ಮಂಗಳೂರು:- ನವೆಂಬರ್ 01, 2020 ರಂದು ಮಂಗಳೂರು ಮಿಲಾಗ್ರಿಸ್ ಕಾಲೇಜು ಐಕ್ಯೂಎಸಿ ಮತ್ತು ಕನ್ನಡ ವಿಭಾಗದ ವತಿಯಿಂದ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಕಾರ್ಯಕ್ರಮವನ್ನು ಆನ್ ಲೈನ್ ನ್ನಲ್ಲಿ ಹಮ್ಮಿಕೊಳ್ಳಲಾಯಿತು.

ಸಂಪನ್ಮೂಲ ವ್ಯಕ್ತಿಯಾಗಿ ಕಲಬುರ್ಗಿ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಸಹಾಯಕ ಪ್ರಾಧ್ಯಾಪಕರಾದ ಡಾ.ರೋಹಿಣಕ್ಷ ಶಿರ್ಲಾಲು ಇವರು "ಕನ್ನಡ-ಕರ್ನಾಟಕ : ಸಾಧ್ಯತೆ ಮತ್ತು ಸವಾಲುಗಳು’ ಎಂಬ ವಿಷಯದ ಕುರಿತು ಮಾತನಾಡಿ ಕರ್ನಾಟಕವೆಂದರೆ ಬರಿಯಾ ರಾಜ್ಯವಲ್ಲ, ಆ ರಾಜ್ಯದಲ್ಲಿ ಸಂಸ್ಕೃತಿಕ ಶ್ರೀಮಂತಿಕೆ, ಭಾಷೆಯ ವೈವಿಧ್ಯತೆ, ಉಡುಗೆ ತೊಡುಗೆ, ಪ್ರಾಕೃತಿಕ ವೈವಿಧ್ಯತೆಯನ್ನು ಹೊಂದಿದೆ.

ಕರ್ನಾಟಕದಲ್ಲಿ ಇದ್ದು ಕನ್ನಡದಲ್ಲಿ ಶಿಕ್ಷಣ, ಕನ್ನಡ ಅಧ್ಯಾಪಕರ ಮುಂದಿರುವ ಸವಾಲುಗಳು, ಬೇರೆ ಪ್ರದೇಶಕ್ಕೆ ಹೋದಾಗ ಕನ್ನಡಿಗರು ಎದುರಿಸುವ ಸವಾಲುಗಳು, ರಾಷ್ಟ್ರೀಯ ಸವಾಲುಗಳು, ರಾಜಕೀಯ ಸವಾಲುಗಳು, ಉದ್ಯೋಗ ಸವಾಲುಗಳನ್ನು ಕನ್ನಡಿಗರು ಹೇಗೆ ನಿಭಾಯಿಸಬೇಕು ಎಂದು ತಿಳಿಸಿದರು. ಕನ್ನಡಿಗರು ಕನ್ನಡವನ್ನು ಉಳಿಸಿ ಬೆಳೆಸಬೇಕು ಎಂದು ತಿಳಿ ಹೇಳಿದರು.

ಕನ್ನಡ ವಿಭಾಗದ ಉಪನ್ಯಾಸಕಿ ಸೌಮ್ಯ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.