ಮುಂಬಯಿ: ಮುಂಬಯಿ ಮಹಾನಗರದಲ್ಲಿ ಬಿಲ್ಲವ ಸಮುದಾಯದ ಪ್ರಥಮ ನಗರ ಸೇವಕಿ ಎಂದೆನಿಸಿಕೊಂಡ. ಗೀತಾ ಜತ್ತನ್ (63)  (ಗೀತಾ ವಸಂತ್ ಯಾದವ್) ಸೆ. 3 ರಂದು ಅಂಧೇರಿ ಪೂರ್ವದ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೃದಯಘಾತದಿಂದ ನಿಧನರಾದರು. ಇವರು 2002-07 ರ ತನಕ ಅಂಧೇರಿ ಪಶ್ಚಿಮ ವರ್ಸೋವಾ ಪರಿಸರದ ನಗರ ಸೇವಕಿಯಾಗಿದ್ದರು. 

ಮುಂಬಯಿಯಲ್ಲೇ ಜನಿಸಿ ಬೆಳೆದ ಇವರು ಉಡುಪಿಯ ತೋನ್ಸೆ ಕಲ್ಯಾಣಪುರ ದಿ. ಚಂದಪ್ಪ ಗುರುವಪ್ಪ ಜತ್ತನ್ ಮತ್ತು ಕಾಪು ದಿ. ಕಲ್ಯಾಣಿ ಚಂದಪ್ಪ ಜತ್ತನ್ ದಂಪತಿಯ ಸುಪುತ್ರಿ. ತಂದೆ ದಿ. ಚಂದಪ್ಪ ಗುರುವಪ್ಪ ಜತ್ತನ್ ಖ್ಯಾತ ಉದ್ಯಮಿ ದೀರೂಬಾಯಿ ಅಂಬಾನಿಯವರ ಕಾರಿನ ಚಾಲಕರಾಗಿದ್ದರು. ಮೃತರು ಪತಿ ವಸಂತ ಆರ್ ಯಾದವ್, ಪುತ್ರರಾದ ವಿನಯ್, ಸಂತೋಷ್, ಮನೋಜ್ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಮೀರಾ ಬಾಯಂಧರ್ ಮಹಾನಗರ ಪಾಲಿಕೆಯ ಮಾಜಿ ನಗರ ಸೇವಕ ರೋಹಿತ್ ಸುವರ್ಣ ಸಂತಾಪ ಸೂಚಿಸಿದ್ದಾರೆ.