ನಮಗೆ ಸ್ವಾತಂತ್ರ್ಯ ಸಿಗುವಾಗ ದೇಶದೊಳಗೆ ಬರೇ 47 ಕೋಟಿ ಜನಸಂಖ್ಯೆ ಇತ್ತು. ಇದೀಗ ಭಾರತದ ಜನಸಂಖ್ಯೆ 140 ಕೋಟಿ ತನಕ ತುಂಬಿ ಹೋಗಿದೆ.  ಇದಕ್ಕೆ ಕಾರಣ  ಯಾರು? ಇದಕ್ಕೆ ನಮ್ಮ ಸರಕಾರವೇ ಕಾರಣ.  ಭಾರತದ ಜನರು ಎಷ್ಟು ಬೇಕಾದರೂ ಮದುವೆ ಆಗಬಹುದು.  ಎಷ್ಟು ಬೇಕಾದರೂ ಮಕ್ಕಳನ್ನು ಹುಟ್ಟಿಸಬಹುದು.  ಭಾರತದ ಜನರು ಮನುಷ್ಯರಾಗಿ ಹುಟ್ಟಿ ಪ್ರಾಣಿಗಳ ಹಾಗೆ ಜೀವನ ಸಾಗಿಸುವುದು ಸರಿ ಅಲ್ಲ.  ಜನರ ಒಳ್ಳೆಯದಕ್ಕಾಗಿ  ಅಭಿವೃದ್ಧಿಗಾಗಿ ಸರಿಯಾದ ಕಾಯ್ದೆ ಕಾನೂನು ನಮ್ಮ ಸರಕಾರವೇ ಪಾಲನೆ ಮಾಡದೆ ಭಾರತದ ಜನರ ಎಲ್ಲಾ  ಪರಿಸ್ಥಿತಿ ಹಾಳಾಗುತ್ತಾ ಬಂದಿದೆ.

ಪ್ರತಿಯೊಂದು ತಿನ್ನುವ ಆಹಾರ ವಸ್ತುಗಳು ನಮ್ಮ ಸರಕಾರದ ಮುಖಾಂತರವೇ ಪರದೇಶಕ್ಕೆ ರಘ್ತು ಆಗುತ್ತದೆ.  ಇದೇ ಕಾರಣದಿಂದ ಅಂಗಡಿಯಲ್ಲಿ 10 ರೂಪಾಯಿಗೆ ಸಿಗುವ ವಸ್ತುವಿಗೆ 100 ರೂಪಾಯಿಗೆ ಕ್ರಯ ಕೊಡಬೇಕಾಗುತ್ತದೆ. ದಿನ ಹೋದ ಹಾಗೆ ಪ್ರತಿಯೊಂದು ವಸ್ತುವಿನ ಕ್ರಯ ಹೆಚ್ಚಾಗುತ್ತಾ ಇದೆ.  ಬಡಜನರ ಜೀವನದ ಪರಿಸ್ಥಿತಿ ಹಾಳಾಗುತ್ತಾ ಇದೆ.  ಪರದೇಶಕ್ಕೆ ಮಾಂಸ ರಘ್ತು ಮಾಡುವುದನ್ನು ನಿಲ್ಲಿಸಿ, ಗೋಹತ್ಯೆ ನಿಷೇಧ ಆದ ಹಾಗೆ.

50 ವರ್ಷ ಹಿಂದೆ 1 ಲೀಟರ್ ಪೆಟ್ರೋಲಿನ ಕ್ರಯ 6 ರೂಪಾಯಿ ಇತ್ತು.  ಪೆಟ್ರೋಲಿನ ವ್ಯಾಪಾರ ಮಾಡಿ ಅಂಬಾನಿ ಭಾರತದ ರಾಜನಾಗಿ ಮೆರೆಯುತ್ತಾ ಇದ್ದಾನೆ.  ಅವನ ಮುಖಾಂತರವೇ ಸಮಾಜದ ಜನರ ರಾಶಿ ರಾಶಿ ಹಣ ಸರಕಾರಕ್ಕೆ ಹೋಗುತ್ತದೆ.  50 ವರ್ಷ ಹಿಂದೆ 1 ಡಾಲರಿಗೆ 6 ರೂಪಾಯಿ ಬೆಲೆ ಇತ್ತು. ಇದೀಗ 1 ಡಾಲರಿಗೆ 80 ರೂಪಾಯಿ ಬೆಲೆ ಆಗಿ ಹೋಗಿದೆ.  ರಾಜಕೀಯದ ಜನರಿಂದ ಮೋಸ ವಂಚನೆಯ ಪ್ರಚಾರ ನಡೆಯುತ್ತಾ ಇದೆ.  ಇದೇ ನಮ್ಮ ಭಾರತದ ಜನರ ಅಭಿವೃದ್ಧಿ ಹೆಸರಿಗೆ ಪ್ರಜಾಪ್ರಭುತ್ವ ನಡೆಯುವುದು ಕಳ್ಳರ ಪ್ರಭುತ್ವ.


By ಭೋಜ ಪೂಜಾರಿ-ಬೆಳುವಾಯಿ