ಮೂಡುಬಿದಿರೆ:- ದಿನಾಂಕ 24.10.2020 ರಂದು . ಅವಿಭಜಿತ ದ. ಕ. ಜಿಲ್ಲೆಯ ದಿಗಂಬರ ಜೈನಧರ್ಮೀಯರು ಮಹಾರಾಷ್ಟ್ರ, ಕರ್ನಾಟಕ, ಕೇರಳ ವಯನಾಡ್, ತೆಲಂಗಾಣ, ಆಂಧ್ರ ಪ್ರದೇಶ, ತಮಿಳು ನಾಡು ಹಾಗೂ ಅವಿ ಭಜಿತ ದ. ಕ ಜಿಲ್ಲಾ ಜೈನ ಬಾಂಧವರು ವಿವಿಧ ಊರುಗಳಿಂದ ಬಂದ ಸಾವಿರಾರು ಯಾತ್ರಾರ್ಥಿಗಳು ಕ್ಷೇತ್ರ ಬಸದಿ ದರ್ಶನ ಮಾಡಿ ಜೀವದಯಾಷ್ಟಮಿ ಹಾಗೂ 10ನೇ ತೀರ್ಥಂಕರ ಶೀತಲನಾಥಸ್ವಾಮಿ ಮೋಕ್ಷ ಕಲ್ಯಾಣ ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು, ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಶ್ರೀಶ್ರೀಗಳು 24.10.20ರಂದು ಬೆಳಿಗ್ಗೆ 5.45 ರಿಂದ 18 ಬಸದಿ ದರ್ಶನ ಮಾಡಿ ಜಿನೇಂದ್ರ ಭಗವಂತರಿಗೆ ಅರ್ಗ್ಯ ಸಮರ್ಪಿಸಿದರು.
ಬೆಳಿಗ್ಗೆ 10.35 ಕ್ಕೆ ಶ್ರೀ ಜೈ ನ ಮಠದಲ್ಲಿ ವಿಶೇಷ ಅಭಿಷೇಕ ದಲ್ಲಿ ಪಾಲ್ಗೊಂಡು ಧವಲತ್ರಯ ಶಾಸ್ತ್ರದಾನ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಎo. ವಿ ಶೆಟ್ಟಿ. ಅನುವಾದ ಮಾಡಿದ ಸಾಮುದ್ರಿಕ ಶಾಸ್ತ್ರ ಧವಲತ್ರಯ ಟ್ರಸ್ಟ್ ಪ್ರಕಾಶಿತ ಪುಸ್ತಕ ಬೆಟ್ಕೇರಿ ದಿನೇಶ್ ಕುಮಾರ್ ಶಾಸ್ತ್ರದಾನ ಮಾಡಿರುವರು, ರಜನಿ ಲಾಲ್ ಗೋಯಲ್ ಶತಷ್ಟ ನಾಮಾವಳಿ ಪುಸ್ತಕ ಸ್ವಸ್ತಿಶ್ರೀ ಸ್ವಾಮೀಜಿ ಬಿಡುಗಡೆ ಮಾಡಿದರು.
ಪಟ್ಣಶೆಟ್ಟಿ ಸುದೇಶ್ ಕುಮಾರ್, ಎ. ದಿನೇಶ್ ಕುಮಾರ್, ಡಾ. ಎಸ್. ಪಿ. ವಿದ್ಯಾಕುಮಾರ್, ಸಂಜಯಂತ ಕುಮಾರ್, ಯಂ ಬಾಹುಬಲಿ ಪ್ರಸಾದ್ ,ಸಾಹಿತಿ ರವಿರಾಜ್ ಜೈನ್, ಜಿನೇಂದ್ರ ಬಲ್ಲಾಳ್ ಅತಿಥಿಗಳು ಉಪಸ್ಥಿತರಿದ್ದರು.
ಯಾತ್ರಾರ್ಥಿಗಳಿಗಾಗಿ ಭಟ್ಟಾರಕ ಭವನದಲ್ಲಿ ಶ್ರೀಮಠದ ವತಿಯಿoದ ಅಂತರ ಕಾಯ್ದು ಸಾಮೂಹಿಕ ಶುದ್ಧ ಭೋಜನ ವ್ಯವಸ್ಥೆ ಮಾಡಲಾಗಿತ್ತು ಸಂಜೆ ಗುರುಬಸದಿ, ಲೆಪ್ಪದ ಬಸದಿ, ಬೆಂಕಿ ಬಸದಿ ಯಲ್ಲಿ ವಿಶೇಷ ಅಭಿಷೇಕ ನಡೆಯಿತು.