ಮುಂಬಯಿ: ರಾಘವೇಂದ್ರ ಸ್ವಾಮಿಗಳ 353ನೇ ಆರಾಧನ ಮಹೋತ್ಸವ ಇಂದಿಲ್ಲಿ ನಾಸಿಕ್ ಅಲ್ಲಿನ ಪೇಜಾವರ ಮಠದಲ್ಲಿ ವೈಭವದಿಂದ ನೆರವೇರಿಸಲ್ಪಟ್ಟಿತು. ಆರಾಧನಾ ಅಂಗವಾಗಿ ಬೆಳಿಗ್ಗಿನಿಂದ ಭಜನೆ, ಪಲ್ಲಕಿ ಉತ್ಸವ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ಅನ್ನದಾನ ನೆಡೆಯಿತು.
ಕಾರ್ಯಕ್ರಮದಲ್ಲಿ ಮಠದ ವ್ಯವಸ್ಥಾಪಕ ಶ್ರೀನಿವಾಸ ದೇಶಪಾಂಡೆ, ಅನಿಲ್ ಆಚಾರ್ಯ, ಮಠದ ಸಿಬ್ಬಂದಿ ಬಾಲರಾಮ ಪಾಂಡೆ, ಪ್ರಿಯಮ್ ದ್ವಿವೇದಿ ಹಾಗೂ ಪುರೋಹಿತ ವಿಷ್ಣುತೀರ್ಥ ಸಾಲಿ ಮುಂಬಯಿ ಸೇರಿದಂತೆ ಇನ್ನಿತರ ಪುರೋಹಿತರು ಉಪಸ್ಥಿತರಿದ್ದರು.