ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ಗೋಪಾಲಕೃಷ್ಣ ದೇವಾಲಯದ ಮೊಸರು ಕುಡಿಕೆ ಉತ್ಸವದ ಪ್ರಯುಕ್ತ ಆಗಸ್ಟ್ 18 ರಂದು ಶ್ರೀ ಕೃಷ್ಣ ಫ್ರೆಂಡ್ಸ್ ಸರ್ಕಲ್ ವತಿಯಿಂದ 39 ನೇ ವರ್ಷದ ಕಾರ್ಯಕ್ರಮದಲ್ಲಿ ಅಲಂಗಾರು ಈಶ್ವರ ಭಟ್ ರಿಗೆ ಶ್ರೀ ಕೃಷ್ಣ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಉಮಾನಾಥ ಕೋಟ್ಯಾನ್ ಅವರು ಭಾರತೀಯ ಸಾಂಪ್ರದಾಯಿಕ, ಪಾರಂಪರಿಕ ಭಜನೆ, ಕೃಷ್ಣ ವೇಷ, ನಾಟ್ಯ ಸಂಗೀತಗಳನ್ನು ಪ್ರೋತ್ಸಾಹಿಸಿದ ಫ್ರೆಂಡ್ಸ್ ನ ಎಲ್ಲಾ ಸದಸ್ಯರೂ ಅಭಿನಂದನೀಯರು. ಮಾಜಿ ಸಚಿವ ಅಭಯ ಚಂದ್ರ ಜೈನ್ ಮಾತನಾಡಿ ಹಿಂದಿನ ನೆನಪುಗಳನ್ನು ಮೆಲುಕು ಹಾಕಿದರು. ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಮಾತನಾಡಿ ಕೃಷ್ಣ ಫ್ರೆಂಡ್ಸ್ ಮಾದರಿಯ ಕಾರ್ಯಗಳನ್ನು 39 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಗತಿ ಮೆಚ್ಚತಕ್ಕದ್ದು ಎಂದರು.

ಇದೇ ಸಂದರ್ಭದಲ್ಲಿ ಅಂತರ್ ರಾಷ್ಟ್ರೀಯ ಫೋಟೋಗ್ರಫಿ ಪ್ರಶಸ್ತಿ ವಿಜೇತ ಮಾನಸ ರವಿ, ನಾಲ್ಕು ಬಾರಿ ಪತ್ರಕರ್ತ ಸಂಘದ ಅಧ್ಯಕ್ಷರಾದ ಬೆಳುವಾಯಿ ಸೀತಾರಾಮ ಆಚಾರ್ಯರುಗಳನ್ನು ಸನ್ಮಾನಿಸಲಾಯಿತು.

ಅತ್ಯಧಿಕ ಅಂಕ ಗಳಿಸಿದ ಸದಸ್ಯರ ಪ್ರತಿಭಾನ್ವಿತ ಮಕ್ಕಳಾದ ಬೊಕ್ಕಸ ಮೇಘನಾ ರಾವ್, ಸುಹಾನ್ ಕರ್ಕೇರ, ಪೂಜಾ ಭಂಡಾರಿ ಹಾಗೂ ಯಕ್ಷಗಾನೀಯ ಶೈಲಿಯಲ್ಲಿ ಎಲ್ಲಾ ಮೊಸರಿನ ಗಡಿಗೆಗಳನ್ನು ಒಡೆಯುವ ಯಕ್ಷಗಾನೀಯ ವೇಷಧಾರಿ ಚಂದ್ರಶೇಖರ ಮಳಲಿ ಯವರನ್ನು ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಉದ್ಯಮಿ ಶ್ರೀಪತಿ ಭಟ್, ರಾಜ್ಯ ಉಚ್ಛ ನ್ಯಾಯಾಲಯದ ಹಿರಿಯ ನ್ಯಾಯವಾದಿ ಇರುವೈಲು ತಾರಾನಾಥ ಪೂಜಾರಿ, ಉದ್ಯಮಿಗಳಾದ ಆರ್.ಕೆ.ಭಟ್, ಪ್ರಭಾಚಂದ್ರ ಜೈನ್, ನ್ಯಾಯವಾದಿ ಮೇಘರಾಣಿ ಶಿವಾನಂದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಹಾಜರಿದ್ದರು. ಅಧ್ಯಕ್ಷ ಸಂತೋಷ್ ಕುಮಾರ್ ಸ್ವಾಗತಿಸಿದರು. ಸಂಚಾಲಕ ಸುರೇಶ್ ರಾವ್ ಕಾರ್ಯಕ್ರಮ ಸಂಘಟಿಸಿದರು. ಕೋಶಾಧಿಕಾರಿ ಶಿವಾನಂದ ಶಾಂತಿ ಸಹಕರಿಸಿದರು. ಕೆ.ವಿ.ರಮಣ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸುಶಾಂತ್ ಕರ್ಕೇರ ವಂದಿಸಿದರು.