ಹಬ್ಬಗಳು ಸಂಬಂಧಗಳನ್ನು ಗಟ್ಟಿ ಗೊಳಿಸುವಲ್ಲಿ ಮನಸ್ಸು ಮನಸುಗಳನ್ನು ಬೆಸೆಯುವಲ್ಲಿ ಪ್ರಮುಖ ಪಾತ್ರ ವಹಿಸುವವು. ಪ್ರತಿಯೊಂದು ಹಬ್ಬವು ತನ್ನದೆಯಾದ ಮಹತ್ವ ಹೊಂದಿದೆ. ಹಬ್ಬಗಳು ಧನಾತ್ಮಕ ಚಿಂತನೆಯನ್ನು. ಒಗ್ಗಟ್ಟು ಮತ್ತು ಏಕತೆ,ಪರಸ್ಪರರಲ್ಲಿ ಅನ್ಯೂನ್ಯತೆ , ಪ್ರೀತಿ ವಿಶ್ವಾಸ ಮೂಡಿಸುವಲ್ಲಿ ಹಬ್ಬಗಳ ಪಾತ್ರ ಹಿರಿದು. ಅದರಲ್ಲೂ ಹೋಳಿ ಹಬ್ಬ ಕಾಮನ ಬಿಲ್ಲಿನ ಬಣ್ಣವೇ ನಾಚುವಂತೆ ಬಣ್ಣಗಳಲಿ ಮಿಂದೇಳುವ ಪರಿ ಭಾವನೆಗಳ ಬಣ್ಣಿಸಲಾಗದು.ಓಕುಳಿಯಾಟ, ಮನರಂಜನೆ ಮತ್ತು ಸಂಸ್ಕೃತಿಯನ್ನು ಸಾರುವ,ಕಿರಿಯರು ಹಿರಿಯರೆನದೆ ಹರ್ಷದಿ ಬಣ್ಣವನಾಡುವ ಹಬ್ಬವು ಪೌರಾಣಿಕ ಕತೆಗಳಲ್ಲಿ ಕುಪಿತಗೊಂಡ ಶಿವನನ್ನು ಓಲೈಸುವ ಪರಿಯ ಆಚರಣೆಯಾಗಿರುವುದು. ಕಾಮದಹನದ ಆಚರಣೆಯು ಹಬ್ಬದ ಹಿನ್ನಲೆ. ಮತ್ತದೇ ಬುಡಕಟ್ಟು ಸಮುದಾಯದ ಜನಾಂಗದವರಾದ ಅದರಲ್ಲೂ ದಕ್ಷಿಣ ಕನ್ನಡ, ಉಡುಪಿಯಲ್ಲಿಯ ಕುಡುಬಿ ಹೋಳಿ ಮತ್ತೂ ವಿಶೇಷವು ವಿಶಿಷ್ಟವಾದದ್ದಾಗಿದೆ. ಅವರು ಎಣ್ಣೆ ಸ್ನಾನ ಮಾಡಿ, ಧರಿಸುವ ವೇಷ ಭೂಷಣ ಮತ್ತೊಂದೆಡೆ ರಂಗು ರಂಗಿನ ಬಣ್ಣದ ಬಟ್ಟೆ,ಹಣೆಯ ಮುಂಭಾಗ ಉದ್ದನೆಯ ಬಾಲದ ಹಕ್ಕಿಯ ಗರಿ ಹಾಗೂ,ಉಡದ ಚರ್ಮದಿಂದ ತಯಾರಿಸಿದ ಗುಮ್ಟ್, ಕೋಲು,ಹಿಡಿದು ಸಿದ್ಧತೆಯೊಂದಿಗೆ ಗುರಿಕಾರರ ಮನೆ ತಲುಪಿ ಪೂಜಾ ಕ್ರಮ ಮುಗಿಸಿಕೊಂಡು ಗ್ರಾಮ ದೇವರಿಗೆ ನಮಸ್ಕರಿಸಿ ತಮ್ಮದೇ ಜಾನಪದ ಶೈಲಿಯ ಸಂಸ್ಕೃತಿಕ ಹಾಡುಗಳ ಹೇಳುತ್ತಾ ಕುಣಿವಯುವುದು ಮತ್ತೊಂದು ದೊಡ್ಡ ಬಗೆಯ ಪರಂಪರೆ ಯಾಗಿ ಕಂಡು ಬರುವುದು.ಕೂಡೂ ಕಟ್ಟುಗಳ ಬುಡಕಟ್ಟು ಸಮುದಾಯದ ಆಚರಣೆ 5 ದಿನಗಳ ಕಾಲ ನೇಮ ನಿಷ್ಠೆಯಿಂದ ಆಚರಿಸುವರು.ಬಣ್ಣ ಹಚ್ಚುವುದಿಲ್ಲ ಪ್ರತಿಯಾಗಿ ಬಣ್ಣದ ಸಂಕೇತ ಸಾರುವ ಉಡುಪುಗಳ ಧರಿಸಿ ಅತ್ಯಂತ ನಂಬಿಗೆ ಶ್ರದ್ದಾಭಕ್ತಿ ಪೂರ್ವಕ ಆಚರಣೆ.ಪರಿಶುದ್ಧ ಮನದಿ ಕಟ್ಟುನಿಟ್ಟಿನ ವ್ರತಕಾಣಲು ಬಹು ಅಪರೂಪ. ಫಾಲ್ಗುಣ ಏಕಾದಶಿಗೆ ಪ್ರಾರಂಭಿಸಿ ಹುಣ್ಣಿಮೆಯ ದಿನ ಮತ್ತದೇ ಪ್ರಾರಂಭದ ನೆಲೆಯಾದ ಗುರಿಕಾರರ ಮನೆಯಲ್ಲಿ ಮುಕ್ತಾಯ ಮಾಡಿ ಕಾಮದಹನ ಮಾಡಿ. ಕೆಟ್ಟತನಕ್ಕೆ ಸೋಲು ಮತ್ತೂ ಅಂತ್ಯವಿದೆ. ದೈವದ ಅನುಗ್ರಹದ ರಕ್ಷಣೆಯ ನಂಬಿಗೆಯೊಂದಿದೆ.ಬಣ್ಣದ ರಂಗಿನ ಹಾಗೇ ವರ್ಷಪೂರ್ತಿ ಸಂತಸ ಎಲ್ಲರಲಿ ಮನೆಮಾಡಲಿ ಎಂಬುದರ ಮಹತ್ವವು. ಈ ಹೋಳಿ ಹಬ್ಬದ ಪ್ರಮುಖ ಸಂದೇಶವಾಗಿದೆ.
-By ಪ್ರೀತಿ. ಮಾಂತೇಶ. ಬನ್ನೆಟ್ಟಿ