ಹೆಬ್ರಿ : ಹೆಬ್ರಿಯ ವಿಶ್ರಾಂತ ಚಾಲಕ ಪದ್ದ ಮರಕಾಲ (೮೨) ಎಂಬವರು ಅನಾರೋಗ್ಯದಿಂದ ಸೋಮವಾರ ನಿಧನ ಹೊಂದಿದರು. ಪದ್ದಣ್ಣ ಎಂದೇ ಖ್ಯಾತರಾಗಿದ್ದ ಅಜಾತಶತ್ರುವಾಗಿದ್ದ ಪದ್ದ ಮರಕಾಲ ೫೦ ವಷ೯ಗಳ ಕಾಲ ಚಾಲಕರಾಗಿ ಸೇವೆ ಮಾಡಿದ್ದರು. ಹೆಬ್ರಿಯ ಮೊದಲ ಚಾಲಕ ಎಂಬ ಖ್ಯಾತಿಗೂ ಪಾತ್ರರಾಗಿ ಹೆಬ್ರಿಯ ಇಬ್ಬರು ಗಣ್ಯರ ಕಾರು ಚಾಲಕರಾಗಿದ್ದರು. ಹೆಬ್ರಿಯಲ್ಲಿ ೨೦೧೦ರಲ್ಲಿ ಸುದ್ಧಿಕಿರಣ ಪತ್ರಿಕೆ ಮತ್ತು ಉಡುಪಿ ಜಿಲ್ಲಾ ಪತ್ರಕತ೯ರ ವೇದಿಕೆಯ ವತಿಯಿಂದ ಅಪಘಾತ ಜಾಗೃತಿ ಕಾಯ೯ಕ್ರಮದಲ್ಲಿ " ಅಪಘಾತ ರಹಿತ ಚಾಲಕ" ಪ್ರಶಸ್ತಿ ನೀಡಿ ಅಂದಿನ ಶಾಸಕ ಗೋಪಾಲ ಭಂಡಾರಿ ಗೌರವಿಸಿದ್ದರು. ಮೃತರಿಗೆ ಪತ್ನಿ, ಪುತ್ರ ಖ್ಯಾತ ವಿದ್ಯುತ್ ಗುತ್ತಿಗೆದಾರ ಮೋಗವೀರ ಸಮಾಜದ ಮುಖಂಡ ಹೆಚ್.ಬಿ.ಸುರೇಶ್ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಉಡುಪಿಯ ಜಿ.ಶಂಕರ್ ಫ್ಯಾಮೀಲಿ ಟ್ರಸ್ಟ್ ಅಧ್ಯಕ್ಷ ಡಾ.ಜಿ.ಶಂಕರ್ ಸಹಿತ ಗಣ್ಯರು ಸಂತಾಪ ಸೂಚಿಸಿದ್ದಾರೆ.