“ಮೂರು ವರ್ಷದ ಬುದ್ದಿ ನೂರು ವರ್ಷದತನಕ” ಎಂದು ಗಾದೆ ಇದೆ ಅಂತೆಯೇ ಕೆಟ್ಟ ಚಟಗಳು ಬೇಗನೆ ಅಂಟಿಕೊಳ್ಳುವವು. ಅವುಗಳನ್ನು ಬಿಡುವುದು ಸಾಧ್ಯವಾಗುವುದಿಲ್ಲ,  ಎಂದು ಜನರು ದುವ್ರ್ಯಸನಗಳಿಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಂಡಿರುವರು. ತಮಗೆ ಅಂಟಿದ ಚಟವು ಕೆಟ್ಟದ್ದು ಎನ್ನುವುದೂ ಅವರಿಗೆ ಗೊತ್ತಿರುವುದು ಆದರೂ , ಅದರಿಂದ ಬಿಡುಗಡೆಯಾಗುವುದು ಸಾಧ್ಯವಾಗುವುದಿಲ್ಲ.  ಟಾಲ್‍ಸ್ಟಾಯ್‍ ರಷ್ಯದ ಪ್ರಸಿದ್ಧ ಕಾದಂಬರಿಕಾರ ಅವನಿಗೆ ಬಾಲ್ಯದಿಂದಲೂ ತಂಬಾಕು ಸೇದುವ ಚಟವಿತ್ತು. ಅದನ್ನು ಬಿಡಬೇಕಾದರೆ ಕಷ್ಟವೆನಿಸುತ್ತಿತ್ತು. ಆದ್ದರಿಂದ ಬಾಲ್ಯದಿಂದಲೇ ಒಳ್ಳೆ ಚಟಗಳನ್ನು ರೂಢಿ ಮಾಡಿಕೊಳ್ಳುವುದು ಕೆಟ್ಟ ಜನರ ಸಹವಾಸದಿಂದ ಮಹಾತ್ಮಾಗಾಂಧೀಜಿಯವರು ಮಾಂಸವನ್ನು ತಿನ್ನಲು ಪ್ರಾರಂಭಿಸಿದರು. ಮನೆಯಲ್ಲಿ ಕಳವು ಮಾಡಿದರು ಅವರ ಮನಸ್ಸಿನ ಸೈರ್ಯವು ಬಲಶಾಲಿಯಾದುದು. ಅವರು ಕೆಟ್ಟ ಚಟಗಳಿಂದ ಮುಕ್ತರಾದರು. ಒಬ್ಬ ಮನಶಾಸ್ತ್ರಜ್ಞನ ಚಟಗಳು ಮನುಷ್ಯನ ಸ್ವಭಾವಕ್ಕಿಂತ ಹತ್ತು ಪಟ್ಟು ಬಲವಾಗಿರುವುವು ಎಂದು ಹೇಳಿರುವನು. ಇದರ ಮುಖಾಂತರ ಚಟಗಳ ಮಹತ್ವವನ್ನು ಅರಿಯಬಹುದು. ಮನುಷ್ಯನು ಯಾವಾಗಲೂ ಕೆಟ್ಟ ಚಟಗಳ ಬೆನ್ನು ಹತ್ತುವುದೇ ಹೆಚ್ಚಾಗಿ ಕಂಡುಬರುವುದು.

ಒಳ್ಳೇ ಚಟಗಳನ್ನು ರೂಢಿ ಮಾಡಿಕೊಳ್ಳಲು ಶ್ರಮಪಡಬೇಕಾಗುವುದು. ಒಳ್ಳೆಯ ಚಟಗಳನ್ನು ರೂಢಿಮಾಡಿಕೊಳ್ಳಲು ಯಾವ ಶ್ರಮದ ಅವಶ್ಯಕತೆಯಿಲ್ಲ.  ದುರ್ಯೋಧನನು ಶಕುನಿಯ ಸಹವಾಸದಿಂದ ಕೆಟ್ಟ ಹಾದಿಯನ್ನು ಹಿಡಿದನು. ದುರ್ಯೋಧನನು ಧರ್ಮರಾಜನು ಒಳ್ಳೆಯವನು ಎಂಬುವುದನ್ನುಅರಿತಿದ್ದನು. ಆದರೂ ಪಾಂಡವರ ರಾಜ್ಯವನ್ನು ತಿರುಗಿಕೊಡಲು ಒಪ್ಪಲಿಲ್ಲ. ಅವನಲ್ಲಿರುವ ಹಠಮಾರಿತನವೇ ಇದಕ್ಕೆ ಕಾರಣ. ನಾವು ಚಿಕ್ಕವರಿರುವಾಗ ಬೇಗನೆ ಏಳುವ ಚಟವನ್ನು ರೂಢಿ ಮಾಡಿಕೊಳ್ಳಬೇಕು. ಒಮ್ಮೆ ನಾವು ತಡವಾಗಿ ಏಳತೊಡಗಿದರೆ ಅದೇ ರೂಢಿಯಾಗುವುದು. ನಾವು ಬೇಗನೆ ಏಳದಿದ್ದರೆ ಯಾವ ಕೆಲಸವು ಆಗುವುದಿಲ್ಲ.

ಜಗತ್ತಿನಲ್ಲಿ ಒಳ್ಳೆ ಚಟಗಳಿಂದ ಕೂಡಿದವನು ಒಳ್ಳೆ ಮನುಷ್ಯನಾಗುವನು. ಕೆಟ್ಟ ಚಟಗಳಿಂದ ಕೂಡಿದವನು ಕೆಟ್ಟ ಮನುಷ್ಯನಾಗುವನು. ಮನುಷ್ಯನ ವ್ಯಕ್ತಿತ್ವವು ಅವನಲ್ಲಿರುವ ಚಟಗಳನ್ನು ಅವಲಂಬಿಸಿರುವದು. ಮದ್ಯಪಾನ ಮಾಡಲು ಪ್ರಾರಂಬಿಸಿದ ಮನುಷ್ಯ ಮೊದ ಮೊದಲು ಮಿತವಾಗಿ ಮದ್ಯಪಾನ ಮಾಡುವನು. ಮುಂದೆ ಅವನು ಅದಕ್ಕೆ ಅಧೀನವಾಗಿ ತನ್ನ ಆರೋಗ್ಯವನ್ನು ಹಾಳು ಮಾಡಿಕೊಳ್ಳುವುದಲ್ಲದೆ ತನ್ನ ಜೀವನವನ್ನೇ ವ್ಯರ್ಥವಾಗಿ ಕಳೆದುಕೊಳ್ಳುವನು. ದೊಡ್ಡ ವ್ಯಕ್ತಿಯಾದರೂ ಒಂದಲ್ಲ ಒಂದು ದಿವಸ ಕೆಟ್ಟ ಚಟಗಳನ್ನು ಅಳವಡಿಸುತ್ತಾರೆ.

ತಡವಾಗಿ ಏಳುವ ಮನುಷ್ಯನು ಎಂದಿಗೂ ಬೇಗನೆ ಏಳಲಾರನು. ತಡವಾಗಿ ಏಳುವುದು ಅವನಿಗೆ ರೂಢಿಯಾಗಿರುವುದು. ಆದ್ದರಿಂದ ನಿದ್ದೆಯು ಮುಗಿದಿದ್ದರೂ ಅವನು ಹಾಸಿಗೆಯಲ್ಲಿ ಬಿದ್ದು ಹೊರಳಾಡುವನು. ಆದ್ದರಿಂದ ಕೆಟ್ಟ ಚಟಗಳನ್ನು ದೂರಬಿಟ್ಟು ಒಳ್ಳೆಯ ಜೀವನ ಸಾಗಿಸಲು ಮುನ್ನಡೆಯುವ.

Article By


- ಸವಿತಾ ಡಿಸೋಜಾ

ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆ, ಮಂಗಳೂರು