ಮಂಗಳೂರು ಬಂದರಿನ ಅಡಿಕೆ ಕೂಲಿ ಕಾರ್ಮಿಕರಿಗೆ, ತಲೆಹೊರೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ನೀಡಲು ಹಿಂಜರಿಯುತ್ತಿದ್ದು, ಕಾರ್ಮಿಕರಿಗೆ ಮೋಸ ಮಾಡುತ್ತಿರುವುದರ ಬಗ್ಗೆ ಕಾರ್ಮಿಕ ಆಯುಕ್ತರಾದ ಶ್ರೀ ಶಿವ ಕುಮಾರ್‍ರವರಿಗೆ ಭೇಟಿ ಮಾಡಿ, ಕಾರ್ಮಿಕರ ಸಮ್ಮುಖದಲ್ಲಿ ಚರ್ಚಿಸಲಾಯಿತು ಮತ್ತು ಕಾರ್ಮಿಕರ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಲಾಯಿತು.
ಕಾರ್ಮಿಕರಿಗೆ ಸಿಗುವ ಮೂಲಭೂತ ಸೌಕರ್ಯವನ್ನು ನೀಡಲು ವಂಚಿಸುತ್ತಿರುವುದರ ಬಗ್ಗೆ ಗಮನಕ್ಕೆ ತಂದು, ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯವನ್ನು ಕೂಡಲೇ ಒದಗಿಸಲು 1 ವಾರದ ಗಡುವು ನೀಡಲಾಗಿದೆ ಎಂದು ದ.ಕ. ಕಾರ್ಮಿಕ ಪರಿಷತ್ ಕಾರ್ಮಿಕ ಸಂಘಟನೆಯ ಅಧ್ಯಕ್ಷ ಮತ್ತು ಮಾಜಿ ಶಾಸಕ ಐವನ್ ಡಿ ಸೋಜ ತಿಳಿಸಿದ್ದಾರೆ.
ಕಾರ್ಮಿಕ ಆಯುಕ್ತರಾದ ಶ್ರೀ ಶಿವ ಕುಮಾರ್ ಇವರು ಕಾರ್ಮಿಕರಿಗೆ ನ್ಯಾಯ ಒದಗಿಸುವುದಾಗಿ ಮತ್ತು ಇದರ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ತಲೆಹೊರೆ ಕಾರ್ಮಿಕ ಸಂಘಟನೆಯ ಕಾರ್ಯದರ್ಶಿ ಮತ್ತು ಮಾಜಿ ಕಾರ್ಪೊರೇಟರ್ / ಅಜೀಜ್ ಕುದ್ರೋಳಿ, ಫೆಸ್ಟಿವ್ ಸಂಘಟನೆಯ ಉಪಾಧ್ಯಕ್ಷರಾದ ಹನೀಫ್ ಬೆಂಗ್ರೆ ಮತ್ತು ಮತ್ತಿತ್ತರರು ಕಾರ್ಮಿಕ ಮುಖಂಡರು ಉಪಸ್ಥಿತರಿದ್ದರು.