ಮಂಗಳೂರು (ಸೆಪ್ಟೆಂಬರ್ 14):- ಮಂಗಳೂರು ತಾಲೂಕಿನ ಶಿಶು ಅಭಿವೃದ್ದಿ ಯೋಜನೆ ಗ್ರಾಮಾಂತರ  ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯತ್‍ಗೆ ಬಬ್ಬರಂತೆ  ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ವಿಕಲಚೇತನರನ್ನು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆ ನೇಮಕ ಮಾಡಲು ಅವಕಾಶವಿದ್ದು, 18-45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.  

    ಹುದ್ದೆ ಖಾಲಿ ಇರುವ ಗ್ರಾಮಪಂಚಾಯತ್ ವಿವರ ಇಂತಿವೆ:  ಅಡ್ಯಾರ್, ಅಂಬ್ಲಮೊಗರು, ಅತಿಕಾರಿಬೆಟ್ಟು, ಬಾಳ, ಬಳ್ಕುಂಜೆ, ಬೆಳ್ಮ, ಬೋಳಿಯಾರು, ಗಂಜಿಮಠ, ಗುರುಪುರ, ಹಳೆಯಂಗಡಿ, ಹರೇಕಳ, ಜೋಕಟ್ಟೆ, ಕಂದಾವರ, ಕೆಮ್ರಾಲ್, ಕಿನ್ನಿಗೋಳಿ, ಕಿನ್ಯ, ಕೊಣಾಜೆ, ಕುಪ್ಪೆಪದವು, ಮಳವೂರು, ಮಲ್ಲೂರು, ಮಂಜನಾಡಿ, ಮುನ್ನೂರು, ಮುತ್ತೂರು, ನೀರುಮಾರ್ಗ, ಪಡುಪಣಂಬೂರು, ಪಡುಪೆರಾರ, ಪಾವೂರು, ಸೂರಿಂಜೆ, ತಲಪಾಡಿ, ಉಳಾಯಿಬೆಟ್ಟು, ಬೆಳುವಾಯಿ, ದರೆಗುಡ್ಡೆ, ಹೊಸಬೆಟ್ಟು, ಇರುವೈಲು, ಕಲ್ಲಮುಂಡ್ಕೂರು, ನೆಲ್ಲಿಕಾರು, ಪಡುಮಾರ್ನಾಡು, ಪಾಲಡ್ಕ, ಪುತ್ತಿಗೆ, ಶಿರ್ತಾಡಿ, ತೆಂಕಮಿಜಾರು ಮತ್ತು ವಾಲ್ಪಾಡಿ ಗ್ರಾಮ ಪಂಚಾಯತ್ ಹುದ್ದೆ ಖಾಲಿ ಇದ್ದು ಆಸಕ್ತ ವಿಕಲಚೇತನರು    ಅಕ್ಟೋಬರ್ 14 ರೊಳಗೆ ಶಿಶು ಅಭಿವೃದ್ದಿ ಯೋಜನಾಧಿಕಾರಿ, ಮಂಗಳೂರು ಗ್ರಾಮಾಂತರ, ಮೂಡುಶೆಡ್ಡೆ, ವಾಮಂಜೂರು, ಮಂಗಳೂರು-28 ಈ ಕಚೇರಿಯಿಂದ ಅರ್ಜಿ ನಮೂನೆಯನ್ನು ಪಡೆದು ಸದ್ರಿ ಕಚೇರಿಗೆ ಸಲ್ಲಿಸಬೇಕು.

     ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2263199 ಸಂಪರ್ಕಿಸುವಂತೆ ಮಂಗಳೂರು (ಗ್ರಾ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.