ಓ..ರಾಘವೇಂದ್ರ ಅಂದರೆ ರಾಘವೇಂದ್ರ ಸ್ವಾಮಿ ಅಂದ್ಕೊಂಡ್ರಾ? ಅಲ್ಲ, ನಾವು ಕಾಲೇಜಿಗೆ ದಿನಾಲು ಹೋಗುವ ಬಸ್ಸಿನ ಹೆಸರು. ನಾನು ಕೂಡ ಆ ಬಸ್ಸಿನ ದಿನ ಪ್ರಯಾಣಿಕರಲ್ಲಿ ಒಬ್ಬಳು. ಆ ಬಸ್ಸಿನಲ್ಲಿ ಮಕ್ಕಳಿಗೆ ಬಿಟ್ಟು ಬೇರೆಯವರಿಗೆ ಜಾಗ ಖಂಡಿತಾ ಇರಲಿಲ್ಲ. ಅದರಲ್ಲೂ ಯಾರಾದ್ರೂ ತಪ್ಪಿ ಒಂದು ದಿನ ಬಂದರೇ ಮತ್ತೊಂದು ಸರಿತಪ್ಪಿಯೂ ಬರುತ್ತಿರಲಿಲ್ಲ. ಅದು ಸಣ್ಣ ಬಸ್ಸು ಆಗಿತ್ತು, ಆದ್ರೆ ಅದರಲ್ಲಿ ಎಷ್ಟು ಮಕ್ಕಳನ್ನು  ತುಂಬುತ್ತಿದ್ರು ಅಂದ್ರೆ ಹೇಳೋಕೆ ಆಗೋಲ್ಲ. ಒಂದು ಕಾಲಿನಲ್ಲಿ ನಿಂತು ಹೋಗಬೇಕಾಗಿತ್ತು. ಕಂಡಕ್ಟರ್‍ ಅಂತೂ ಎಷ್ಟು ಬಯ್ಯುತ್ತಿದ್ರು ಅದಕ್ಕೆ ಲೆಕ್ಕನೆ ಇಲ್ಲ. ನಾವು ಸ್ವಲ್ಪಜನ ಮುಂದೆ ಎಂಜಿನ್ ಹತ್ತಿರ ನಿಲ್ಲುತ್ತಿದ್ದೆವು. ಅಲ್ಲಿ ನಿಂತ್ರೆ ಒಂದು ಸ್ವಲ್ಪ ಆರಾಮ. ಅದನ್ನಾ ಬಿಟ್ಟು ಹಿಂದೆ ಹೋದ್ವಿ ಅಂದ್ರೆ ನಮಗೆ ಉಸಿರಾಡೋಕ್ಕೆ ಗಾಳಿನೆ ಇಲ್ಲ, ಈಗ ಸಾಯುತ್ತೆವೆ ಅನಿಸೋತ್ತೆ. ಹಾಗೆ ಅದು ಕರಾವಳಿ ಪ್ರದೇಶ ಆದ ಕಾರಣ ಅಲ್ಲಿ ಶೆಕೆ ಜಾಸ್ತಿ ಅಲ್ವಾ, ಹಾಗಾಗಿ ಸರಿ ಬೆವರು ಇಳಿಯುತ್ತಿತ್ತು. ಮತ್ತೆ ಬ್ರೇಕ್ ಹಾಕಿದಾಗ ಮಾತ್ರ ಎಲ್ಲರು ಕೂಡ ಮೈಮೇಲೆ ಒಂದೇ ಸಲ ಬೀಳುತ್ತಿದ್ರು, ಆಗ ಒಂದೇ ಸಮ ಎಲ್ಲರ ಬೊಬ್ಬೆ ಕೇಳುತ್ತಿತ್ತು.

ಮತ್ತೊಂದು ವಿಷಯ ಅಂದ್ರೆ ರಾಘವೇಂದ್ರದಲ್ಲಿ ನಮ್ಮ ಸ್ನೇಹಿತರನ್ನು ನೋಡೋಕೆ ಹಿಂದೆ ನೋಡಿದ್ರೆ ಅಲ್ಲಿ ನಿಂತ್ತಿರೊ ಹುಡುಗರು ತಮ್ಮನ್ನ ನೋಡುತ್ತಾ ಇದ್ದಾರೆ ಅಂದು ಕೋಳ್ಳುತ್ತಿದ್ರು. ಅದಕ್ಕೆ ಹಿಂದೆ ನೋಡುತ್ತಿರಲಿಲ್ಲ, ಆದ್ರೆ ಮೇಲೆ ಕಂಬಿಗಳ್ಳನ್ನು ಹಿಡಿದು ನೇತಾಡುತ್ತಿರುವ ಕೈಗಳನ್ನು ನೋಡುತಿದ್ದೆವು. ಯಾಕೆ ಅಂತ ಅಂದ್ಕೊಂಡ್ರಾ? ನಮ್ಮ ಸ್ನೇಹಿತರ ಕೈಗೆ ಕಟ್ಟಿರೋ ದಾರ, ಬಳೆ, ಕೈ ಗಡಿಯಾರದಿಂದ ಅವರು ಬಂದಿದ್ದಾರೋ ಇಲ್ಲವೋ ಎಂದು ತಿಳಿಯುತ್ತಿತ್ತು. ಮತ್ತೆ ಕಂಡಕ್ಟರ್‍ ಅಂತೂ ಹುಡುಗರಿಗಿಂತ ಹುಡುಗಿಯರಿಗೆ ಜಾಸ್ತಿ ಬಯ್ಯುತ್ತಿದ್ದರು. ಮುಂದೆ ಹೋಗಿ, ಅಲ್ಲೇ ಕಂಬ ಹಿಡಿದು ನಿಲ್ಲಬೇಡಿ, ಬ್ಯಾಗ್‍ ತೆಗೆದು ಕುಳಿತವರ ಕೈಗೆ ಕೊಡಿ ಅಂತ. ಅದ್ರಲ್ಲೂ ಹುಡುಗಿಯರು ಗೊತ್ತಿದೆ ಅಲ್ವಾ, ಚೆನ್ನಾಗಿ ಮೇಕಪ್ ಮಾಡಿಕೊಂಡು ಬಂದಿರುತ್ತಾರೆ ಅದು ಬೆವರಿಗೆ ಹಾಳಾಗುತ್ತದೆ ಅಂತ ಕಿಡಕಿ ಬಾಗಿಲು ಬಿಟ್ಟು ಸರಿಯೋದೆ ಇಲ್ಲ. ಹಾಗಂತ ಹುಡುಗರು ಹಾಗಲ್ಲಪ್ಪ, ಅವರ ಬ್ಯಾಗ್ಅನ್ನು ಕುಳಿತುಕೊಂಡವರ ಮೈಮೇಲೆ ಹಾಕಿ ಅವರು ಆರಾಮಾಗಿ ಎಷ್ಟು ಆಗೊತ್ತೆ ಅಷ್ಟೂ ಜನ ಹೊಂದಿಕೊಂಡು ನಿಲ್ಲುತಿದ್ರು.

ಮತ್ತೆ ಏನುಗೊತ್ತಾ, ಸಾಮಾನ್ಯವಾಗಿ ನಾವು ನೋಡೋ ಬಸ್ ಗಳಲ್ಲಿ ಸೀಟು ಸಿಕ್ಕಾಗ ಕುಳಿತುಕೊಳ್ಳುತ್ತಾರೆ,  ಆದರೆ ರಾಘವೇಂದ್ರದಲ್ಲಿ ಕುಳಿತುಕೊಳ್ಳೋಕೆ ಹಿಂದೆ ಸರಿತ ಇದ್ದರು ಯಾಕೆ ಗೊತ್ತ? ನಿಂತಾವರಿಗಿಂತ ಸುಸ್ತು ಆಯಾಸ ಕುಳಿತುಕೊಂಡವರಿಗೆ ಆಗುತ್ತಿತ್ತು. ಅವರ ಮೇಲೆ ಬ್ಯಾಗ್ ಗಳನ್ನ ಹೇಗೆಬೇಕು ಹಾಗೆ ಹಾಕಿ ಅವರನ್ನ ಬ್ಯಾಗ್ ಮಯ ಮಾಡುತ್ತಿದ್ದರು. ಅದರಲ್ಲೂ ಕೆಲವರು ಬಯ್ಯುವುದು, ಬಯ್ಯುವುದನ್ನು ಕಿವಿ ತುಂಬಾ ಕೇಳುವುದು, ಕೂಗುವುದು, ನಗುವುದು, ಮಾತನಾಡುವುದು, ಏನು ಖುಷಿ ಗೊತ್ತಾ. ಒಂದು ರೀತಿ ಗಮ್ಮತ್ತು ಸುಸ್ತು ಎರಡು ಒಂದೇ ಸರಿ ಸಿಗುತ್ತಿತ್ತು. ಅಂತು ನಮ್ಮ ಪ್ರಯಾಣ ಕಾಲೇಜಿನ ಬಳಿ ಬಂದು ಮುಗಿಯುತ್ತಿತ್ತು, ಮತ್ತೆ ಮರುದಿನ ಅದೇ ಸಂತೋಷದ ಪಯಣ.

Article By

- ವಿಸ್ಮಾ ಡಿ'ಮೆಲ್ಲೋ

ದ್ವಿತೀಯ ಬಿ.ಎಡ್

ಸಂತ ಅಲೋಶಿಯಸ್ ಶಿಕ್ಷಣ ತರಬೇತಿ ಸಂಸ್ಥೆ