ತುಮಕೂರಿನಲ್ಲಿ ಬುದ್ಧಿಮಾಂದ್ಯ ಮಹಿಳೆಯ ಅತ್ಯಾಚಾರ ಎಸಗಿದ್ದ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಎಸ್. ಉಮೇಶ್‌ಗೆ ಎರಡನೇ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯವು 20 ವರುಷ ಕಠಿಣ ಶಿಕ್ಷೆ ಮತ್ತು ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.
2017ರ ಜನವರಿ 15ರಂದು ಮಹಿಳೆ ಸಂಕ್ರಾಂತಿ ಪೂಜೆಗೆ ಬಂದಾಗ ಆಂಜನೇಯ ದೇವಾಲಯ ಮುಚ್ವಿತ್ತು. ಮೆಟ್ಟಿಲ ಮೇಲೆ ಕೂತಂತೆಯೇ ಕತ್ತಲಾಯಿತು. ದಾರಿ ತಪ್ಪಿ ಶಿರಾ ರಸ್ತೆಯಲ್ಲಿ ನಡೆದರು. ಅಂತರಸನಹಳ್ಳಿಯಲ್ಲಿ ಎದುರಾದ ಎಎಸ್‌ಐ ಎಳೆದೊಯ್ದು ಅತ್ಯಾಚಾರ ಎಸಗಿದ್ದ.
ಆಗಿನಿಂದ ಜೈಲಿನಲ್ಲಿ ಇರುವ ಉಮೇಶ್ ಇನ್ನೂ 15 ವರುಷ ಜೈಲಲ್ಲಿ ಇರಬೇಕು. ದಂಡದ ಹಣ ಸಂತ್ರಸ್ತೆಗೆ ನೀಡಲು ಕೋರ್ಟ್ ಸೂಚಿಸಿದೆ.