ಮಂಗಳೂರು:- ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೋಲಿಸ್ ಠಾಣೆ ವಾಮಂಜೂರು ಇಲ್ಲಿ ಪ್ರಕರಣ ದಾಖಲಾಗಿದೆ.

     ಜೋಸೆಪ್ ಸೋಜಾ (68) ಎಂಬ ವ್ಯಕ್ತಿ ಮೇ 24ರಂದು ತನ್ನ ಮನೆಯಿಂದ ಹೊರಗೆ ಹೋದವರು ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾರೆ ಹಾಗೂ ಮರೆವು ಖಾಯಿಲೆ ಇರುವುದರಿಂದ ನೆನಪಿನ ಶಕ್ತಿ ಇರುವುದಿಲ್ಲ. ಕಾಣೆಯಾದ ವ್ಯಕ್ತಿಯ  ಚಹರೆ ಇಂತಿವೆ:- ಹೆಸರು - ಜೋಸೆಪ್ ಸೋಜಾ, ಪ್ರಾಯ-68 ವರ್ಷ, ಎತ್ತರ- 168 ಅಡಿ,  ಮೈ ಬಣ್ಣ ಬಿಳಿ, ಸಾಧಾರಣ ಮೈಕಟ್ಟು ಉದ್ದ ಮುಖ,  ಧರಿಸಿದ ಬಟ್ಟೆ- ಪ್ಯಾಂಟ್ ಮತ್ತು ಶರ್ಟ್, ಮಾತನಾಡುವ ಭಾಷೆ-ಕನ್ನಡ, ತುಳು, ಹಿಂದಿ, ಕೊಂಕಣಿ.

     ಕಾಣೆಯಾದ ವ್ಯಕ್ತಿ ಬಗ್ಗೆ ಮಾಹಿತಿ ದೊರಕಿದ್ದಲ್ಲಿ ಠಾಣಾಧಿಕಾರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವಾಮಂಜೂರು ಮಂಗಳೂರು ದೂರವಾಣಿ ಸಂಖ್ಯೆ: 0824-2220535 ಸಂಪರ್ಕಿಸಲು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.