ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ನಾಯಕ್, ಕೋಶಾಧಿಕಾರಿ ಸ್ಥಾನಕ್ಕೆ ಪುಷ್ಪರಾಜ್, ರಾಜ್ಯ ಕಾರ್ಯಕಾರಿ ಸದಸ್ಯ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ಬಾಳ ಅವಿರೋಧ ಆಯ್ಕೆ

ಮಂಗಳೂರು: ದ.ಕ‌‌.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗೆ ಫೆ.27 ರಂದು ನಡೆಯುವ ಚುನಾವಣೆಗೆ ನಾಮಪತ್ರ ಹಿಂಪಡೆಯುವ ಸಮಯ ಕಳೆದಾಗ 22 ಸ್ಥಾನಕ್ಕೆ 37 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಶ್ರೀನಿವಾಸ ನಾಯಕ್ ಇಂದಾಜೆ, ಕೋಶಾಧಿಕಾರಿ ಸ್ಥಾನಕ್ಕೆ ಬಿ.ಎನ್.ಪುಷ್ಪರಾಜ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಜಗನ್ನಾಥ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ, ಕೋಶಾಧಿಕಾರಿ ಹಾಗು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾದ ಕಾರಣ ಈ 3 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.  ಪ್ರಧಾ‌ನ ಕಾರ್ಯದರ್ಶಿ ಒಂದು ಹುದ್ದೆಗೆ 2 ಅಭ್ಯರ್ಥಿಗಳು, 3 ಉಪಾಧ್ಯಕ್ಚ ಸ್ಥಾನಕ್ಕೆ 6 ಅಭ್ಯರ್ಥಿಗಳು, 3 ಕಾರ್ಯದರ್ಶಿ ಸ್ಥಾನಕ್ಕೆ 6 ಅಭ್ಯರ್ಥಿಗಳು, 15 ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ 23 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.

ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಇಬ್ರಾಹಿಂ ಅಡ್ಕಸ್ಥಳ ಮತ್ತು ಜಿತೇಂದ್ರ ಕುಂದೇಶ್ವರ ಕಣದಲ್ಲಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ  ರವಿಚಂದ್ರ ಭಟ್ (ಆರ್.ಸಿ.ಭಟ್), ಹರೀಶ್ ಮಾಂಬಾಡಿ, ರಾಜೇಶ್ ಪೂಜಾರಿ, ಭಾಸ್ಕರ ರೈ ಕಟ್ಟ, ಆತ್ಮಭೂಷಣ್ ಭಟ್, ಅನ್ಸಾರ್ ಇನೋಳಿ ಅಭ್ಯರ್ಥಿಗಳಾಗಿದ್ದಾರೆ.

ಕಾರ್ಯದರ್ಶಿ ಸ್ಥಾನಕ್ಕೆ ಗಂಗಾಧರ ಕಲ್ಲಪಳ್ಳಿ ಸುಳ್ಯ ವಿಜಯ್ ಕೋಟ್ಯಾನ್ ಪಡು, ಹರೀಶ್ ಮೋಟುಕಾನ, ಭುವನೇಶ್ವರ ಗೇರುಕಟ್ಟೆ, ಸಿದ್ದಿಕ್ ನೀರಾಜೆ, ಶರತ್ ಶೆಟ್ಟಿ ಕಣದಲ್ಲಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರ 15 ಸ್ಥಾನಕ್ಕೆ 23 ಅಭ್ಯರ್ಥಿಗಳು ಕಣದಲ್ಲಿದ್ದಾರೆ

ಅಶೋಕ್ ಶೆಟ್ಟಿ ಬಿ.ಎನ್. ರಾಜೇಶ್ ಕುಮಾರ್ ದಡ್ಡಂಗಡಿ, ಸತೀಶ್ ಇರಾ, ಲೋಕೇಶ್ ಪೆರ್ಲಂಪಾಡಿ, ಹಿಲರಿ ಕ್ರಾಸ್ತಾ ಪಿ, ರಾಜೇಶ್ ಶೆಟ್ಟಿ, ಮೋಹನ್ ಕುತ್ತಾರ್, ಭರತ್ ರಾಜ್, ಸತ್ಯವತಿ, ನರೇಂದ್ರ ಕೆರೆಕಾಡು, ನಿಶಾಂತ್ ಶೆಟ್ಟಿ ಕಿಲೆಂಬೂರು, ನವೀನ್‌ಕುಮಾರ್ ಶೆಟ್ಟಿ, ಸಂದೇಶ್ ಜಾರ, ಶೇಕ್ ಜೈನುದ್ದೀನ್ ಪುತ್ತೂರು, ಮಹಮ್ಮದ್ ಆರಿಫ್ ಪಡುಬಿದ್ರೆ, ದೇವಿಪ್ರಸಾದ್ ಬೆಳ್ತಂಗಡಿ, ಸುಖ್‌ಪಾಲ್ ಪೊಳಲಿ, ಶ್ರವಣ್‌ಕುಮಾರ್ ನಾಳ,  ವಿಲ್ಫ್‌ರ್ಡ್ ಡಿಸೋಜ, ಗಿರೀಶ್ ಅಡ್ಪಂಗಾಯ ಸುಳ್ಯ, ವಿಧ್ಯಾಧರ ಶೆಟ್ಟಿ, ಹರೀಶ್ ಕುಲ್ಕುಂದ, ವಿನಯಕೃಷ್ಣ ಪಿ ಅಭ್ಯರ್ಥಿಗಳಾಗಿ ಅಂತಿಮ ಕಣದಲ್ಲಿದ್ದಾರೆ.