ಪುತ್ತೂರು : ನಾವು ಸಣ್ಣವರಿರುವಾಗ ಅಕ್ಷರಗಳು ದುಂಡಾಗಿ ಕಾಣುವಂತೆ ಬರೆಯಲು ಪ್ರೇರೇಪಿಸುತ್ತಿದ್ದ ಸಾಧನವೆಂದರೆ ಮುಖ್ಯವಾದದ್ದು ಸ್ಲೇಟು. ಸಾಧಾರಣವಾಗಿ ಒಂದರಿಂದ ಸುಮಾರು ಐದು ಅಥವಾ ಆರು, ಏಳನೇ ತರಗತಿಯವರೆಗೂ ಸ್ಲೇಟುಗಳ ವ್ಯಾಪ್ತಿ ಪಸರಿಸಿತ್ತು. ಪ್ರತಿದಿನವೂ ಅದರ ಎರಡೂ ಬದಿಗಳಲ್ಲೂ ಲೆಕ್ಕ ಮಾಡೋದೇನು? ಕೋಪಿ ಬರೆಯೋದೇನು? ಆಹಾ.. ನೆನೆದಾಗಲೆಲ್ಲ ಮನಸ್ಸು ಬಾಲ್ಯಕಾಲಕ್ಕೆ ಓಡುತ್ತಲೇ ಇರುತ್ತದೆ. ಯುಗಾದಿ ಹಬ್ಬ ಪ್ರತೀ ವರ್ಷ ಬಂದಂತೆ!
ಆದರೆ ಈಗಿನ ಮಕ್ಕಳಿಗೆ ಸ್ಲೇಟುಗಳು ಬಹಳ ಕಡಿಮೆ ಉಪಯೋಗವಾಗುತ್ತಿವೆ.!! ನನ್ನೆಣಿಕೆ ಪ್ರಕಾರ ಈಗಿನ ಮಕ್ಕಳಿಗೆ ಅಂಗನವಾಡಿಯಲ್ಲಿ, ಹಾಗೂ ನರ್ಸರಿ ಶಾಲೆಗಳಲ್ಲಿ ಸ್ವಲ್ಪ ಮಟ್ಟಿಗೆ ಸ್ಲೇಟುಗಳು ಉಪಯೋಗ ಆಗುತ್ತಿವೆ. ಉಳಿದಂತೆ ಒಂದರಿಂದ ಯಾವುದೇ ಮಕ್ಕಳು ಸ್ಲೇಟು ಉಪಯೋಗಿಸುವುದು ಇಲ್ಲ.
ಒಂದು ಕ್ಷಣ ಯೋಚಿಸಬೇಕಾಗಿದೆ!!!! ನಾವು ಮತ್ತು ನೀವುಗಳು ಎಲ್ಲಾ.. ಪರಿಸರ ಸಂರಕ್ಷಣೆಗೆ, ಹಸಿರಿನ ಉಳಿವಿಗೆ, ಅಲ್ಲವೇ? ಇಂದಿನ ಶಿಕ್ಷಣ ಕ್ರಮದಲ್ಲಿ ಪುಸ್ತಕಗಳೇ ಸ್ಲೇಟುಗಳ ಕಾರ್ಯ ನಿರ್ವಹಿಸುತ್ತಿವೆ. ಅದನ್ನು ಸ್ವಲ್ಪ ಕಡಿತಗೊಳಿಸಿ ಸ್ಲೇಟುಗಳನ್ನೇ ಕನಿಷ್ಠ ಒಂದರಿಂದ ಐದನೇ ತರಗತಿಯವರೆಗೆ ಉಪಯೋಗಿಸಿದಲ್ಲಿ ರಫ್ ಪುಸ್ತಕವೆಂದು ಬಳಕೆಯಾಗುವ ಒಂದು ಮಗುವಿಗೆ ಸುಮಾರು ಏಳರಿಂದ ಎಂಟು ಅಥವಾ ಅದಕ್ಕೂ ಹೆಚ್ಚು ಶೈಕ್ಷಣಿಕವಾಗಿ ಬಳಕೆಯಾಗುವುದನ್ನು ತಪ್ಪಿಸಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಪ್ರಜೆಯೂ, ಶಿಕ್ಷಣ ಇಲಾಖೆ ಹಾಗೂ ಪ್ರತೀ ಶಾಲೆಗಳೂ ಇದರ ಬಗ್ಗೆ ಗಮನ ಹರಿಸುವುದು ಉತ್ತಮ.
ಯಾಕೋ ಏನೋ ಮನಸ್ಸಿಗೆ ಈ ಯೋಚನೆ ಬಂದಾಗಲೇ ಹೊಸ ನಿರೀಕ್ಷೆಯ ಹಾದಿಯಲ್ಲಿ ಕಾರಂಜಿಯು ಉತ್ಪನ್ನವಾದಂತೆ ಪುಳಕಗೊಂಡಿತು. ಪರಿಸರದ ವಿಪರೀತ ತಾಪಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಮಕ್ಕಳು ರಫ್ ಪುಸ್ತಕದಲ್ಲಿ ಬರೆಯುವ ಬದಲು ಸ್ಲೇಟುಗಳಲ್ಲಿ ಬರೆಯಲಿ, ಅಲ್ಲವೇ? ಏನಂತೀರಿ.. ಪರಿಸರ ಸಂರಕ್ಷಣೆಯ ಜಾಗೃತಿ ಹೀಗೊಂದು ರೀತಿಯಲ್ಲಿ ನಡೆಯಲಿ ಎಂಬುದೇ ಆಶಯ.
-ಮಲ್ಲಿಕಾ-ಜೆ-ರೈ