News by Rons Bantwal

ಮುಂಬಯಿ, ನ.14: ಎಲ್ಲಾ ಕನ್ನಡಿಗರೂ ನವೆಂಬರ್‌ನಲ್ಲಿ ಒಗ್ಗಟ್ಟಾಗಿ ಸಾಮರಸ್ಯದಿಂದ ಆಚರಿಸುವ ಕಾರ್ಯಕ್ರಮವೇ ರಾಜ್ಯೋತ್ಸವ ಕಾರ್ಯಕ್ರಮ. ಅದೂ ಹೊಡನಾಡ ಗಲ್ಫ್ ರಾಷ್ಟ್ರದ ಕರುನಾಡ ಕನ್ನಡಿಗರ ಸಡಗರದ ಸಂಭ್ರಮವೇ ಅತ್ಯಾದ್ಭುತವಾದುದು. ಇಂತಹ ಉತ್ಸಾಹ ಮತ್ತಷ್ಟು ಬೆಳೆದು ದುಬೈನಲ್ಲಿ ಮುಂದಿನ ದಿನಗಳಲ್ಲಿ ಕನ್ನಡಿಗರೆ ಲ್ಲರೂ ಒಗ್ಗಟ್ಟಾಗಿ ರಾಜ್ಯೋತ್ಸವ ಆಚರಿಸುವಂತಾಗಲಿ ಎಂದು ಕರ್ನಾಟಕ ಸರ್ಕಾರದ ವಿಧಾನಸಭಾಧ್ಯಕ್ಷ ಡಾ| ಯು.ಟಿ ಖಾದರ್ ಆಶಯ ವ್ಯಕ್ತಪಡಿಸಿದರು.

ಕಳೆದ ಶುಕ್ರವಾರ ಯುಎಇ ಇಲ್ಲಿನ ನ್ಯೂಡಾನ್ ಪ್ರೈವೇಟ್ ಸ್ಕೂಲ್‌ನಲ್ಲಿ ಸಾವಿರಾರು ಕನ್ನಡಿಗರ ಸಮಕ್ಷಮದಲ್ಲಿ ಗಲ್ಫ್ ರಾಷ್ಟ್ರದಲ್ಲಿನ ಕರ್ನಾಟಕ ಸಂಘ ದುಬಾಯಿಯ ಕರ್ನಾಟಕ ರಾಜ್ಯೋತ್ಸವ-2025 ಸಂಭ್ರಮವನ್ನು ಅದ್ದೂರಿಯಾಗಿ ಆಚರಿಸಿದ್ದು, ಯುಎಇಯಲ್ಲಿ ಇರುವ ಎಲ್ಲಾ ಕನ್ನಡಿಗರಿಗೆ ರಾಜ್ಯೋತ್ಸವದ ಶುಭಾಶಯ ಹಾರೈಸಿ ಅನಿವಾಸಿ ಕನ್ನಡಿಗರ ಸಮಾಜ ಸೇವೆಗೆ ಸಂಘವು ವಾರ್ಷಿಕವಾಗಿ ಪ್ರದಾನಿಸುವ ಪ್ರಶಸ್ತಿ, ಗೌರವಗಳನ್ನು ಪ್ರದಾನಿಸಿ ಸ್ಪೀಕರ್ ಖಾದರ್ ಮಾತನಾಡಿದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಎಂಎಲ್‌ಸಿ ಡಾ| ಆರತಿ ಕೃಷ್ಣ,  ಬೆಂಗಳೂರುನ ಖ್ಯಾತ ಉದ್ಯಮಿ ಕುಶಾಲ್ ಗೌಡ, ಉದ್ಯಮಿಗಳಾದ ನೀಲೆಶ್ ಹೆಚ್.ಪಿ, ಡಾ| ಬಿ. ಆರ್ ಶೆಟ್ಟಿ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಇಬ್ರಾಹಿಂ ಗಡಿಯಾರ, ಸಂಜಯ್ ಗೌಡ, ಜಲೀಲ್, ಕನ್ನಡ ಚಿತ್ರರಂಗದ ಜಯಮಾಲಾ, ಸಪ್ತಮಿ ಗೌಡ, ಡಾಲಿ ಧನಂಜಯ್, ಸನಿಲ್ ಗುರು, ಕರ್ನಾಟಕ ಸಂಘ ದುಬಾಯಿ ಇದರ  ಮಹಾಪೋಷಕ ರೊನಾಲ್ಡ್ ಮಾರ್ಟಿಸ್, ಗೌರವ ಸಲಹೆಗಾರ ಜಯಂತ್ ಶೆಟ್ಟಿ, ಅಧ್ಯಕ್ಷ ಶಶಿಧರ್ ನಾಗರಾಜಪ್ಪ, ಉಪಾಧ್ಯಕ್ಷ ದಯಾ ಕಿರೋಡಿಯಾನ್, ಕಾರ್ಯದರ್ಶಿ ಮನೋಹರ ಹೆಗ್ಡೆ, ಜತೆ ಕಾರ್ಯದರ್ಶಿ ಮಲ್ಲಿಕಾರ್ಜುನ ಗೌಡ, ಕೋಶಾಧಿಕಾರಿ ನಾಗರಾಜ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅತಿಥಿಗಳು 2025ನೇ ಸಾಲಿನ ದುಬೈ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ಉದ್ಯಮಿ ಸಮದ್ ಚಿರಾಲಿ ಉಚ್ಚಿಲ ಅವರಿಗೆ ನೀಡಿ ಗೌರವಿಸಲಾಯಿತು. ಕಲಾ ಸೇವೆಯನ್ನು ಗುರುತಿಸಿ ಆಲ್ವಿನ್ ಪಿಂಟೋ, ಸಾಹಿತ್ಯ-ಪತ್ರಿಕಾ ರಂಗಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಇರ್ಷಾದ್ ಮೂಡುಬಿದಿರೆ, ಯಕ್ಷಗಾನ-ನಾಟಕ ರಂಗದ ಸೇವೆಯನ್ನು ಗುರುತಿಸಿ ಚಿದಾನಂದ ಪೂಜಾರಿ ಅವರಿಗೆ ಸಾಧಕ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಿದರು.

ಈ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಿವಾಸಿ ಉದ್ಯಮಿ ಬಿ.ಝಕರಿಯ ಜೋಕಟ್ಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜೊಸೆಫ್ ಮಥಾಯಸ್, ರಚನಾ ಪ್ರಶಸ್ತಿ ಪುರಸ್ಕೃತ ಪ್ರತಾಪ್ ಮಂಡೋನ್ಸ್ಸಾ ಶೋಭಾ ಮಂಡೋನ್ಸಾ, ಸಾಧಕಿಯರಾದ ಕು| ಆಮಿಷ ಆನಂದ್, ವಿಜೇತ ಪೂಜಾರಿ, ಹಿರೀಷ ಚಿತ್ರಳ ಅವರಿಗೆ ಪ್ರದಾನಿಸಿ ಶುಭಾರೈಸಿದರು.

ಕರ್ನಾಟಕದ ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಪೂರ್ವಾಹ್ನ ಜಾಗತಿಕ ವ್ಯಾಪಾರ ವೇದಿಕೆಯ ಅನಾವರಣಗೊಳಿಸಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಕಾರ್ಯಕ್ರಮದ ಮುಂಚೆ ಅತಿಥಿ-ಗಣ್ಯರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.

ಬೆಳಿಗ್ಗೆಯಿಂದ ರಾತ್ರಿ ವರೆಗೆ ನಡೆದ ರಾಜ್ಯೋತ್ಸವ ಸಡಗರದಲ್ಲಿ ಯುಎಇಯ ಮೂಲೆ ಮೂಲೆಗಳಿಂದ ಸಾವಿರಾರು ಕನ್ನಡಿಗರು ಭಾಗವಹಿಸಿದ್ದರು. ಯುಎಇಯ ನೃತ್ಯ ತಂಡದವರಿಂದ ನೃತ್ಯ ಕಾರ್ಯಕ್ರಮ, ಯುಎಇಯ ಕನ್ನಡಿಗ ಗಾಯಕರಿಂದ ಸಂಗೀತ ಕಾರ್ಯಕ್ರಮ, ಸು ಪ್ರಮ್ ಸೋ ಚಿತ್ರ ತಂಡವು ಹಾಸ್ಯ ಕಾರ್ಯಕ್ರಮ ಮತ್ತು ಕರುನಾಡಿನಿಂದ ಆಗಮಿಸಿದ ಎಸ್‌ಪಿಬಿ ಮತ್ತು ನಿಶಾಂತ್ ತಂಡವು ಲೈವ್ ಮ್ಯೂಸಿಕ್ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದು ಉಪಸ್ಥಿತ ಕನ್ನಡಿಗರು ಕರುನಾಡ ೭೦ನೇ ವರ್ಷದ ಕರ್ನಾಟಕ ರಾಜ್ಯೋತ್ಸವದ ಸವಿಯನ್ನು ಸವಿದರು.

ದಯಾ ಕಿರೋಡಿಯಾನ್ ಸ್ವಾಗತಿಸಿದರು. ಶಶಿಧರ್ ನಾಗರಾಜಪ್ಪ ಪ್ರಾಸ್ತಾವನೆಗೈದರು. ಚಿತ್ರ ನಟಿ ಅಂಕಿತ ಅಮರ್, ಯುಎಇಯ ಹೆಸರಾಂತ ನಿರೂಪಕಿ ಆರತಿ ಅಡಿಗ, ಕಾವ್ಯ ಯುವರಾಜ್ ಕಾರ್ಯಕ್ರಮದ ನಿರೂಪಿಸಿದರು. ಮಲ್ಲಿಕಾರ್ಜುನ ಗೌಡ ಆಭಾರ ಮನ್ನಿಸಿದರು.