ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ನಮ್ಮ ಟಿ.ವಿಯ ಸಹಯೋಗದೊಂದಿಗೆ ಯಕ್ಷಗಾನ ಹಾಸ್ಯ ಕಲಾವಿದರ ಒಕ್ಕೂಟ ಮತ್ತು ನಮ್ಮ ತುಳುನಾಡ್ ಟ್ರಸ್ಟ್(ರಿ)ನ ಸಹಕಾರದೊಂದಿಗೆ ಯಕ್ಷಗಾನ ಹಾಸ್ಯ ಕಲಾವಿದರ ನೆರವಿಗಾಗಿ “ಆಟದ ಆಯನ’’ ಎಂಬ ವಿನೂತನ ಯಕ್ಷಗಾನ ಪ್ರದರ್ಶನದಲ್ಲಿ ‘ಮುಂಡದ ಬರವು’ ಎಂಬ ತುಳು ಯಕ್ಷಗಾನ ಪ್ರಸಂಗ ಅಕಾಡೆಮಿಯ ಸಿರಿ ಚಾವಡಿಯಲ್ಲಿ ದಿನಾಂಕ 20.06.2020 ಶನಿವಾರ ನಡೆಯಿತು.
ಅಕಾಡೆಮಿಯ ಅಧ್ಯಕ್ಷರಾದ ಶ್ರೀ ದಯಾನಂದ ಜಿ.ಕತ್ತಲ್‍ಸಾರ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಶ್ರೀ ಜಗದೀಶ್ ಶೇಣವ ನ್ಯಾಯವಾದಿ ಮತ್ತು ಜಿಲ್ಲಾ ಬಿಜೆಪಿ ಪ್ರಮುಖರು, ರಾಜಗೋಪಾಲ ರೈ ಉದ್ಯಮಿ , ಲಯನ್ ಶ್ರೀವೆಂಕಟೇಶ್ ಜಪ್ಪು ಉದ್ಯಮಿ, ಜಿ.ಶ್ರೀನಿವಾಸ ಸಾಲ್ಯಾನ್ ಬೋಂದೆಲ್ ಉದ್ಯಮಿ ಮತ್ತು ಮೇಳದ ಮಾಜಿ ಸಂಚಾಲಕರು ಮತ್ತು ಜಿ.ವಿ.ಎಸ್ ಉಳ್ಳಾಲ್, ಸ್ಥಾಪಕಾಧ್ಯಕ್ಷರು ನಮ್ಮ ತುಳುನಾಡ್ ಟ್ರಸ್ಟ್ (ರಿ) ಭಾಗವಹಿಸಿದ್ದರು.
ಅಕಾಡೆಮಿಯ ಸದಸ್ಯರಾದ ರವೀಂದ್ರ ಶೆಟ್ಟಿ ಬಳಂಜ, ಕಡಬ ದಿನೇಶ್ ರೈ , ಚೇತಕ್ ಪೂಜಾರಿ, ನಿಟ್ಟೆ ಶಶಿಧರ್ ಶೆಟ್ಟಿ, ಮಲ್ಲಿಕಾ ಅಜಿತ್ ಶೆಟ್ಟಿ ಉಪಸ್ಥಿತರಿದ್ದರು.
ಅಕಾಡೆಮಿಯ ರಿಜಿಸ್ಟ್ರಾರ್ ರಾಜೇಶ್ ಜಿ. ವಂದನೆಯನ್ನು ಮಾಡಿದರು.