ಮಂಗಳೂರು: ನಾಡಿನಾದ್ಯಂತ ಆಚರಿಸುತ್ತಿರುವ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯನ್ನು ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಸೋಪಾಂಗಣದಲ್ಲಿ ರವಿವಾರ ನಾಡ ಧ್ವಜವನ್ನು ಆರೋಹಣ ಮಾಡುವ ಮೂಲಕ ಆಚರಿಸಲಾಯಿತು.

   ಯುವ ವಾಗ್ಮಿ, ಬ್ರದರ್ ಹರೀಶ್ ಕುಮಾರ್ ಎಸ್ ಜೆ, ಧ್ವಜಾರೋಹಣಗೈದು‌ ಮಾತನಾಡಿ "ಕನ್ನಡನಾಡು ಸರ್ವ ಭಾಷೆಗೆ ಬೆಲೆಯನ್ನೀಯುವ ಸಮಗ್ರತೆಯನ್ನು ಸಾರುವ ನಾಡಾಗಿದೆ. ಜಾತಿ, ಮತ, ಧರ್ಮವೆಂಬ ಬೇಧವಿಲ್ಲದೆ ಸಹೋದರತೆಯನ್ನು ಸಾರುವ ನಾಡಾಗಿದೆ", ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ಗುರು ಕ್ಲಿಫರ್ಡ್ ಸಿಕ್ವೇರಾ ಎಸ್ ಜೆ, ಉಪ ಪ್ರಾಂಶುಪಾಲರಾದ ಶಾಲೇಟ್ ಡಿಸೋಜ, ಮುರಳಿಕೃಷ್ಣ ಜಿ.ಎಮ್, ಡೀನ್ ಕಿರಣ್ ಶೆಟ್ಟಿ ಮತ್ತು ಡಾ.ಪ್ರದೀಪ್ ಎಮ್ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದ ವೇಳೆ ಕಾಲೇಜಿನ ಸಂಗೀತ ವೃಂದ ಕನ್ನಡದ ಗೀತೆಗಳ ಜೊತೆಗೆ ನಾಡಗೀತೆಯನ್ನು ಸಾದರಪಡಿಸಿದರು. ಜಾಲತಾಣದ ಮೂಲಕ ಏಕಕಾಲಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಯಕ್ರಮವನ್ನು ವೀಕ್ಷಿಸಿದರು.

ಕನ್ನಡ ವಿಭಾಗದ ಮುಖ್ಯಸ್ಥೆ  ಜಾನೆಟ್ ಪಿಂಟೋ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ದೀವಿತ್ .ಎಸ್. ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ವಿತ್ತರು.