ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕಿನ, ಕರ್ಲ, ತೆಂಕಕಜೆಕ್ಕಾರು ಒಕ್ಕೂಟದ ಅಧ್ಯಕ್ಷನಾಗಿರುವ ಸುಂದರ ಪೂಜಾರಿ, ಬಿನ್: ಜಾಣು ಪೂಜಾರಿಯವರು 8 ವರ್ಷಗಳ ಹಿಂದೆ ಮದ್ಯ ಸೇವನೆಯ ಚಟಕ್ಕೆ ಒಳಗಾಗಿ ಜೀವನದ ಭರವಸೆ ಕಳಕೊಂಡವರಾಗಿರುತ್ತಾರೆ. ಜೀವನ ಮತ್ತು ಕುಟುಂಬ ನಿರ್ವಹಣೆಗೆ ಪರದಾಡುವ ಪರಿಸ್ಥಿತಿಯಲ್ಲಿರುವಾಗ ಬಂಟ್ವಾಳ ಮೆಲ್ಕಾರ್ ನಲ್ಲಿರುವ ರೋಟರಿ ಕ್ಲಬ್ ಕಟ್ಟಡದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ 487ನೇ ಶಿಬಿರ ನಡೆಯುತ್ತಿದೆ ಎಂಬ ವಿಚಾರ ತಿಳಿದು, ಸ್ವಇಚ್ಛೆಯಿಂದ ಶಿಬಿರಕ್ಕೆ ದಾಖಲಾಗಿರುತ್ತಾರೆ.
45 ಶಿಬಿರಾರ್ಥಿಗಳು ಈ ಶಿಬಿರದಲ್ಲಿದ್ದು, 14ನೇ ಕ್ರ.ಸಂ.ಯಲ್ಲಿ ದಾಖಲಾದ ಇವರು ಶಿಬಿರದಲ್ಲಿ ಬದಲಾವಣೆಯ ಕನಸು ಕಾಣುತ್ತಿದ್ದರು. ತನಗಿರುವ ಜಮೀನನ್ನುಅಭಿವೃದ್ಧಿ ಪಡಿಸಿ, ಕೃಷಿಯ ಕಡೆಗೆ ಒಲವು ತೋರಿಸಿದರು. ಇದರ ಪರಿಣಾಮವಾಗಿ 50 ಮಲ್ಲಿಗೆಗಿಡ, 300 ಅಡಿಕೆಗಿಡ, ತೆಂಗು, ತರಕಾರಿ ಕೃಷಿ, ಕಾಳು ಮೆಣಸು ಹೀಗೆ ನಿರಂತರ ಕೃಷಿಯಲ್ಲಿ ತೊಡಗಿಸಿಕೊಂಡು ಉತ್ತಮಜೀವನ ನಡೆಸುತ್ತಿದ್ದೇನೆ ಎಂದು ಸಂತೋಷ ವ್ಯಕ್ತ ಪಡಿಸುತ್ತಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಮೂಲ ಫಲಾನುಭವಿಯಾಗಿ ಸರ್ವೋದಯ ಪ್ರಗತಿಬಂಧು ಮತ್ತು ಸ್ವಸಹಾಯ ಸಂಘದ ಸದಸ್ಯರಾಗಿರುವ ಕಾರಣಕ್ಕಾಗಿಯೇ ಈ ಸಾಧನೆ ಮಾಡಲು ಸಾಧ್ಯವಾಯಿತು ಎನ್ನುತ್ತಾರೆ.16 ವರ್ಷದಿಂದ ಯೋಜನೆಯ ಸ್ವಸಹಾಯ ಸಂಘದಮೂಲಕ ಲಕ್ಷಗಟ್ಟಲೆ ಸಾಲವನ್ನು ಪಡೆದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿರುತ್ತಾರೆ.ಪ್ರಸ್ತುತಹೈನುಗಾರಿಕೆಯಲ್ಲಿ ಒಲವು ತೋರಿಸಿ ದಿನಕ್ಕೆ 15 ಲೀ. ಹಾಲನ್ನು ಡೈರಿಗೆ ಮಾರುತ್ತಿದ್ದಾರೆ.
ಮಡದಿ ಬೇಬಿ ಇವರ ಸಾಧನೆಯಲ್ಲಿಕೈಜೋಡಿಸುತ್ತಿದ್ದು, ಮಗಳು ಲಾಲಿತ್ಯ 8ನೇ ಕ್ಲಾಸಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.‘ಸೂರ್ಯೋದಯ ನವಜೀವನ ಸಮಿತಿ’ಯಲ್ಲಿ 26 ಸದಸ್ಯರುಆತ್ಮೀಯತೆಯಿಂದ ಸಭೆ ಸೇರಿ ವಿಚಾರ ವಿನಿಮಯ ಮಾಡುತ್ತಿದ್ದಾರೆ. ಶಿಬಿರದಿಂದ ಮತ್ತು ಯೋಜನೆಯಿಂದ ನಮ್ಮಜೀವನ ಪಾವನವಾಯಿತು, ಪೂಜ್ಯ ಡಾ| ಡಿ.ವೀರೇಂದ್ರ ಹೆಗ್ಗಡೆಯವರ, ಮಾತೃ ಶ್ರೀ ಹೇಮಾವತಿ ಅಮ್ಮನವರ ಸಾಮಾಜಿಕ ಕಳಕಳಿ ನಮ್ಮಂತಹಜನರಿಗೆ ನೆಮ್ಮದಿಯಿಂದ ಬದುಕಲು ಅವಕಾಶವಾಯಿತು. ಈಗ ಯಾವ ಟೆನ್ಷನ್ ನಮಗಿಲ್ಲ, ಯಾವ ಪರಿಸ್ಥಿತಿಯನ್ನೂ ಧೈರ್ಯವಾಗಿ ಎದುರಿಸುವ ಆತ್ಮಸ್ಥೆರ್ಯ ನನ್ನಲ್ಲಿದೆ. ಮಗಳಿಗೆ, ಮಡದಿಗೆ ಚಿನ್ನಖರೀದಿ, ಸ್ವತ: ಓಡಾಡಲು ಬೈಕ್ ಎಲ್ಲವೂ ಯೋಜನೆಯ ಮೂಲಕವೇ ಸಾಧ್ಯವಾಗಿದೆ. ಸೇವಾ ಪ್ರತಿನಿಧಿ ಸುಧಾರವರು ನಮ್ಮ ಯೋಗ ಕ್ಷೇಮ ವಿಚಾರವನ್ನು ನಿರಂತರ ಮಾಡುತ್ತಿದ್ದು, ಮೇಲ್ವಿಚಾರಕಿ ಭವಾನಿ, ಯೋಜನಾಧಿಕಾರಿ ಜಯಾನಂದರವರು ನಮ್ಮಜೊತೆ ನಿತ್ಯ ಸಂಪರ್ಕವನ್ನುಇಟ್ಟುಕೊಂಡು ಪ್ರೋತ್ಸಾಹಿಸುತ್ತಾರೆ ಎಂದು ಸಂತೋಷ ವ್ಯಕ್ತ ಪಡಿಸುತ್ತಾರೆ.
ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಸುಂದರ ಪೂಜಾರಿ, ಮೊ:8197908771, 9844665179.
ಬರಹ : ವಿವೇಕ್ ವಿ. ಪಾೈಸ್