ಮಂಗಳೂರು: ಶಕ್ತಿ ವಸತಿ ಶಾಲೆಗೆ ಮೈಸೂರಿನ ದಿ ರಾಡಿಸನ್ ಬ್ಲೂನಲ್ಲಿ ಎಜ್ಯುಕೇಶನ್ ನ್ಯೂಸ್ ನೆಟ್‍ವರ್ಕ್ ಆಯೋಜಿಸಿದ ಕರ್ನಾಟಕ ಎಜ್ಯುಕೇಟರ್ಸ್ ಸಮ್ಮಿಟ್ 2025ನಲ್ಲಿ "ಡೈನಾಮಿಕ್ ಸ್ಕೂಲ್ ಅವಾರ್ಡ್ 2025" ಎಂಬ ಪ್ರತಿಷ್ಠಿತ ಮಾನ್ಯತೆ ಪ್ರಶಸ್ತಿ ದೊರೆತಿದೆ. ಈ ಪ್ರಶಸ್ತಿಯನ್ನು ಶಾಲೆಯ ಸಮಗ್ರ ಅಭಿವೃದ್ಧಿಯಲ್ಲಿನ ಶ್ರೇಷ್ಠತೆಗಾಗಿ ನೀಡಲಾಗಿದೆ.
ಈ ಸಂದರ್ಭದಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆಯಾದ ಬಬಿತಾ ಸೂರಜ್ ಹಾಗೂ ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳನ್ನು ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ. ಸಿ. ನಾೈಕ್, ಕಾರ್ಯದರ್ಶಿ ಸಂಜಿತ್ ನಾೈಕ್. ಪ್ರಧಾನ ಸಲಹೆಗಾರರಾದ ರಮೇಶ್ ಕೆ. ಹಾಗೂ ಶಕ್ತಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವೆಂಕಟೇಶ ಮೂರ್ತಿಹೆಚ್ ಅಭಿನಂದಿಸಿದರು.