ಮಂಗಳೂರು ದೈವಜ್ಞ ಬ್ರಾಹ್ಮಣ ಸಮಾಜದ ಅತ್ಯಂತ ಹಿರಿಯರಾಗಿದ್ದ 102 ವರ್ಷದ "ಶತಾಯುಷಿ" ಶ್ರೀ ಕೇಶವ ಶೇಟ್ ರವರು ಬುಧವಾರ ತಮ್ಮ ಪುತ್ರನ ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿರುವರು.
ನಗರದ ಕೊಡಿಯಾಲಬೈಲ್ ಅಳಕೆ ನಿವಾಸಿಯಾಗಿದ್ದ ಕೇಶವ ಶೇಟ್ ನುರಿತ ಸ್ವರ್ಣಕಾರರಾಗಿದ್ದರು. ಮೂಲತಃ ಉತ್ತರ ಕನ್ನಡದ ಕುಮಟಾ ಮೂರೂರಿನವರು. ಇವರು ಪತ್ನಿ, ಎಂಟು ಪುತ್ರಿಯರು, ಇಬ್ಬರು ಪುತ್ರರನ್ನು ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿರುವರು.