ಮಂಗಳೂರು:- ಸೆಂಟ್ರಲ್ ಮಾರ್ಕೆಟ್ ಕಾನೂನು ಬದ್ಧ ವ್ಯಾಪಾರ ಚಟುವಟಿಕೆಗೆ ಅನುಮತಿ ನೀಡುವಂತೆ ಉಚ್ಚ ನ್ಯಾಯಾಲಯವು ಆದೇಶ ನೀಡಿದೆ ಹಾಗೂ ಆದೇಶವನ್ನು ಮಹಾನಗರ ಪಾಲಿಕೆಗೂ ತಲುಪಿಸಲಾಗಿದೆ. ಆಯುಕ್ತರು 23-09-2020 ಹಾಗೂ 24-09-2020 ರಂದು ತಮಗೆ ವ್ಯಾಪಾರಸ್ಥರು ಭೇಟಿ ಮಾಡಬೇಕು ಎನ್ನುವ ನೋಟಿಸನ್ನು ಫ್ಲೆಕ್ಸ್ ನಲ್ಲಿ ಹೆಚ್ಚೆ ಹಾಕಿ ಮಾರ್ಕೇಟ್ ನ ಬಾಗಿಲುಗಳಿಗೆ ನೇತು ಹಾಕಿದ್ದರು.

ಕಾನೂನು ಬದ್ದವಾದ ಪರವಾನಿಗೆ ಇದ್ದ ಕ್ಲಾಸಿಕ್ ಎಲೆಕ್ಟ್ರಾನಿಕ್ಸ್ ಮತ್ತು ಅದರ ಬದಿಯ ನಾಲ್ಕೈದು ಅಂಗಡಿಗಳು ಕಳೆದ ಮಂಗಳವಾರದಿಂದ ತೆರೆದಿದ್ದರು. ಆದರೆ ಮ.ನ.ಪಾ ವಿದ್ಯುತ್ ಸಂಪರ್ಕ ಕೊಡದೆ ಸತಾಯಿಸುತ್ತಿದೆ ಎನ್ನುವಂತೆ ನೋಡುಗರಿಗೆ ಗೋಚರಿಸುತ್ತದೆ.

ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳದೆ ಇದ್ದರೆ, ಕಳೆದ ಆರು-ಏಳು ತಿಂಗಳುಗಳಿಂದ ಕಾನೂನು ಬದ್ದವಿದ್ದು ವ್ಯಾಪಾರ ಮಾಡಲು ಬಿಡದ ಆಡಳಿತವು ಈಗಲೂ ಸಮರ್ಪಕವಾಗಿ ವ್ಯವಹರಿಸುತ್ತಿಲಾವೊ ಎ೦ದು ಗುಮಾನಿಯಾಗುತ್ತದೆ.