ಮಂಗಳೂರು: ವಿಧಾನಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿಸೋಜರವರು ಕಾರ್ಮಿಕ ಪರಿಷತ್ತಿನ ರಿಕ್ಷಾ ಮತ್ತು ಟೆಂಪೋ ಚಾಲಕರ ಸಂಘ (ರಿ), ಸುರತ್ಕಲ್ ಇಲ್ಲಿಗೆ ತೆರಳಿ ಸುಮಾರು 75 ಮಂದಿಗೆ ಅಕ್ಕಿ, ದಿನಸಿಯನ್ನು ವಿತರಿಸಿದರು. ಮತ್ತು ಕೋರೋಣ ಬಗ್ಗೆ ತೆಗೆದುಕೊಳ್ಳಬೇಕಾದ ಜಾಗೃತಿಯ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಕಾರ್ಮಿಕರ ಪರವಾಗಿ ಅದರಲ್ಲೂ ಅಸಂಘಟಿತ ಕಾರ್ಮಿಕರಿಗೆ ಸಹಾಯ ಮಾಡಿದ ಕಾರ್ಮಿಕ ನಾಯಕ ಶ್ರೀ ಐವನ್ ಡಿಸೋಜರವ ರಿಗೆ ಚಾಲಕ ವರ್ಗದವರು ಕೃತಜ್ಞತೆಯನ್ನು ಸಲ್ಲಿಸಿದರು