COVID 19 ಅಥವಾ corona virus ಸಾಂಕ್ರಾಮಿಕ ರೋಗವು ಇಡೀ ಜಗತ್ತಿಗೆ ಹರಡಿದೆ . ಈ ಸಂದರ್ಭದಲ್ಲಿ ಮುಂದಿನ ದಿನಗಳಲ್ಲಿ ಏನಾಗಬಹುದು ಎಂಬ ಅನಿಶ್ಚಿತತೆ ಎಲ್ಲರ ಮನಸ್ಸಿನಲ್ಲಿ ಇರುತ್ತದೆ. ಸಾಮಾನ್ಯವಾಗಿ ಈ ಸಂದರ್ಭಗಳಲ್ಲಿ ಮನಸ್ಸಿಗೆ ಒತ್ತಡ ಮತ್ತು ತಳಮಳ ಹೆಚ್ಚಾಗುತ್ತದೆ. ಅದನ್ನು ಸೀಮಿತದಲ್ಲಿ ತರುವ ಪ್ರಯತ್ನವನ್ನು ದಿನ ನಿತ್ಯ ಮಾಡಬೇಕು.
COVID 19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಮಾಜಿಕ ಅಂತರ ಮತ್ತು ಸ್ವಚ್ಛತೆಯನ್ನು ಕಾಪಾಡುವುದು ಬಹಳ ಮುಖ್ಯವಾದ ವಿಧಾನಗಳು. ಸಾಮಾಜಿಕ ಅಂತರವನ್ನು ಕಾಪಾಡಲು ಸರ್ಕಾರವು ಲಾಕ್ಡೌನ್ ವಿಧಿಸಿದೆ. ಸಾಮಾಜಿಕ ಅಂತರ ದಲ್ಲಿ ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯಿಂದ ಕನಿಷ್ಠ 1ರಿಂದ2 ಮೀಟರ್ ಅಂತರವಿರಬೇಕು. ಸ್ವಚ್ಛತೆ ಕಾಪಾಡಲು ಪದೇ ಪದೇ ಕೈ ತೊಳೆಯುತ್ತಿರುವುದು. ಕೆಮ್ಮು ಅಥವಾ ಸೀನು ಬಂದಾಗ ಪೇಪರ್ ಅಥವಾ ಕರ್ಚಿಫ್ ಉಪಯೋಗಿಸುವುದು. ನಮ್ಮ ಕೈಗಳಿಂದ ಮುಖ, ಮೂಗು ಮತ್ತು ಬಾಯಿಯನ್ನು ಮುಟ್ಟ ಬಾರದು.
ಸಾಮಾನ್ಯ ಮಾನಸಿಕ ಅಸ್ವಸ್ಥತತೆ ತೀವ್ರವಾಗಬಹುದು.
ಸದಾ ಸಾಂಕ್ರಾಮಿಕ ಬಗ್ಗೆ ಓದುವುದು, ಸಾಮಾಜಿಕ ಜಾಲತಾಣ ಮತ್ತು ಸುದ್ದಿ ವಾಹಿನಿಯನ್ನು ನೋಡುವುದರಿಂದ ಮನಸ್ಸಿಗೆ ಆತಂಕ, ತಳಮಳ, ನಿದ್ದೆ , ಏಕಾಗ್ರತೆ ಕಮ್ಮಿಯಾಗುತ್ತದೆ. ಮನಸ್ಸಿಗೆ ದುಃಖ ನಕಾರತ್ಮಕ ಆಲೋಚನೆಗಳು ತೀವ್ರಗೊಳ್ಳುತ್ತವೆ. ನಾನು ಅಂದುಕೊAಡAತೆ ಯಾವುದೇ ನಿರೀಕ್ಷೆ ಈಡೇರಲಿಲ್ಲ ಮುಂದೆ ಈಡೇರುವುದಿಲ್ಲ. ನನಗೆ ಅಥವಾ ನನ್ನ ಕುಟುಂಬದವರಿಗೆ ಮುಂದೆ ಏನಾಗಬಹುದು ಎಂಬ ಆಲೋಚನೆಗಳು ಕಾಡಬಹುದು. ನಕಾರಾತ್ಮಕ ಆಲೋಚನೆಗಳು ಅತಿಯಾದಾಗ ಆತ್ಮಹತ್ಯೆ ಮಾಡಿಕೊಳ್ಳುವ ಎಂದು ಅನಿಸ ಬಹುದು. ಆದರೆ ಆತ್ಮಹತ್ಯೆ ಎಲ್ಲದಕ್ಕೂ ಉತ್ತರವಲ್ಲ.
ಇಲ್ಲಿ ತಿಳಿದುಕೊಳ್ಳುವ ವಿಚಾರವೇನೆಂದರೆ ಅತಿಯಾದ ಒತ್ತಡದಿಂದ ನಮ್ಮ ದೇಹದಲ್ಲಿ immunity ಕಮ್ಮಿಯಾಗುತ್ತದೆ. ಇದರಿಂದ ರೋಗ ಬರುವ ಸಾಧ್ಯತೆಗಳು ಜಾಸ್ತಿಯಾಗುತ್ತದೆ.
ಗೀಳು (OCD) ಆಲೋಚನೆ ಉಲ್ಬಣಗೊಳ್ಳಬಹುದು .
ಲಾಕ್ಡೌನ್ ನಿಂದ ಹೆಚ್ಚು ಸಮಯ ಮನೆಯಲ್ಲಿ ಇರುವುದರಿಂದ ಗೀಳು ಹೆಚ್ಚಾಗಬಹುದು. ಸ್ವಚ್ಛತೆ ಕಾಪಾಡಿಕೊಳ್ಳ ಬೇಕಿರುವುದರಿಂದ ಹೆಚ್ಚು ಹೊತ್ತು ಕೈ ತೊಳೆಯುವುದು, ಮನೆಯನ್ನು ಸ್ವಚ್ಛ ವಾಗಿಡು ವುದು ಇತ್ಯಾದಿ. ಆದ್ದರಿಂದ ಈ ಲಕ್ಷಣಗಳು ಉಲ್ಬಣಗೊಳ್ಳುತ್ತದೆ.
ಉಪಾಯ -
● ಅದನ್ನು ಕಮ್ಮಿ ಮಾಡಲು ವೈದ್ಯರು ನೀಡಿದ ಔಷಧಿಯನ್ನು ತಪ್ಪದೇ ತೆಗೆದುಕೊಳ್ಳುವುದು.
● ಆಲೋಚನೆಯನ್ನು ಅರ್ಥಮಾಡಿಕೊಂಡು ಒತ್ತು ನೀಡದಿರುವುದು.
● ಆಲೋಚನೆ ಕೆಲವು ನಿಮಿಷದಲ್ಲಿ ಹೋಗುತ್ತದೆಂದು ಬೇರೆಡೆ ಗಮನ ಹರಿಸುವುದು.
ನಮ್ಮ ಆಲೋಚನೆಗಳನ್ನು ಬದಲಿಸಬೇಕಾಗುತ್ತದೆ.
ಆಲೋಚನೆಯ ದೋಷಗಳು ಪರ್ಯಾಯ ಆಲೋಚನೆಗಳು
ಸದಾ ಮನೆಯಲ್ಲಿ ಇರುವುದರಿಂದ ನನಗೆ ನಿರಾಶೆ ಮತ್ತು ಹಿಂಸೆ ಆಗುತ್ತಿದೆ. ನಾನು ಮನೆಯಲ್ಲಿ ಇದ್ದರೆ ಸುರಕ್ಷಿತವಾಗಿರುತೇನೆ ಮತ್ತು ನಾನು ಆಲೋಚಿಸಿದ ಹಾಗೂ ಬಾಕಿ ಇರುವ ಹಲವಾರು ಕೆಲಸಗಳನ್ನು ಮುಗಿಸಬಹುದು.
ನನ್ನ ಜೀವನ ಬಹಳಷ್ಟು ಬದಲಾಗಿದೆ ಹಾಗೂ ಕಷ್ಟದಲ್ಲಿದ್ದೇನೆ.ಸದ್ಯಕ್ಕೆ ಇರುವ ಸಂದರ್ಭ ತಾತ್ಕಾಲಿಕ ವಾದದ್ದು. ಪರಿಸ್ಥಿತಿ ಮುಂದೆ ಸರಿ ಹೋಗುತ್ತದೆ.
ನನ್ನ ಮನೆಯ ಎಲ್ಲಾ ವಸ್ತುಗಳನ್ನು ಶುದ್ಧಗೊಳಿಸಬೇಕು. ನಾನು ಸರಿಯಾಗಿ ಶುದ್ಧಗೊಳಿಸದಿದ್ದರೆ ನನ್ನ ಕುಟುಂಬಕ್ಕೆ ತೊಂದರೆಯಾಗಬಹುದು ನಾನು ಸೋಂಕು ತಡೆಯಲು ಮಾಡಬೇಕಾದ ಎಲ್ಲಾ ರೀತಿಯ ತಯಾರಿಯನ್ನು ಮಾಡಿದ್ದೇನೆ ನನಗೆ ಬರುವ ಹೆಚ್ಚಿನ ಆಲೋಚನೆಗಳು ವಿಚಾರಹೀನ ವಾದದ್ದು.
ಮದ್ಯಪಾನ, ತಂಬಾಕು(ಧೂಮಪಾನ ಮತ್ತು ಗುಟ್ಕಾ)
ಸೇವನೆ ಮತ್ತು ಮಾದಕ ವಸ್ತುಗಳ ಸೇವನೆ ಮಾಡ ಬೇಕೆನಿಸುವುದು.
ಲಾಕ್ಡೌನ್ ಇರುವುದರಿಂದ ಅದರ ಲಭ್ಯತೆ ಕಮ್ಮಿಯಾಗಿದೆ. ಮದ್ಯಪಾನ ಸೇವನೆ ಬಿಟ್ಟ ನಂತರ ಹಲವಾರು ಸಮಸ್ಯೆಗಳು ಬರುತ್ತವೆ. ಅದಕ್ಕೆ ನಾವು withdrawal symptoms ಎನ್ನುತ್ತೇವೆ. ಇದರಲ್ಲಿ
ಆತಂಕ ಹೆಚ್ಚಾಗುತ್ತದೆ, ನಿದ್ದೆ ಮತ್ತು ಹಸಿವು ಕಮ್ಮಿ ಆಗುವುದು, ಕೈಕಾಲು ನಡುಕ, ಭ್ರಮೆ, ಮೂರ್ಛೆ ಹೋಗ ಬಹುದು. ಕೆಲವರು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ. ಈ ಸಮಯದಲ್ಲಿ ಮದ್ಯಪಾನವನ್ನು ಸೇವನೆ ಮಾಡಬೇಕೆಂಬ ಅತಿಯಾದ ಆಸೆಯಿರುತ್ತದೆ (craving) ಮದ್ಯಪಾನ ಸಿಗದೇ ಇರುವುದರಿಂದ ಬೇರೆ ಏನು ಬೇಡ ಅಂತ ಹೇಳಿ ಆತ್ಮಹತ್ಯೆ ಮಾಡಿಕೊಳ್ಳುವ ಆಲೋಚನೆ ಮಾಡುತ್ತಾರೆ.
ತಂಬಾಕು ಸೇವನೆ ಮಾಡುವವರು ಕೂಡ ತಂಬಾಕು ಸಿಗದೇ ಕಾರಣ ಇದೇ ರೀತಿಯ ಕೆಲವು ಲಕ್ಷಣಗಳು ಕಾಣುತ್ತದೆ - ಸಿಟ್ಟು, ಕಿರಿಕಿರಿ, ನಿದ್ದೆ, ಹಸಿವು ಕಮ್ಮಿಯಾಗುವುದು. ಮದ್ಯಪಾನ, ತಂಬಾಕುಸೇವನೆ ಮಾಡುವವರಿಗೆ ಮುಂಚಿತವಾಗಿಯೇ ಖಿನ್ನತೆ ಕಾಯಿಲೆ ಇರಬಹುದು. ಇಂತಹವರು ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇನ್ನು ಹೆಚ್ಚಾಗಿರುತ್ತದೆ.
ಉಪಾಯ -
ಮದ್ಯಪಾನ ಅಥವಾ ತಂಬಾಕು ಸೇವನೆ ಮಾಡಬೇಕೆನಿಸಿದಾಗ ಕೆಳಗಿನ ಸೂತ್ರಗಳನ್ನು ಪಾಲಿಸುಬಹುದು.
1. ದೀರ್ಘವಾದ ಉಸಿರಾಟ ಮತ್ತು ನಿಯಮಿತ ವ್ಯಾಯಾಮ, walking, ಯೋಗ ಮಾಡುವುದು.
2. ಕಾಫಿ, ಚಹಾ, ಹಣ್ಣಿನ ರಸವನ್ನು ಕುಡಿಯುವುದು.
3. ಆಲ್ಕೊಹಾಲ್ (ಮಧ್ಯಪಾನ) ಹೊರತುಪಡಿಸಿ ಇತರ ವಿಷಯಗಳ ಬಗ್ಗೆ ಸ್ನೇಹಿತರು ಮತ್ತು ಕುಟುಂಬದವರೊ0ದಿಗೆ ಚರ್ಚೆ ಮಾಡುವುದು.
4. ಈ ವಸ್ತುಗಳಿಂದ ಆದ ತೊಂದರೆಗಳು ಮತ್ತು ನಷ್ಟದ ಬಗ್ಗೆ ಆಲೋಚಿಸಿ. ಅದನ್ನು ಬಿಡಲು ಬೇಕಾದ ಅಗತ್ಯ ಚಿಕಿತ್ಸೆ ಪಡೆಯುವ ಬಗ್ಗೆ ಸದೃಢ ಮನಸ್ಸಿನಿಂದ ಪ್ರಯತ್ನಪಡಬೇಕು.
ಗರ್ಭಿಣಿಯರಿಗೆ ಮತ್ತು ಪ್ರಸವ ನಂತರದ ..
ಗರ್ಭಿಣಿಯರಿಗೆ ಮತ್ತು ಪ್ರಸವ ನಂತರದ ತಾಯಂದಿರಿಗೆ ಈ ಸಂದರ್ಭದಲ್ಲಿ ಭಯ, ಮುಂದೆ ಏನಾಗಬಹುದೆಂದು ಆತಂಕ ಇರುತ್ತದೆ. ಸ್ವಚ್ಛತೆ ಕಾಪಾಡುವ ಸಲುವಾಗಿ ಹೆಚ್ಚು ಸಮಯ ಅದಕ್ಕೆ ಮೀಸಲಿಡಬೇಡಿ.
ಉಪಾಯ - ದಿನಕ್ಕೆ ನಿಗದಿತ ಸಮಯದಲ್ಲಿ ದಿನಕ್ಕೆ ಎರಡು ಬಾರಿ ಮಾತ್ರವೇ ಈ ವಿಚಾರವಾಗಿ ಸುದ್ದಿ ವಾಹಿನಿಯನ್ನು ವೀಕ್ಷಿಸಿ.ನಿಮ್ಮ ಸಮಯ ಮತ್ತು ಕುಟುಂಬದ ಸಮಯವನ್ನು ನಿಗದಿಪಡಿಸಿ ಅಂದರೆ ದಿನದಲ್ಲಿ ಅರ್ಧ ಗಂಟೆಯಾದರೂ ನಿಮಗೆ ಇಷ್ಟ ಅಥವಾ ಖುಷಿ ಕೊಡುವ ಕೆಲಸಗಳನ್ನು ಮಾಡಿ.ನಿಮ್ಮ ಮನಸ್ಸಿಗೆ ಬರುವ ಆಲೋಚನೆಗಳನ್ನು ಸಕಾರತ್ಮಕವಾಗಿಡಲು ಹವ್ಯಾಸಗಳನ್ನು ರೂಢಿಸಿಕೊಳ್ಳಿ. ನಿಮ್ಮ ತಜ್ಞ ವೈದ್ಯರೊಂದಿಗೆ ಚರ್ಚಿಸಿ ಸೂಕ್ತ ಸಲಹೆ ತೆಗೆದುಕೊಳ್ಳಿ.
ನಿಮ್ಮ ಶಕ್ತಿಮೀರಿ ಮಗುವಿನ ಆರೈಕೆ ಮಾಡುತ್ತಿದ್ದೇನೆಂಬ ಆತ್ಮವಿಶ್ವಾಸವಿರಲಿ.
ಮಕ್ಕಳನ್ನು ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿ ಹಿಡಿಯುವುದು ಕಷ್ಟ ಅನಿಸಬಹುದು.
ಮಕ್ಕಳಲ್ಲಿ ಚುರುಕುತನವನ್ನು ಕಾಪಾಡಬೇಕು. ADHD(Attention deficit hyperactivity disorder) ಅಥವಾ ಆಟಿಸಂ ನಿಂದ ಬಳಲುತ್ತಿರುವ ಮಕ್ಕಳನ್ನು ಸುಧಾರಿಸಲು ಕಷ್ಟವೆನಿಸಬಹುದು. ಅವರಿಗೆ ನೀಡುತ್ತಿರುವ ಔಷಧವನ್ನು ನಿಲ್ಲಿಸಬೇಡಿ. ವೈದ್ಯರ ಸಲಹೆಯಂತೆ ಔಷಧಿಯನ್ನು ಮುಂದುವರಿಸಿ.
ಉಪಾಯ -
ಮಕ್ಕಳನ್ನು ದಿನಕ್ಕೆ ಎರಡು ಅಥವಾ ಮೂರು ಗಂಟೆಯಷ್ಟು ಓದಿಸಲು ಕ್ರಮವಹಿಸಿ ಮಕ್ಕಳನ್ನು ಮಕ್ಕಳಿಗೆ ವಿವಿಧ ಚಟುವಟಿಕೆಗಳನ್ನು ಕೊಡುವುದು. ಉದಾಹರಣೆಗೆ - ಡ್ರಾಯಿಂಗ್,ಬೋರ್ಡ್ ಗೇಮ್ಸ್, ಸಂಬAಧಿಕರೊAದಿಗೆ ಮಾತನಾಡುವುದು. ಮೊಬೈಲ್ ಲ್ಯಾಪ್ಟಾಪ್ ಅನ್ನು ಹೆಚ್ಚಿನ ಸಮಯ ಕೊಡಬೇಡಿ. ವ್ಯಾಯಾಮವನ್ನು ಮಕ್ಕಳ ಜೊತೆ ನೀವು ಕೂಡ ಮಾಡಬಹುದು. ಇಲ್ಲಿ ಮಕ್ಕಳಿಗೆ ಚಂದಮಾಮ, ಪಂಚತAತ್ರ ಕಥೆಗಳನ್ನು ಓದಲು ಪ್ರೋತ್ಸಾಹಿಸಿ. ಏಕಾಗ್ರತೆ ಹೆಚ್ಚಿಸಲು grain sorting technique ( ಧಾನ್ಯ ವಿಂಗಡನೆ ) ಬಳಸಬಹುದು. ಇದರ ವಿಧಾನ - ಒಂದು ಕಪ್ ನಲ್ಲಿ ಬೇರೆಬೇರೆ ರೀತಿಯ ಕಾಳುಗಳನ್ನು ಹಾಕಿ ಮಕ್ಕಳಿಗೆ ಒಂದೊAದೇ ಕಾಳನ್ನು ಬೇರೆ ಮಾಡಬೇಕೆಂದು ತಿಳಿಸಿ ಕೊಡಬೇಕು.
ಕಳಂಕ..!
ಸುಳ್ಳುಸುದ್ದಿಗಳಿಂದ ದೂರ ಇರಿ. ಸಾಂಕ್ರಾಮಿಕ ರೋಗದ ಮಾಹಿತಿಯನ್ನುWHO ಅಥವಾ ಸರ್ಕಾರದ ಮಾಹಿತಿಯನ್ನು ಅವಲಂಬಿಸಿ.
ಕರೋನವೈರಸ್ ಶಂಕಿತ ಮತ್ತು ಸೋಂಕು ತಗಲಿದ ವ್ಯಕ್ತಿಗಳಿಗೆ ಹಾಗೂ ಅವರ ಕುಟುಂಬಗಳಿಗೆ ಅನೇಕ ರೀತಿಯಲ್ಲಿ ಕಿರುಕುಳ ಉಂಟಾಗುವ ಸಂದರ್ಭಗಳು ಬರುತ್ತವೆ. ಉದಾಹರಣೆಗೆ ಅವರ ಮನೆಗೆ ಹಾಲು ಕೊಡದಿರುವುದು ದಿನಸಿ ಕೊಡದಿರುವುದು ಮಾತನಾಡದೆ ಇರುವುದು. ಈ ರೀತಿಯಲ್ಲಿ ನಡೆದುಕೊಳ್ಳುವುದರಿಂದ ಅವರ ಮನಸ್ಸಿಗೆ ಗಾಬರಿ ಆತಂಕ ಹೆಚ್ಚಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಧೃತಿಗೆಡ ಬೇಡಿ. ಅವರಿಗೆ ಬೇಕಾದ ಸಹಾಯವನ್ನು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಸಹಾಯ ಮಾಡಬಹುದು. ನಂತರ ಕೈಯನ್ನು ತೊಳೆಯಬೇಕು.
ಎಲ್ಲರ ಸಹಕಾರ ಸಾಂಕ್ರಾಮಿಕಕ್ಕೆ ಪರಿಹಾರ !
ಡಾ|| ಮಾನಸ್. ಇ.ಆರ್.
ಮನೋರೋಗ ತಜ್ಞರು
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಉಡುಪಿ.