ಮಂಗಳೂರು : ಸಮಾಜದ ಒಳಿತಿಗೆ ಒಳ್ಳೆಯ ಆಲೋಚನೆಗಳು ಬರಲು ಸ್ವಸ್ಥ ಮನಸ್ಸು ಅಗತ್ಯ. ಇಂದಿಗೆ ನಾವು ಮಾನಸಿಕ ಭ್ರಷ್ಟಾಚಾರವನ್ನು ಹೋಗಲಾಡಿಸುವುದು ಬಹಳ ಆಗತ್ಯ ಇದೆ ಎಂದು ಅಭಿಪ್ರಾಯ ಪಟ್ಟ  ಕರ್ನಾಟಕ ಲೋಕಾಯುಕ್ತ ಜಸ್ಟೀಸ್  ವಿಶ್ವನಾಥ ಶೆಟ್ಟಿ ಸೇವಾಸಂಸ್ಥೆಗಳಾದ ರೋಟರಿ ಮುಂತಾದುವುಗಳು ಸಮಾಜದಲ್ಲಿ ತಾರತಮ್ಯರಹಿತ ಮಾಡುವ ಕೆಲಸದಿಂದ ಇದನ್ನು ಸಾಧಿಸಬಹುದು .

ಅವರು ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಇದರ ನೂತನ ಪದಾದಿಕಾರಿಗಳ ಪದಗ್ರಹಣ ಸಂದರ್ಭದಲ್ಲಿ ಮುಕ್ಯ ಅತಿಥಿಯಾಗಿ ಭಾಗವಹಿಸಿ ಮಂಗಳೂರಿನಲ್ಲಿ ಮಾತನಾಡುತ್ತಿದ್ದರು .

ಜೀವದ ಮೌಲ್ಯವನ್ನು ಅರಿತರೆ ಸೇವಾ ಸಂಸ್ಥೆಯಲ್ಲಿ ಕೆಲಸ ಮಾಡಲು ಆಸಕ್ತಿ ಬರುತ್ತದೆ. ಈ ಸಮಾಜವು ಶ್ರೀಮಂತರು  ಬಡವರು ಎಂಬ ಭೇದವಿಲ್ಲದೆ ಅವರವರ ಯೋಗ್ಯತೆಗನುಗುಣವಾಗಿ ನೀಡುತ್ತದೆ. ನಾವೂ ಹಾಗೆನೇ ನಮ್ಮ ಶಕ್ತಿಗನುಗುಣಾವಾಗಿ ಸಮಾಜಕ್ಕೆ ನೀಡಲೇಬೇಕು. ಈ ಕಾರ್ಯ ರೋಟರಿಯಂತಹ ಸಂಸ್ಥೆಗಳು ಮಾಡಿದ್ದು ರುಜುವಾಗಿದೆ. ಪೊಲಿಯೋ ಅಂತಹ ಮಹಾಮಾರಿ ಲೋಕ ಬಿಟ್ಟು ತೊಲಗಲು ರೋಟರಿಯ ದೇಣಿಗೆ ಶ್ಲಾಗನೀಯವಾಗಿದೆ ಅಂದರು.

ರೋಟರಿ ಉಪ ಗವರ್ನರ್ ಗೀತಾನಂದ ಪೈ ನೂತನ ಅದ್ಯಕ್ಷ ಡಾ ಜಯಪ್ರಕಾಶ್ ಪೂಂಜ ಅವರನ್ನು ಮತ್ತು ಅವರು ಹೊಸ  2019-20ರ ಪದಾದಿಕಾರಿಗಳನ್ನು ಪದಗ್ರಹಣ ಮಾಡಿದರು. ಲೋಕಾಯುಕ್ತರನ್ನು  ಪರಿಚಯ ಮಾಡಿದಾಗ ರಾಜ್ ಗೋಪಾಲ್ ರೈ ಅವರು ಶಾಲು ಹೊದಿಸಿ ಸ್ವಾಗತಿಸಿದರು . ಮೊದಲಿಗೆ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೇಟ್ ಸ್ವಾಗತಿಸಿ ನಿಕಟಪೂರ್ವ ಕಾರ್ಯದರ್ಶಿ ಜೋಯಲ್ ಲೋಬೊ ವಾರ್ಷಿಕ ವರದಿ ನೀಡಿದರು. ಕ್ಲಬ್ ನ ರೋಟರಿ ಗೃಹ ಪತ್ರಿಕೆಯನ್ನು  ಸಂಪಾದಕ ಪಿಡಿಜಿ ಡಾ ದೇವದಾ ರೈ ಮುಖ್ಯ ಅತಿಥಿಯ ಪರಿಚಯ ಮಾಡಿ ಪತ್ರಿಕೆಯನ್ನು ಪ್ರಸ್ತುತ ಪಡಿಸಿದರು . ಡಾ.ನಂದಕಿಶೋರ್ ರಾವ್ ಅವರು ವಲಯಾಧಿಕಾರಿಯ ಪರಿಚಯ ಮಾಡಿದರು . ಕಾರ್ಯದರ್ಶಿ ಕೆ ಎಂ ಹೆಗ್ಡೆ ವಂದಿಸಿದರು.

ವೇದಿಕೆಯಲ್ಲಿ ವಲಯ ಸೇನಾನಿ ವಾಲ್ಟರ್ ಮೆನೇಜಸ್, ವಲಯ ಕಾರ್ಯದರ್ಶಿ ಮಂಜುನಾಥ ರೇವಂಕರ್ , ಸ್ಥಾಪಕ ಅದ್ಯಕ್ಷ ಪ್ರೇಮನಾಥ್ ಕುಡ್ವ, ಹಿಂದಿನ ಅದ್ಯಕ್ಷ ರೇಮಂಡ್ ಡಿಕೂನಾ ಇದ್ದರು . ಡಾ. ಮಧುಸೂಧನ್ ಉಪಾದ್ಯಾಯ ನಿರೂಪಿಸಿದರು

ಕಾರ್ಯಕ್ರಮಕ್ಕೆ ಸಿಟಿ ಆಸ್ಪತ್ರೆಯ ಅದ್ಯಕ್ಷ ಭಾಸ್ಕರ್ ಶೆಟ್ಟಿ, ಶ್ರೀದೇವಿ ಸಂಸ್ಥೆಗಳ ಅದ್ಯಕ್ಷ ಸದಾನಂದ ಶೆಟ್ಟಿ , ಮಾಜಿ ಸಚೀವ ಅಭಯಚಂದ್ರ  ಜೈನ್  ಪಿಡಿಜಿಗಳಾದ ಸೂರ್ಯಪ್ರಕಾಶ್ ಭಟ್ ಕೃಷ್ಣ ಶೆಟ್ಟಿ ,ರೋಹಿನಾಥ್ ಪಿ , ಮುಂದಿನ ವರ್ಷದ ಡಿಜಿ ರಂಗನಾಥ್ ಭಟ್ ಮತ್ತಿತರ ರೋಟರಿಯ ಪದಾದಿಕಾರಿಗಳು  ಹಾಜರಿದ್ದರು