ಮಂಗಳೂರು: ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಸ್ನಾತಕ ಮತ್ತು ಸ್ನಾತಕೋತ್ತರ ಹಿಂದಿ ವಿಭಾಗಗಳ ವತಿಯಿಂದ ಸೆಪ್ಟೆಂಬರ್‌ 21 ರಿಂದ ಸೆಪ್ಟೆಂಬರ್‌ 26 ರವರೆಗೆ ʼಹಿಂದಿ ಸಪ್ತಾಹʼ ವನ್ನು ಆಚರಿಸಲಾಯಿತು. ಇದರ ಅಂಗವಾಗಿ ವಿಶೇಷ ವಿಚಾರ ಸಂಕಿರಣಗಳ ಜೊತೆಗೆ ಹಲವು ಬಗೆಯ ಆನ್‌ಲೈನ್‌ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಸೆಪ್ಟೆಂಬರ್‌ 23ರಂದು ಮುಂಬಯಿಯ ಆರ್‌ಬಿಐ ಪ್ರಬಂಧಕ ಡಾ. ಮಧುಶೀಲ ಆಯಿಲಿಯಾಥ್‌ ʼಸಾಹಿತ್ಯ ಕ್ಷೇತ್ರದಲ್ಲಿ ಹಿಂದಿʼಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದರು. ಮರುದಿನ ಮುಂಬಯಿಯ ನಾನಾವತಿ ಮಹಿಳಾ ಮಹಾವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಕಾತ್ಯಾಯನ್‌ ಅವರಿಂದ ವಿಶೇಷ ಉಪನ್ಯಾಸ ನಡೆಯಿತು.

ಶನಿವಾರ ಕಾಲೇಜಿನ ಶಿವರಾಮ ಕಾರಂತ ಸಭಾಭವನದಿಂದ ಆನ್‌ ಲೈನ್‌ ವೇದಿಕೆಯಲ್ಲಿ ನಡೆದ ಸಮಾರೋಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಉದಯಕುಮಾರ್‌ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪೂನಾ ವಿಶ್ವವಿದ್ಯಾನಿಲಯದ ಹಿಂದಿ ಸಂಶೋಧನಾ ಕೇಂದ್ರದ ಪ್ರಾಧ್ಯಾಪಕ ಡಾ. ಈಶ್ವರಪವಾರ್‌, ವರ್ತಮಾನದಲ್ಲಿ ಹಿಂದಿ ಭಾಷೆಯ ಸ್ಥಿತಿಗತಿಯ ಕುರಿತು ಬೆಳಕು ಚೆಲ್ಲಿದರು.

ಸಪ್ತಾಹದ ಅಂಗವಾಗಿ  ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪ್ರಬಂಧ ಲೇಖನ ಸ್ಪರ್ಧೆ, ಹಿಂದಿ ಕಾವ್ಯರಚನಾ ಸ್ಪರ್ಧೆಗಳು ನಡೆದವು. ಕಾಲೇಜಿನ ಪ್ರಾಧ್ಯಾಪಕರಿಗಾಗಿ ಶುದ್ಧಲೇಖನ ಸ್ಪರ್ಧೆ ನಡೆಯಿತು. 15ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.   ಕಾಲೇಜಿನ ಹಿಂದಿ ಸಂಘದ ಉಪನಿರ್ದೇಶಕಿ ಡಾ.ನಾಗರತ್ನರಾವ್‌, ಸ್ನಾತಕೋತ್ತರ ಹಿಂದಿ ವಿಭಾಗದ ಸಂಯೋಜಕಿ ಡಾ. ಸುಮಾಟಿ ಆರ್‌ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Valedictory program-ವಿವಿ ಕಾಲೇಜು ಮಂಗಳೂರಿನಲ್ಲಿ ಇತ್ತೀಚೆಗೆ ಪ್ರಾಂಶುಪಾಲ ಡಾ. ಉದಯಕುಮಾರ್‌ ಎಂ. ಎ ಅವರ ಅಧ್ಯಕ್ಷತೆಯಲ್ಲಿ ನಡೆದ ಹಿಂದಿ ಸಪ್ತಾಹದ ಸಮಾರೋಪದಲ್ಲಿ, ಹಿಂದಿ ಸಂಘದ ಉಪನಿರ್ದೇಶಕಿ ಡಾ.ನಾಗರತ್ನರಾವ್‌, ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ಸುಮಾ ಟಿ ಆರ್‌ ಮೊದಲಾದವರು ಭಾಗವಹಿಸಿದ್ದರು.

Dr, Ravindra Katyayan- ಮುಂಬಯಿಯ ನಾನಾವತಿ ಮಹಿಳಾ ಮಹಾವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ. ರವೀಂದ್ರ ಕಾತ್ಯಾಯನ್‌ ಅವರಿಂದ ವಿಶೇಷ ಉಪನ್ಯಾಸ

Dr.Madhusheela Ayilliath- ಮುಂಬಯಿಯ ಆರ್‌ಬಿಐ ಪ್ರಬಂಧಕ ಡಾ. ಮಧುಶೀಲ ಆಯಿಲಿಯಾಥ್‌ ಅವರಿಂದ ʼಸಾಹಿತ್ಯ ಕ್ಷೇತ್ರದಲ್ಲಿ ಹಿಂದಿʼ ಎಂಬ ಕುರಿತು ವಿಶೇಷ ಉಪನ್ಯಾಸ.