ಮಂಗಳೂರು:- ಮಂಗಳೂರಿನ ಬೊಂದೆಲ್‍ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಹಯೋಗದೊಂದಿಗೆ ‘ಎಂಆರ್‍ಪಿಎಲ್-ಎಂಎಸ್‍ಎನ್‍ಐಎಂ ವಿಜಿಲೆನ್ಸ್ ಜಾಗೃತಿ ಸ್ಪರ್ಧೆಗಳು 2020’ ಅನ್ನು ವಿದ್ಯಾರ್ಥಿಗಳಿಗೆ ಎಂಆರ್‍ಪಿಎಲ್‍ನ ವಿಜಿಲೆನ್ಸ್ ಜಾಗೃತಿ ಸಪ್ತಾಹದ ಅಂಗವಾಗಿ ಆಯೋಜಿಸಿತು. ಈ ವರ್ಷದ ಥೀಮ್ `ವಿಜಿಲೆಂಟ್ ಇಂಡಿಯಾ-ಸಮೃದ್ಧ ಭಾರತ' ಕ್ಕೆ ಅನುಗುಣವಾಗಿ, ಅಖಿಲ ಭಾರತ ಮಟ್ಟದ ಸ್ಪರ್ಧೆಗಳನ್ನು ಅಕ್ಟೋಬರ್ ತಿಂಗಳಲ್ಲಿ ಆನ್‍ಲೈನ್ ಮೂಲಕ ನಡೆಸಲಾಯಿತು.

ಜಾಗೃತಿ ಮೂಡಿಸಲು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸಲು ಪ್ರಬಂಧ (ಇಂಗ್ಲಿಷ್, ಕನ್ನಡ ಮತ್ತು ಹಿಂದಿ), ಪೋಸ್ಟರ್ / ಇ-ಪೋಸ್ಟರ್ ಮತ್ತು ಇ-ರಸಪ್ರಶ್ನೆಗಳಲ್ಲಿ ಸ್ಪರ್ಧೆಗಳು ನಡೆದವು. ಸ್ಪರ್ಧೆಗಳಿಗೆ ಭಾರತದಾದ್ಯಂತದ ಕಾಲೇಜುಗಳ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಯಿತು. ವಿವಿಧ ರಾಜ್ಯಗಳಿಂದ ಪ್ರಬಂಧ ಮತ್ತು ಪೋಸ್ಟರ್ ಸ್ಪರ್ಧೆಗಳಿಗೆ 105 ನೋಂದಣಿಗಳನ್ನು ಸ್ವೀಕರಿಸಲಾಯಿತು. ರಸಪ್ರಶ್ನೆಯಲ್ಲಿ ಭಾಗವಹಿಸಿದ ಒಟ್ಟು 4173 ಸ್ಪರ್ಧಿಗಳಲ್ಲಿ 3716 ಇ-ಪ್ರಮಾಣಪತ್ರಗಳನ್ನು ಡೌನ್‍ಲೋಡ್ ಮಾಡಿದ್ದಾರೆ.

ಪ್ರಶಸ್ತಿ ವಿತರಣಾ ಸಮಾರಂಭವು ಗುರುವಾರ 29 ನೇ ಅಕ್ಟೋಬರ್ 2020 ರಂದು ಮಂಗಳೂರಿನ ಬೊಂದೆಲ್‍ನಲ್ಲಿರುವ ಎಂಎಸ್‍ಎನ್‍ಐಎಂ ಕ್ಯಾಂಪಸ್‍ನಲ್ಲಿ ನಡೆಯಿತು. ಪ್ರೇಕ್ಷಕರು ಜೂಮ್ ಆನ್‍ಲೈನ್ ಪ್ಲಾಟ್‍ಫಾರ್ಮ್ ಮೂಲಕ ಭಾಗವಹಿಸಿದರು. ಈ ಕಾರ್ಯಕ್ರಮವನ್ನು ಎಂಆರ್‍ಪಿಎಲ್‍ನ ಸಿಬ್ಬಂದಿವರ್ಗ, ಎಂಎಸ್‍ಎನ್‍ಐಎಂ ಬೋಧಕವರ್ಗ, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಮತ್ತು ಭಾರತದಾದ್ಯಂತದ ಕಾಲೇಜುಗಳಿಂದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದವರು ಮತ್ತು ವಿಜೇತರು ವೀಕ್ಷಿಸಿದರು.

ಎಂಆರ್‍ಪಿಎಲ್‍ನ ಮುಖ್ಯ ವಿಜಿಲೆನ್ಸ್ ಅಧಿಕಾರಿ ರಾಜೀವ್ ಕುಶ್‍ವಹಾ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉದ್ಯಮದಲ್ಲಿ ಉದ್ಯೋಗಕ್ಕೆ ತೆರಳುವಾಗ ವ್ಯವಸ್ಥೆಯನ್ನು ಬಲಪಡಿಸುವಂತೆ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ``ಸಮಗ್ರತೆ ಎಂದರೆ ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಸರಿಯಾದ ಕೆಲಸವನ್ನು ಮಾಡುವುದು. ಭ್ರಷ್ಟಾಚಾರವನ್ನು ತಡೆಯಲು ಕೇವಲ ತಡೆಗಟ್ಟುವ ಕ್ರಮಗಳನ್ನು ಹೊಂದಿರುವುದಕ್ಕಿಂತ ಕಾನೂನುಬಾಹಿರ ಚಟುವಟಿಕೆಗಳನ್ನು ಅನುಮತಿಸದ ಫೂಲ್‍ಪ್ರೂಫ್ ವ್ಯವಸ್ಥೆಯನ್ನು ನಿರ್ಮಿಸುವುದು ಉತ್ತಮ,'' ಎಂದು ಅವರು ಹೇಳಿದರು. ಸಿಬಿಐ ಕೂಡ ಭಾರತದಾದ್ಯಂತ ``ವಿಜಿಲೆನ್ಸ್ ಜಾಗೃತಿ ಸಪ್ತಾಹ'' ನಡೆಸುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಎಂಆರ್‍ಪಿಎಲ್ ಜಿಎಂ ವಿಜಿಲೆನ್ಸ್  ಲಕ್ಷ್ಮೀಶ ಭಟ್ ಅವರು ಸಮಗ್ರತೆಯ ಪ್ರತಿಜ್ಞೆಯನ್ನು ನಿರ್ವಹಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಬ್ಲ್ಯುಎನ್‍ಇಎಸ್ ಅಧ್ಯಕ್ಷ ಶ್ರೀ ಕುಡ್ಪಿ ಜಗದೀಶ್ ಶೆಣೈ ಅವರು ಉತ್ತಮ ಆಡಳಿತದ ಮಹತ್ವವನ್ನು ಒತ್ತಿ ಹೇಳಿದರು. ``ಭ್ರಷ್ಟಾಚಾರವು ಆಡಳಿತವನ್ನು ತಡೆಯುತ್ತಿದೆ. ಆರ್ಥಿಕ ಅಭಿವೃದ್ಧಿಗೆ ಅನುಕೂಲವಾಗುವಂತೆ ವಿಜಿಲೆನ್ಸ್ ಪ್ರಮುಖ ಪಾತ್ರ ವಹಿಸುತ್ತದೆ,'' ಎಂದು ಹೇಳಿದರು.

ಎಂಎಸ್‍ಎನ್‍ಐಎಂ ನ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ಅವರು ಸ್ವಾಗತಿಸಿದರು ಮತ್ತು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ರುಡಾಲ್ಫ್ ನೊರೊನ್ಹಾ (ಜಿಎಂ ಕಾರ್ಪೊರೇಟ್  ಕಮ್ಯುನಿಕೇಷನ್ಸ್, ಎಂಆರ್‍ಪಿಎಲ್) ಧನ್ಯವಾದಗಳನ್ನು ಸಲ್ಲಿಸಿದರು. ಎಂಎಸ್‍ಎನ್‍ಐಎಂ ನ ಸಹಾಯಕ ಪೋಫೆಸರ್ ದಿವ್ಯಾ ಶೆಟ್ಟಿ ಮತ್ತು ಎಂಆರ್‍ಪಿಎಲ್ ನ ಹಿರಿಯ ವ್ಯವಸ್ಥಾಪಕ  ಪ್ರವೀಣ್ ಪಿಂಟೊ ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು. ಸಹಾಯಕ ಪೋಫೆಸರ್ ರಿಧ್ವಿಕಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು.

ಬಹುಮಾನ ವಿಜೇತರು:-

ಉದ್ಘಾಟನೆಯ ನಂತರ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರನ್ನು ಘೋಷಿಸಲಾಯಿತು. ಪ್ರತಿ ವಿಭಾಗದಲ್ಲಿ ಪ್ರಥಮ, ದ್ವಿತೀಯ, ತೃತೀಯ ಮತ್ತು ಎರಡು ಸಮಾಧಾನಕರ ಬಹುಮಾನಗಳ ಸಹಿತ 5 ಬಹುಮಾನಗಳನ್ನು ನೀಡಲಾಯಿತು. ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿದವರಿಗೆ ಅವರ ವೈಯಕ್ತಿಕ ಅಂಕಗಳನ್ನು ನೀಡುವ ಮೂಲಕ ಇ-ಪ್ರಮಾಣಪತ್ರಗಳನ್ನು ನೀಡಲಾಯಿತು.

ಇಂಗ್ಲಿಷ್ ಪ್ರಬಂಧ ಸ್ಪರ್ಧೆ:

ಪ್ರಥಮ ಬಹುಮಾನ: ವೀಣಾ ಶೆಟ್ಟಿ, ಗೋವಿಂದ ದಾಸ ಪದವಿ ಕಾಲೇಜು, ಸೂರತ್‍ಕಲ್

ದ್ವಿತೀಯ ಬಹುಮಾನ: ಸಾತ್ವಿಕ್ ಶೆಟ್ಟಿ, ಕೆನರಾ ಎಂಜಿನಿಯರಿಂಗ್ ಕಾಲೇಜು, ಮಂಗಳೂರು

ಮೂರನೇ ಬಹುಮಾನ: ದಿಲ್ನಾ ಕೆ., ದಿ ಸ್ಕೂಲ್ ಆಫ್ ಸೋಷಿಯಲ್ ವರ್ಕ್, ರೋಶ್ನಿ ನಿಲಯ, ಮಂಗಳೂರು

ಹಿಂದಿ ಪ್ರಬಂಧ ಸ್ಪರ್ಧೆ:

ಪ್ರಥಮ ಬಹುಮಾನ: ಕಿರಣ್ ಎಂ, ಕೊಯಮತ್ತೂರಿನ ಕೆಜಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ

ಎರಡನೇ ಬಹುಮಾನ: ಫಾತಿಮಾ, ಜಿಎಫ್‍ಜಿಸಿ, ಬೆಲ್ತಂಗಡಿ

ಮೂರನೇ ಬಹುಮಾನ: ವೆನಿಶ್ಯ ಲಾಸಾಡೊ, ಕಾರ್ಮೆಲ್ ಕಾಲೇಜು, ಬಂಟವಾಳ

ಕನ್ನಡ ಪ್ರಬಂಧ ಸ್ಪರ್ಧೆ:

ಪ್ರಥಮ ಬಹುಮಾನ: ಶರತ್ ಶೆಟ್ಟಿ, ಡಾ.ಬಿ ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು, ಕುಂದಾಪುರ

ದ್ವಿತೀಯ ಬಹುಮಾನ: ಕಾವ್ಯಾ ಪಿ., ದಯಾನಂದ ಪೈ ಸತೀಶ್ ಪೈ ಜಿಎಫ್‍ಜಿಸಿ, ಮಂಗಳೂರು

ಮೂರನೇ ಬಹುಮಾನ: ರೋಶ್ನಿ ವಿಲ್ಮಾ ಲೋಬೊ, ಕಾರ್ಮೆಲ್ ಕಾಲೇಜು, ಬಂಟವಾಳ

ಪೋಸ್ಟರ್ ಸ್ಪರ್ಧೆ:

ಪ್ರಥಮ ಬಹುಮಾನ: ಅಂಕಿತಾ ಪೈ, ಎಸ್‍ಡಿಎಂ ಕಾಲೇಜು, ಉಜಿರೆ

ಎರಡನೇ ಬಹುಮಾನ: ಸೊಲಿಟಾ ರೊಡ್ರಿಗಸ್, ಭಂಡಾರ್ಕರ್ಸ್ ಆರ್ಟ್ಸ್ & ಸೈನ್ಸ್ ಕಾಲೇಜು, ಕುಂದಾಪುರ

ಮೂರನೇ ಬಹುಮಾನ: ರೇಖಾ ಪ್ರಕಾಶ್ ಆಚಾರ್, ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಪುತ್ತೂರು