ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡೆಮಿಯ 2019ನೆಯ ಸಾಲಿನ ಗೌರವ ಪ್ರಶಸ್ತಿ, ಯಕ್ಷಸಿರಿ ವಾರ್ಷಿಕ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನ ಪ್ರಶಸ್ತಿ ಪ್ರದಾನ ಸಮಾರಂಭ ನ.8ರಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಕಲಾಭವನ, ಮಂಗಳೂರುನಲ್ಲಿ  ಹಮ್ಮಿಕೊಳ್ಳಲಾಗಿದೆ. ಗೌರವ  ಪ್ರಶಸ್ತಿ ಪುರುಸ್ಕೃತರಾದ ಡಾ. ಚಂದ್ರಶೇಕರ ದಾಮ್ಲೆ, ಯಕ್ಷಸಿರಿ ಪ್ರಶಸ್ತಿ ಪುರಸ್ಕೃತರಾದ ಉಬರಡ್ಕ ಉಮೇಶ ಶೆಟ್ಟಿ , ಕುರಿಯ ಗಣಪತಿ ಶಾಸ್ತ್ರಿ ಮತ್ತು ಪುಸ್ತಕ ಬಹುಮಾನ ಪುರುಸ್ಕೃತರಾದ ಗುರುದೇವ ಪ್ರಕಾಶನ, ಒಡಿಯೂರು [ಶ್ರೀ ಹೊಸ್ತೋಟ ಮಂಜುನಾಥ ಭಾಗವತ ಇವರು ನಿಧನಹೊಂದಿರುವುದರಿಂದ ಇವರ ಪರವಾಗಿ], ಶ್ರೀ ಕೃಷ್ಣಪ್ರಕಾಶ ಉಳಿತ್ತಾಯ ಇವರುಗಳಿಗೆ ಇಲಾಖಾ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು,  ಇತರೆ ಸಚಿವರು, ಶಾಸಕರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನವನ್ನು ಮಾಡಲಾಗುವುದು.

ಗೌರವ ಪ್ರಶಸ್ತಿ ಪುರಸ್ಕೃತರಿಗೆ ತಲಾ ರೂ.50,000/-ಗಳ ಮೊತ್ತವನ್ನು, ಪ್ರಶಸ್ತಿ ಫಲಕ, ಪ್ರಮಾನ ಪತ್ರ, ಹಾರ, ಶಾಲು ಪೇಟೆ ಹಾಗೂ ಫಲತಾಂಬೂಲಗಳನ್ನು ನೀಡಿ ಪುರಸ್ಕರಿಸಲಾಗುವುದು. ಯಕ್ಷಸಿರಿ ಪ್ರಶಸ್ತಿ  ಪುರಸ್ಕೃತರಿಗೆ ತಲಾ ರೂ.25,000/- ಗಳ ಮೊತ್ತವನ್ನು ಪ್ರಮಾಣ ಪತ್ರ, ಹಾರ, ಶಾಲು, ಪೇಟೆ ನೀಡಿ ಪುರಸ್ಕರಿಸಲಾಗುವುದು.ಪುಸ್ತಕ ಬಹುಮಾನ ಪುರಸ್ಕೃತರಿಗೆ ತಲಾ ರೂ.25,000/- ಗಳ ಮೊತ್ತವನ್ನು ಪ್ರಮಾನ ಪತ್ರ, ಹಾರ, ಶಾಲು, ಪೇಟ ನೀಡಿ  ಪುರಸ್ಕರಿಸಲಾಗುವುದು.

ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಅಕಾಡೆಮಿಯ ಅಧಕ್ಷರು ಮತ್ತು ಸದಸ್ಯರಿಂದ ತಾಳಮದ್ದಲೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಕೋವಿಡ್-19 ಹಿನ್ನಲೆಯಲ್ಲಿ ಅಂತರ ಕಾಯ್ದಿರಿಸಿಕೊಳ್ಳವುದು, ಮಾಸ್ಕ್ ಕಡ್ಡಾಯವಾಗಿ ಧರಿಸುವುದು ಮತ್ತು ಕೈಗಲ ಸ್ವಚ್ಛತೆ ಕಾಪಾಡಿಕೊಳ್ಳುವುದು ಈ ನಿಯಮವನ್ನು ಪಾಲಿಸಲು ಎಲ್ಲಾ ಪ್ರಶಸ್ತಿ ವಿಜೇತರಿಗೂ ಹಾಗೂ ಸಮಾರಂಭಕ್ಕೆ ಆಗಮಿಸುವ ಎಲ್ಲಾ ಕಲಾಭಿಮಾನಿಗಳಿಗೂ ಕಡ್ಡಾಯವಾಗಿ ಪಾಲಿಸಲು ವಿನಂತಿಸಿದೆ ಎಂದು ಸದಸ್ಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ತಿಳಿಸಿದ್ದಾರೆ.