ಮಂಗಳೂರು: ದ.ಕ ಜಿಲ್ಲೆ SSF ಅಧೀನದ ಜೋನ್  ಡಿವಿಜನ್  ಸೆಕ್ಟರ್ ಯುನಿಟಿಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದ ಸಮಾಜದ ಒಳಿತಿಗಾಗಿ ಸೌಹಾರ್ದ ನಾಡನ್ನು ಕಟ್ಟಲು ಯುವ ಸಮೂಹವನ್ನು ದೇಶದ ಪ್ರಜ್ಞಾವಂತ ನಾಗರಿಕರನ್ನಾಗಿ ರೂಪಿಸಿ ಶಿಸ್ತು ಬದ್ದ ತಂಡವನ್ನು ರೂಪಿಸುವುದೇ SSFನ ಮೂಲ ಉದ್ದೇಶ. ಇದರೊಂದಿಗೆ ಮಾನವೀಯ ಸೇವೆಯಲ್ಲಿ ಮುಂಚೂಣೆಯಲ್ಲಿ ನಿಂತು ಸಂಘಟನೆ ಕಾರ್ಯನಿರ್ವಹಿಸುತ್ತಿದ್ದು 2020 ಮಾರ್ಚ್ 25 ರಿಂದ ಮೇ 24 ರ ವರೆಗೆ ಸಮಾಜದ ವಿವಿಧ ಹಂತಗಳಲಿ ಕಷ್ಟಪಡುವವರಿಗಾಗಿ SSF ಕಾರ್ಯಕರ್ತರು ನಿಷ್ಕಳಂಕ ಸೇವೆಯನ್ನು ನೀಡಿರುತ್ತಾರೆ ಎಂದು SSF ದ.ಕ ಜಿಲ್ಲೆಯ ಕೋಶಾಧಿಕಾರಿ ಮುಹಮ್ಮದ್ ಆಲಿ ತುರ್ಕುಳಿಕೆ ಹೇಳಿದರು.
 

 ಲಾಕ್‌ಡೌನ್ ಬಳಿಕ ಸಮಾಜದಲ್ಲಿ ಸಂಕಷ್ಟಗಳನ್ನು ಅನುಭವಿಸುವ ಕುಟುಂಬಗಳು, ರೋಗಿಗಳು, ಕೂಲಿ ಕಾರ್ಮಿಕರು, ಭಿಕ್ಷುಕರು, ಪ್ರಯಾಣಿಕರು, ಹೀಗೆ ಎಲ್ಲರನ್ನೂ ಪರಿಗಣಿಸಿ ಕಿಟ್ ವಿತರಣೆ, ಮಾಸ್ ವಿತರಣೆ, ನಿರಾಶ್ರಿತರಿಗೆ ಆಹಾರ, ಕ್ವಾರಂಟೈನ್ ನಲ್ಲಿರುವವರಿಗೆ ಪುಡ್ ವ್ಯವಸ್ಥೆ, ಹಣ್ಣು ಹಂಪಲು ವಿತರಣೆ, ರೋಗಿಗಳಿಗೆ ರಕ್ತ ನೀಡುವಿಕೆ, ಇಫ್ತಾರ್ ಫುಡ್, ರಮಳಾನ್ ಕಿಟ್, ಭಿಕ್ಷುಕರಿಗೆ ಆಹಾರ - ಔಷಧಿ ತಲುಪಿಸುವ ವ್ಯವಸ್ಥೆ, ಸಂಕಷ್ಟದಲ್ಲಿ ಸಿಲುಕಿದ ಪ್ರಯಾಣಿಕರಿಗೆ ವಾಹನ ವ್ಯವಸ್ಥೆ, ರೋಗಿಗಳನ್ನು ಆಸ್ಪತ್ರೆಗೆ ತಲುಪಿಸುವುದು, ರಕ್ತದಾನಿಗಳನ್ನು ಆಸ್ಪತ್ರೆಗೆ ಕಳುಹಿಸುವುದು, ಮದ್ರಸ ಅಧ್ಯಾಪಕರಿಗೆ ಗೌರವ ಧನ, ಈದ್ ಕಿಟ್ ವಿತರಣೆ, ಪ್ರಾಕೃತಿಕ ವಿಕೋಪ ಕಾರಣ ಹಾನಿಯಾದ ಸ್ಥಳಗಳಲ್ಲಿ ಸೇವೆ, ಕೋವಿಡ್ -19 ಜನಜಾಗೃತಿ ಮೂಡಿಸುವ ಸಲುವಾಗಿ ಜನನಿಬಿಡ ಪ್ರದೇಶಗಳಲ್ಲಿ ಕಾರ್ಯಾಕ್ರಮಗಳನ್ನುಆಯೋಜಿಸಿರುತ್ತಾರೆ.