನು ಒಡೆದು ಒಳ ನುಗ್ಗಿ ಅಲ್ಲಿದ್ದ ವೈದ್ಯರು, ನರ್ಸ್ ಹಾಗೂ ಇತರರ ಮೇಲೆ ಲಾಠಿ ಬೀಸಿದ್ದಾರೆ. ಇಂತಹ ಕಿರಾತಕ ಹಾಗೂ ಅನಾಗರಿಕ ವರ್ತನೆ ಮಂಗಳೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ. ಪೊಲೀಸ್ ಕಮಿಷನರ್ ಡಾ.ಪಿ.ಎಸ್ ಹರ್ಷ, ಡಿಸಿಪಿ ಅರುಣಾಂಶಗಿರಿ, ಇನ್ಸ್‍ಪೆಕ್ಟರ್ ಶಾಂತರಾಮ ಕುಂದರ್ ಮತ್ತು ಇತರ ಪೊಲೀಸರೇ ಈ ಎಲ್ಲಾ ಅಶಾಂತಿ ದೊಂಬಿಗೆ ಕಾರಣ. ಈ ಹಿಂದಿನ ಮಂಗಳೂರು ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಶಾಂತಿ ಸಾಮರಸ್ಯ ಕಾಪಾಡಲು ಬಹಳ ಶ್ರಮ ಪಟ್ಟಿದ್ದಾರೆ. ಆದರೆ ಇದೀಗ ಸಾರ್ವಜನಿಕರ ಜೊತೆಗೆ ದರ್ಪ ಮತ್ತು ಅಗೌರವ ದಿಂದ ವರ್ತಿಸುವ ಅಧಿಕಾರಿಗಳಿಂದಾಗಿ ಜಿಲ್ಲೆಯು ಎಂದೂ ಕಾಣದ ಆತಂಕ ಹಾಗೂ ಅಬದ್ರತೆಗೆ ಈಡಾಗಿದೆ.ಇಬ್ಬರು ಯುವಕರನ್ನು ಬಲಿತೆಗೆದು ಕೊಂಡು ಆರು ಮಂದಿಗೆ ಗಂಭೀರ ಗುಂಡೇಟು ಗಾಯಗಳಾಗಿ ಆಸ್ಪತ್ರೆಯಲ್ಲಿ ನರಳಾಡುವಂತೆ ಮಾಡಿದ ಹಾಗೂ ಲಾಠಿಚಾರ್ಜ್ ನಿಂದ ಗಾಯಗೊಂಡು ಅಮಾಯಕರುಆಸ್ಪತ್ರೆಯಲ್ಲಿ ನರಳುವಂತೆ ಮಾಡಿದ ಡಾ.ಪಿ.ಎಸ್ ಹರ್ಷ, ಡಿಸಿಪಿ ಅರುಣಾಂಶಗಿರಿ, ಇನ್ಸ್‍ಪೆಕ್ಟರ್ ಶಾಂತರಾಮ ಕುಂದರ್ ಹಾಗೂ ಮುಂತಾದ ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್ ಕಾನ್ಸ್ಟೆಬಲ್ ಗಳ ಮೇಲೆ ಕೊಲೆ ಕೇಸು ದಾಖಲಿಸಿ ತಕ್ಷಣವೇ ವಿಚಾರಣೆ ನಡೆಸಬೇಕು. ಅವರನ್ನು ಕೂಡಲೇ ಕರ್ತವ್ಯದಿಂದ ವಜಾ ಮಾಡಲೇಬೇಕು. ಸಿಐಡಿ ತನಿಖೆಯ ಅಗತ್ಯವಿಲ್ಲ. ಬದಲಿಗೆ ಹಾಲಿ ಹೈಕೋರ್ಟಿನ ನ್ಯಾಯದೀಶರಿಂದ ನ್ಯಾಯಾಂಗ ತನಿಖೆಯಾಗಲೇಬೇಕು. ಈ ಬಗ್ಗೆ ಸಾರ್ವಜನಿಕ ಸಹಬಾಗಿತ್ವದೊಂದಿಗೆ ಪ್ರತಿಭಟನೆ, ಸತ್ಯಾಗ್ರಹ ನಡೆಸಿ ನ್ಯಾಯ ಸಿಗುವ ವರೆಗೆ ಹೋರಾಟ ನಡೆಯಲಿದೆ. ಈ ಕ್ರಮಗಳನ್ನು ಕೂಡಲೇ ಕೈಗೊಳ್ಳದಿದ್ದಲ್ಲಿ ಭಾರಿ ಹೋರಾಟವನ್ನು ನಡೆಸಲಾಗುವುದು.
ನಗರದ ಪೊಲೀಸರು ಈಗಾಗಲೇ ಸುಳ್ಳಿನ ಕಂತೆಗಳ ಕತೆಯನ್ನು ಹೆಣೆಯಲು ಪ್ರಾರಂಭಿಸಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿರುವ ಅಮಾಯಕರ ಮೇಲೆ ಹಾಗೂ ಫೈರಿಂಗ್ ನಲ್ಲಿ ಜೀವ ಕಳಕೊಂಡ ಜಲೀಲ್ ಹಾಗೂ ನೌಶೀನ್ ರ ಮೇಲೂ ಕೇಸು ದಾಖಲಿಸಿದ್ದಾರೆ. ಬಂದರು ಪೊಲೀಸ್ ಠಾಣೆಯನ್ನು ಸುಡಲು ಬಂದಿದ್ದಾರೆ ಎನ್ನುವ ತೀರಾ ಕಟ್ಟುಕತೆಯನ್ನು ಹೆಣೆದು ನಗೆಪಾಟಲಿಗೀಡಾಗಿದ್ದಾರೆ. ಪ್ರತಿಭಟನಾಕಾರರು ಮಾರಕಾಯುಧಗಳಿಂದ ಬಂದಿದ್ದರು ಎಂದು ಪ್ರಸ್ಥಾಪಿಸುತ್ತಿದ್ದಾರೆ. ಕೇರಳದಿಂದ ಬಂದಿದ್ದಾರೆ ಎನ್ನುವ ಹಳೆಯ ಡೈಲಾಗನ್ನು ಬಿಡುತ್ತಿದ್ದಾರೆ. ಎಸ್‍ಡಿಪಿಯಯ ಇಬ್ಬರು ನಾಯಕರ ಮೇಲೆ ಸುಳ್ಳು ದೇಶದ್ರೋಹದ ಕೇಸನ್ನು ಹಾಕಿ ಎಸ್‍ಡಿಪಿಯ ನಾಯಕರನ್ನು ಬೆದರಿಸುವ ವಿಫಲ ಪ್ರಯತ್ನಕ್ಕೆ ಮಂಗಳೂರು ನಗರ ಪೊಲೀಸರು ಇಳಿದಿದ್ದಾರೆ. ಯಾವುದೇ ಹುರುಳಿಲ್ಲದ ಆರೋಪವನ್ನು ಹೊರಿಸಿ ಹೋರಾಟದ ದಿಕ್ಕು ತಪ್ಪಿಸಲು ಪ್ರಯತ್ನಿಸುವ ಕೆಲವು ಪೊಲೀಸ್ ಅಧಿಕಾರಿಗಳ ಈ ಕುತಂತ್ರಗಳನ್ನು ಎಸ್‍ಡಿಪಿಐ ಕಠಿಣ ಶಭ್ಧಗಳಿಂದ ಖಂಡಿಸುತ್ತದೆ.
ಇಂತಹ ಪ್ರಯತ್ನಗಳಿಂದ ಜನಾಂದೋಲನ ಹಾಗೂ ನ್ಯಾಯಕ್ಕಾಗಿನ ಹೋರಾಟವನ್ನು ಯಾವತ್ತೂ ಕಿಂಚಿತ್ತೂ ಹತ್ತಿಕ್ಕಲು ಬಿಡೂದಿಲ್ಲ ಎಂದು ಎಸ್‍ಡಿಪಿಐ ಎಚ್ಚರಿಸುತ್ತಿದೆ. ಈ ಎಲ್ಲಾ ಅನ್ಯಾಯ, ಅಕ್ರಮ, ದೌರ್ಜನ್ಯ ಹಾಗೂ ಅನಾಗರಿಕ ಪ್ರಯತ್ನಗಳ ವಿರುದ್ಧ ನ್ಯಾಯಕ್ಕಾಗಿ ಆಗ್ರಹಿಸಿ ಸಾರ್ವಜನಿಕ ವೇದಿಕೆಯೊಂದಿಗೆ ಮುಂದಿನ ಹೋರಾಟ ರೂಪುಗೊಳ್ಳಲಿದೆ.
ಉಪಸ್ಥಿತಿ :-
ಇಲ್ಯಾಸ್ ಮುಹಮ್ಮದ್ ತುಂಬೆ (ರಾಜ್ಯಾದ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ)
ಅಥಾವುಲ್ಲಾ ಜೋಕಟ್ಟೆ (ಜಿಲ್ಲಾಧ್ಯಕ್ಷರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ದ.ಕ ಜಿಲ್ಲೆ)
ಜಲೀಲ್ ಕೆ (ರಾಜ್ಯ ಸಮಿತಿ ಸದಸ್ಯರು, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ)
ಇಕ್ಬಾಲ್ ಬೆಳ್ಳಾರೆ (ಜಿಲ್ಲಾ ಕಾರ್ಯದರ್ಶಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ದ.ಕ ಜಿಲ್ಲೆ)
ಅಶ್ರಫ್ ಮಂಚಿ (ಜಿಲ್ಲಾ ಕಾರ್ಯದರ್ಶಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ದ.ಕ ಜಿಲ್ಲೆ)
ನೂರುಲ್ಲಾ ಕುಲಾಯಿ (ಜಿಲ್ಲಾ ಕೋಶಾಧಿಕಾರಿ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಪ್ ಇಂಡಿಯಾ ದ.ಕ ಜಿಲ್ಲೆ)
ಮುನೀಬ್ ಬೆಂಗರೆ (ಕಾರ್ಪೊರೇಟರ್ ಮಂಗಳೂರು ಮಹಾನಗರ ಪಾಲಿಕೆ)