ಮಂಗಳೂರು (ಸೆಪ್ಟೆಂಬರ್ 14):- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ಅನುಷ್ಟಾನಗೊಂಡಿರುವ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ರಾಷ್ಟ್ರೀಕೃತ ಬ್ಯಾಂಕಿನಿಂದ ಗರಿಷ್ಟ ಸಾಲ ರೂ.  3 ಲಕ್ಷ ಮಂಜೂರಾದಲ್ಲಿ ನಿಗಮದಿಂದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಶೇ.50% ಸಹಾಯಧನ, ಹಾಗೂ ಇತರೆ ವರ್ಗದ ಮಹಿಳೆಯರಿಗೆ ಶೇ.30% ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದ್ದು, ಅರ್ಜಿಗಳನ್ನು ಸಂಬಂಧಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಂದ ಪಡೆದುಕೊಂಡು ಅಕ್ಟೋಬರ್ 15 ರೊಳಗೆ ತ್ರಿ-ಪ್ರತಿಯಲ್ಲಿ ಭರ್ತಿ ಮಾಡಿ ಸಲ್ಲಿಸಬೇಕು.

   ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಅಥವಾ ದೂರವಾಣಿ ಸಂಖ್ಯೆ ಮಂಗಳೂರು (ನಗರ) 0824-2432809, ಮಂಗಳೂರು (ಗ್ರಾಮಾಂತರ) 0824-2263199, ಬಂಟ್ವಾಳ -08255-232465, ವಿಟ್ಲ-08255-238080, ಪುತ್ತೂರು-08251-230388, ಸುಳ್ಯ-08257-230239, ಬೆಳ್ತಂಗಡಿ-08256-232134 ಸಂಪರ್ಕಿಸಲು ದ.ಕ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರ  ಪ್ರಕಟಣೆ ತಿಳಿಸಿದೆ.