ಮಂಗಳೂರು:  ಭಾರತ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯತ್ವ ನೋಂದವಣಿ ಅಭಿಯಾನ ನಡೆಯುತ್ತಿದ್ದು, ಪ್ರತಿ ಮತದಾರರ ಬೂತ್ನಲ್ಲಿ ಕನಿಷ್ಠ 100 ಮಂದಿಯನ್ನು ಸದಸ್ಯರಾಗಿ ನೋಂದವಣಿ ಮಾಡಬೇಕು ಎಂದು ಕೆಪಿಸಿಸ ಕಾರ್ಯಾಧ್ಯಕ್ಷ ಧ್ರುವ ನಾರಾಯಣ್ ಸೂಚನೆ ನೀಡಿದರು.

ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸದಸ್ಯತ್ವ ನೋಂದಣಿಕಾರರ ಉಸ್ತುವಾರಿ ಸಭೆಯಲ್ಲಿ ಮಾತನಾಡಿದರು.

ದೇಶದ ಇಂದಿನ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಒಲವು ವ್ಯಕ್ತವಾಗುತ್ತಿದೆ. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರಕಾರಗಳ ಆಡಳಿತ ಸಂಪೂರ್ಣ ಕೆಟ್ಟು ಕೆರಹಿಡಿದು ಹೋಗಿದೆ.  ಕಾಂಗ್ರೆಸ್ ಪಕ್ಷ ಸೇರಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಉತ್ಸುಕರಾಗಿದ್ದಾರೆ. ಆದುದರಿಂದ ಪಕ್ಷದ ತತ್ವ ನೀತಿಗಳನ್ನು ಒಪ್ಪಿಕೊಂಡು ಸದಸ್ಯರಾಗಲು ಬಯಸುವವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವಂತೆ ಧ್ರುವನಾರಾಯಣ್ ಸೂಚನೆ ನೀಡಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ವಿದ್ಯಾರ್ಥಿಗಳನ್ನು ಬೀದಿಗಳಿಸಲಾಗಿದೆ. ಅಂಬೇಡ್ಕರ್ ಮತ್ತು ನಾರಾಯಣ ಗುರು ಅವರಿಗೆ ಅವಮಾನ ಮಾಡಿರುವ ಪ್ರಕರಣಗಳಿಂದ ತನ್ನ ಮುಖಕ್ಕೆ ತಾನೇ ಮಸಿ ಬಳಿದುಕೊಂಡ ಬಿಜೆಪಿ ಈಗ ಅದನ್ನು ಮರೆಮಾಚಲು ಹಿಜಾಬ್ ವಿಚಾರವನ್ನು ಮುಂದಿಟ್ಟು ವಿದ್ಯಾರ್ಥಿ ಸಮೂಹದಲ್ಲಿ ಕೋಮುಭಾವನೆ ಬಿತ್ತುತ್ತಿದೆ. ಹಿಜಾಬ್ ವಿವಾದ ಬಿಜೆಪಿಗೆ ಮುಳುವಾಗಲಿದೆ ಎಂದವರು ಹೇಳಿದರು.

ಎಐಸಿಸಿ ಕಾರ್ಯದರ್ಶಿ ಪಿ.ವಿ.ಮೋಹನ್ ಅವರು ಬಿಜೆಪಿ ಸರಕಾರಗಳ ದುರಾಡಳಿತ, ಜನರು ಎದುರಿಸುತ್ತಿರುವ ಸಮಸ್ಯೆ ಮತ್ತು ಬಿಜೆಪಿ ಜನರನ್ನು ಭಾವನಾತ್ಮಕ ವಿಚಾರಗಳ  ಮೂಲಕ ಮರುಳು ಮಾಡುತ್ತಿದ್ದೆ ಎಂದು ಹೇಳಿದರು. 

ಕಾಂಗ್ರೆಸ್ ಮುಖಂಡ ಗಣೇಶ್ ಪೂಜಾರಿ ಅವರು ಪ್ರಚತಲಿತ ವಿಚಾರಗಳ ಬಗ್ಗ ಗಮನ ಸೆಳೆದರು. 

ಸಭೆಯಲ್ಲಿ ಹಿರಿಯ ಕಾಗ್ರೆಸ್ ನಾಯಕ ಇಬ್ರಾಹೀಂ ಕೋಡಿಜಾಲ್, ಮಾಜಿ ಮೇಯರ್ ಗಳಾದ ಶಶಿಧರ್ ಹೆಗ್ಡೆ, ಮಹಾಬಲ ಮಾರ್ಲ, ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ, ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, ಜಿಲ್ಲಾ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶಾಲೆಟ್ ಪಿಂಟೋ, ಜಿಲ್ಲಾ ಓಬಿಸಿ ಘಟಕದ ಅಧ್ಯಕ್ಷ ವಿಶ್ವಾಸ ದಾಸ್, ಜಿಲ್ಲಾ ಕಾರ್ಮಿಕ ಘಟಕಾಧ್ಯಕ್ಷ ಲಾರೆನ್ಸ್ ಡಿಸೋಜಾ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್,  ಕೆಪಿಸಿಸಿ ಸಂಯೋಜಕರುಗಳಾದ ವಸಂತ್ ಬರ್ನಾಡ್, ಪದ್ಮ ಪ್ರಸಾದ್ ಜೈನ್, ಪ್ರತಿಭಾ ಕುಳಾಯಿ, ಅಬ್ದುಲ್ ರವೂಫ್, ಸಂಶುದ್ದೀನ್ ಬಂದರ್, ಸಂಶುದ್ದೀನ್ ಕುದ್ರೋಳಿ,  ಕು.ಅಪ್ಪಿ, ಸುರೇಖಾ ಚಂದ್ರಹಾಸ್, ಗೀತಾ ಅತ್ತಾವರ, ಕೇಶವ ಮರೋಳಿ, ಗನೇಶ್ ಪೂಜಾರಿ, ಪದ್ಮನಾಭ ಅಮೀನ್, ಸಿ.ಎಂ ಮುಸ್ತಫಾ, ಟಿ.ಕೆ ಸುಧೀರ್, ಗಿರೀಶ್ ಶೆಟ್ಟಿ, ದುರ್ಗಾ ಪ್ರಸಾದ್, ಹಯಾತುಲ್ ಖಾಮಿಲ್, ಸಲೀಂ ಪಾಂಡೇಶ್ವರ, ಸುಹಾನ್ ಆಳ್ವ, ಶಬೀರ್ ಎಸ್, ಯೋಗೇಶ್ ನಾಯ್ಕ್, ಮೊಹಮ್ಮದ್ ಬಪ್ಪಳಿಗೆ, ಟಿ. ಹೊನ್ನಯ್ಯ, ಪ್ರೇಮ್ ಬಳ್ಳಾಲ್ ಭಾಗ್ ಮತ್ತಿತರರಿದ್ದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಅಧ್ಯಕ್ಷ ಶುಭೋದಯ ಆಳ್ವ ಕಾರ್ಯಕ್ರಮ ನಿರ್ವಹಿಸಿದರು.