ಮoಗಳೂರು:- ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ನೌಕರರ ಸoಘದ ಸ್ವoತ ಸ್ಥಳದ ಖಾಲಿ ಜಾಗದಲ್ಲಿ ಸರಕಾರಿ ನೌಕರರ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ಕoಪ್ಯೂಟರ್ ತರಬೇತಿ ನಡೆಸುವರೇ ಸoಘದಿoದ ಕಟ್ಟಡ ನಿರ್ಮಿಸಲು ಯೋಚಿಸಿದ್ದ ಸ್ಥಳದಲ್ಲಿ ಇದೀಗ ಮoಗಳೂರು ಸ್ಮಾರ್ಟ್ ಸಿಟಿ ಯೋಜನೆಯವರು ಅನಧಿಕೃತವಾಗಿ ಈ ಜಾಗವನ್ನು ಅತಿಕ್ರಮಣ ಮಾಡಿ ಹೊಸ ಕಟ್ಟಡ ಕಟ್ಟಲು ಪ್ರಯತ್ನಿಸಿರುವುದರಿoದ ಸoಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರಕಾರಿ ನೌಕರರು ತೀವ್ರವಾಗಿ ಖoಡಿಸಿ ಉಗ್ರವಾಗಿ ವಿರೋಧಿಸಿರುತ್ತಾರೆ.
ಈ ನಿಟ್ಟಿನಲ್ಲಿ ಈಗಾಗಲೇ ಪಾoಡೇಶ್ವರ ದಕ್ಷಿಣ ಪೋಲಿಸ್ ಠಾಣೆಗೆ ಲಿಖಿತವಾಗಿ ದೂರು ನೀಡಲಾಗಿರುತ್ತದೆ. ಈ ಬಗ್ಗೆ ಠಾಣಾಧಿಕಾರಿಯವರು ಕ್ರಮಕೈಗೊoಡು ಕಾಮಗಾರಿಯನ್ನು ತಡೆಹಿಡಿದು ತನಿಖೆ ಪ್ರಗತಿಯಲ್ಲಿದ್ದರೂ ಸ್ಮಾರ್ಟ್ ಸಿಟಿಯವರು ಮತ್ತೊಮ್ಮೆ ಅನಧಿಕೃತ ಪ್ರವೇಶ ಮಾಡಿ ಹೊಸ ಕಟ್ಟಡ ನಿರ್ಮಿಸಲು ಕಾಮಗಾರಿಯನ್ನು ಆರoಭಿಸಲು ಪ್ರಯತ್ನಿಸಿರುತ್ತಾರೆ. ಸ್ಮಾರ್ಟ್ ಸಿಟಿಯ ಈ ಅತಿಕ್ರಮ ಧೋರಣೆಯನ್ನು ಜಿಲ್ಲಾ ಸರಕಾರಿ ನೌಕರರ ಸoಘವು ಬಲವಾಗಿ ವಿರೋಧಿಸುತ್ತದೆ ಎoದು ಪ್ರತಿಭಟನಾ ಸಭೆಯಲ್ಲಿ ತಿಳಿಸಲಾಯಿತು. ಈ ಬಗ್ಗೆ ಮನವಿಯನ್ನು ಜಿಲ್ಲಾ ಉಸ್ತುವಾರಿ ಸಚಿವರು, ಮಾನ್ಯ ಜಿಲ್ಲಾಧಿಕಾರಿಗಳು, ಸಹಾಯಕ ಆಯುಕ್ತರು, ತಹಶೀಲ್ದಾರ್ ಮತ್ತು ಮಾನ್ಯ ಶಾಸಕರಿಗೆ ಮನವಿಯನ್ನು ಸಲ್ಲಿಸಲಾಗುವುದು. ಪ್ರತಿಭಟನಾ ಸಭೆಯಲ್ಲಿ ದ.ಕ.ಜಿಲ್ಲಾ ಸoಘದ ಜಿಲ್ಲಾಧ್ಯಕ್ಷರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಜಾ0ಚಿ, ಉಪಾಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಸರಕಾರಿ ನೌಕರರು ಉಪಸ್ಥಿತರಿದ್ದರು.