ಶೌಚ ಗುಂಡಿಗಳನ್ನು ಮಾನವ ನೇರ ಸ್ವಚ್ಛ ಮಾಡುವಂತಿಲ್ಲ ಎಂಬ ಕಾನೂನು ಇದ್ದರೂ 2017ರಿಂದ 2021ರ ನಡುವೆ ಶೌಚಗುಂಡಿ ಸ್ವಚ್ಛ ಮಾಡಲು ಇಳಿದ 330 ಮಂದಿ ಸಾವಿಗೀಡಾಗಿರುವುದಾಗಿ ಲೋಕ ಸಭೆಯಲ್ಲಿ ಸರಕಾರ ತಿಳಿಸಿತು.

ಬಹುಜನ ಸಮಾಜ ಪಕ್ಷದ ಗಿರೀಶ್ ಚಂದ್ರ ಕೇಳಿದ್ದ ಪ್ರಶ್ನೆಗೆ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಹಾಯಕ ಮಂತ್ರಿ ರಾಮದಾಸ್ ಅಟಾವಳೆ ತಿಳಿಸಿದರು. 

2013ರಲ್ಲಿ ಕೈಯಿಂದಲೇ ಶೌಚಗುಂಡಿ ಸ್ವಚ್ಛ ಮಾಡುವುದನ್ನು ನಿಷೇಧಿಸಿ ಅಂತಾ ಪೌರ ಕಾರ್ಮಿಕರ ಪುನರ್ವಸತಿಗಾಗಿ ಕಾನೂನು ತರಲಾಗಿತ್ತು. 

ಆದರೆ ಅದು ಪರಿಣಾಮಕಾರಿಯಾಗಿ ಇನ್ನೂ ಜಾರಿಗೆ ಬಂದಿಲ್ಲ. ದೇಶದಲ್ಲಿ ಮಲ ಹೊರುವ ಪದ್ಧತಿ ಎಲ್ಲ ಕಡೆ ನಿಂತಿದೆ ಆದರೆ ವ್ಯಕ್ತಿಯೇ ಇಳಿದು ಶೌಚಗುಂಡಿ ಸ್ವಚ್ಛ ಮಾಡುವುದು ನಿಂತಿಲ್ಲ ಏಕೆ ಎಂಬ ಪ್ರಶ್ನೆಗೆ ಲೋಕ ಸಭೆಯಲ್ಲಿ ಉತ್ತರಿಸಲು ಯಾರಿಂದಲೂ ಸಾಧ್ಯವಾಗಲಿಲ್ಲ.