ಮಂಗಳೂರು: ದ.ಕ. ಜಿಲ್ಲೆಯ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ವೆಂಟಿಲೇಟರ್, ಐ.ಸಿ.ಯು.ಬೆಡ್ ಗಳ ಕೊರತೆಯಿದ್ದು, ಸೂಕ್ತ ಸೌಲಭ್ಯ ಒದಗಿಸುವಲ್ಲಿ ವಿಫಲವಾದ ರಾಜ್ಯ ಸರ್ಕಾರದ ವಿರುದ್ಧ ಹಾಗೂ ರಾಜ್ಯ ಆರೋಗ್ಯ ಸಚಿವರು ತಕ್ಷಣ ರಾಜೀನಾಮೆಗೆ ಒತ್ತಾಯಿಸಿ ದ.ಕ‌.ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸೋಮವಾರ ನಗರದ ವೆನ್ಲಾಕ್ ಆಸ್ಪತ್ರೆಯ ಎದುರು ಧರಣಿ ನಡೆಸಲಾಯಿತು.

ಈ ವೇಳೆ ಧರಣಿನಿರತರರನ್ನು ಉದ್ದೇಶಿಸಿ ಮಾತನಾಡಿದ ದ.ಕ‌.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್, "ಕೊರೋನಾಗೆ ಚಿಕಿತ್ಸೆ ನೀಡುವ ಜಿಲ್ಲೆಯ 9 ಖಾಸಗಿ ಆಸ್ಪತ್ರೆಗಳು  ಮತ್ತು ಸರಕಾರಿ ವೆನ್ಲಾಕ್ ಸೇರಿದಂತೆ ಒಟ್ಟು 120 ಐಸಿಯು ಬೆಡ್, 117 ವೆಂಟಿಲೇಟರ್ ಬೆಡ್ ಮತ್ತು 611 ಹೈ ಆ್ಯಕ್ಸಿಜನ್ ಬೆಡ್ ಗಳು ಕೊರೋನಾ ರೋಗಿಗಳಿಗೆ ಭರ್ತಿಯಾಗಿವೆ. ಇನ್ನೂ ಹೊಸದಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಬೇಕಾಗಿದ್ದವರು ಪರದಾಡವಂತಾಗಿದೆ" ಎಂದು ಹೇಳಿದರು.

"ವೆನ್ಲಾಕ್ ಐಸಿಯುನಲ್ಲಿ ಹಾಸಿಗೆ ಲಭ್ಯವಿಲ್ಲದಿದ್ದರಿಂದ ರೋಗಿಗಳು ಖಾಸಗಿ ಆಸ್ಪತ್ರೆಗಳಿಗೆ ತೆರಳುತ್ತಿದ್ದಾರೆ. ಆದರೆ ಅಲ್ಲಿ ಕೂಡ ಐಸಿಯೂ ಭರ್ತಿಯಾಗಿದ ಪರಿಣಾಮ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಪ್ರಾಣಾಪಾಯ ಎದುರಾಗಿದೆ. ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಲಫವಾಗಿದ್ದು, ಆರೋಗ್ಯ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಜಿಲ್ಲೆಯ ಆಸ್ಪತ್ರೆಗಳಲ್ಲಿ ಬೆಡ್ ಗಳ ವ್ಯವಸ್ಥೆಯನ್ನು ಕಲ್ಪಿಸಬೇಕು"  ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಾಜಿ ಶಾಸಕಾರದ ಐವನ್ ಡಿಸೋಜಾ, ಮೊಯ್ದಿನ್ ಬಾವಾ, ಜೆ.ಆರ್.ಲೋಬೋ,  ಇಬ್ರಾಹೀಂ ಕೋಡಿಜಾಲ್ ಮಾತನಾಡಿದರು. ಶಾಲೆಟ್ ಪಿಂಟೋ, ಸದಾಶಿವ್ ಉಳ್ಳಾಲ್, ನೀರಜ್ ಚಂದ್ರ ಪಾಲ್, ಸಂತೋಷ್ ಕುಮಾರ್ ಶೆಟ್ಟಿ ಅಸೈಗೋಳಿ, ಸುರೇಂದ್ರ ಕಂಬಳಿ, ವಿಶ್ವಾಸ್ ಕುಮಾರ್ ದಾಸ್, ಸದಾಶಿವ ಶೆಟ್ಟಿ, ವಸಂತ್ ಬೆರ್ನಾಡ್, ಮಲಾರ್ ಮೋನು, ವಿವೇಕ್ ರಾಜ್ ಪೂಜಾರಿ, ಬಿ.ಎಂ.ಅಬ್ಬಾಸ್ ಅಲಿ, ಎ.ಸುರೇಶ್ ಶೆಟ್ಟಿ, ಅಶ್ರಫ್ ಎಚ್.ಎಂ., ಸುಭೋದಯ ಆಳ್ವ, ಸಂತೋಷ್ ಶೆಟ್ಟಿ, ಸಂಶುದ್ದೀನ್ ಕುದ್ರೋಳಿ, ಎ.ಸಿ.ವಿನಯರಾಜ್, ಪ್ರವೀಣ್ ಚಂದ್ರ ಆಳ್ವ, ನವೀನ್ ಡಿಸೋಜಾ, ಜೆಸಿಂತಾ ಆಲ್ಫ್ರೆಡ್,  ಅನೀಲ್ ಕುಮಾರ್, ಸಂಶುದ್ದೀನ್ ಬಂದರ್, ಅಬೂಬಕ್ಕರ್ ಕುದ್ರೋಳಿ, ಪ್ರತಿಭಾ ಕುಳಾಯಿ, ಜಯಶೀಲ ಅಡ್ಯಂತಯಾ, ಅಶ್ರಫ್ ಬಜಾಲ್, ಕುಮಾರಿ ಅಪ್ಪಿ, ರಜನೀಶ್, ಮೊಹಮ್ಮದ್ ಕುಂಜತ್ ಬೈಲ್, ಪ್ರಕಾಶ್ ಸಾಲ್ಯಾನ್, ನಾಗೇಂದ್ರ ಕುಮಾರ್, ಮಂಜುಳಾ ನಾಯ್ಡು, ಸಬೀತಾ ಮಿಸ್ಕಿತ್, ಶಬ್ಬೀರ್ ಎಸ್., ಪದ್ಮನಾಭ ಅಮೀನ್, ಟಿ.ಕೆ.ಸುಧೀರ್, ಯು.ಟಿ.ತೌಸೀಫ್, ರಾಮದಾಸ್ ಪ್ರಭು, ಸವಾದ್ ಗೂನಡ್ಕ, ಸಿದ್ದೀಕ್ ಪಾರೆ, ತೆರಸಾ ಪಿಂಟೋ, ಸ್ಟೀಫನ್ ಮರೋಳಿ, ಲಾರೆನ್ಸ್ ಡಿಸೋಜಾ, ಇಕ್ಬಾಲ್ ಸೇಮಾನಿಗೆ, ಸಮರ್ಥ್ ಭಟ್, ಮುದಸ್ಸೀರ್ ಕುದ್ರೋಳಿ, ಪುನೀತ್ ಶೆಟ್ಟಿ, ಎ.ಆರ್.ಇಮ್ರಾನ್,  ಅಬ್ಬಾಸ್ ಸಲೀಂ ಮಕ್ಕ, ಭುವನ್ ಕರ್ಕೇರ, ಚೇತನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.